ಹಾಸನ: ಕೊರೋನಾ ಮಹಾಮಾರಿ ಆವರಿಸಿ ಜನರು ಸಂಕಷ್ಟ ಎದುರಿಸುತ್ತಿರುವ ಹಿನ್ನಲೆಯಲ್ಲಿ ಹಾಸನದಲ್ಲೆ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಸಿಐಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಹುಲ್ ಕುಮಾರ್ ಶಹಾರವಾಡ್ ಅವರು ತಮ್ಮ ಸ್ವಂತ ಮೂಲಗಳಿಂದ ಕೊರೋನಾ ವಿರುದ್ಧ ಹೋರಾಡುವ ವಸ್ತುಗಳನ್ನು ಕಳುಹಿಸಿದ್ದಾರೆ.
ಕೊರೋನ ಮಹಾಮಾರಿಯಿಂದ ಇಡೀ ವಿಶ್ವವೆ ತತ್ತರಿಸಿರುವ ಇಂತ ಸಂದರ್ಭವನ್ನು ಹಲವರು ಜನರು ಹಣ ಗಳಿಸುವ ಉದ್ಯಮ ಮಾಡಿಕೊಂಡರೆ, ಕೆಲವೇ ಕೆಲವರು ಸಹಾಯದ ಅಮೃತ ಹಸ್ತ ಚಾಚಿದ್ದಾರೆ.
ಗಾಂಧಿಯವರು ಹೋದ ಮೇಲೆ ಅವರ ಆತ್ಮ ಭಾರತದಲ್ಲೇ ಇತ್ತಂತೆ. ಹೀಗೆ ಮಹಾನುಭಾವರು ತಮ್ಮ ಕಾರ್ಯಕ್ಷೇತ್ರದಲ್ಲಿ ತನು ಮನ ಧನವನ್ನು ಮುಡುಪಾಗಿಡುತ್ತಾರೆ. ಅಂತಹ ಕೋಟಿಗೊಬ್ಬರಲ್ಲಿ ಹಾಸನ ಜಿಲ್ಲಾ ಮಾಜಿ ಅರಕ್ಷಕ ಅಧೀಕ್ಷಕರಾದ ರಾಹುಲ್ ಕುಮಾರ್ ಶಹಾಪುರವಾಡ್ ರವರು ಒಬ್ಬರು. ಪ್ರಸ್ತುತ ಸಿ.ಐ.ಡಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಾಸನ ಜಿಲ್ಲೆಯು ಕೊರೋನ ಮಹಾಮಾರಿಯಲ್ಲಿ ರಾಜ್ಯದಲ್ಲೆ ಎರಡನೆ ಅತಿಹೆಚ್ಚು ರೋಗಿಗಳನ್ನು ಹೊಂದಿದೆ ಎಂದು ತಿಳಿದು ತೀವ್ರ ಮನನೊಂದರು. ದೇಹ ಮಾತ್ರ ಸಿ.ಐ.ಡಿ ಯಲ್ಲಿ ಕರ್ತವ್ಯ ನಿರ್ವಹಿಸಿದರೇ ಆತ್ಮ ಹಾಗೂ ಮನಸ್ಸು ಹಾಸನ ಜಿಲ್ಲೆಯಲ್ಲಿ. ಹೀಗಿರುವಾಗ ತನ್ನ ಜಿಲ್ಲೆಗೆ ಹೇಗಾದರೂ ನೆರವಾಗಬೇಕೆಂದು ನೆನೆದು ತಮ್ಮ ಸ್ವಂತ ಮೂಲಗಳಿಂದ ಇಟಿಛಿoxeಟ iಟಿರಿeಛಿಣioಟಿ ೨೦೧೦ ಸಂಖ್ಯೆಯಲ್ಲಿ ರಕ್ತದ ಹೆಪ್ಪುಗಟ್ಟುವಿಕೆ ತಡೆಯಲು, ziಡಿಛಿoಟಿiಚಿ ೪೨೦೦ ಪಾಕೆಟ್ಗಳು. ರೋಗ ನಿರೋಧಕ ಹೆಚ್ಚಿಸಲು, ಮೂರು ಸಾವಿರ ಛಿoಟಿಛಿoಡಿಜ ಛಿomಠಿಚಿಟಿಥಿ ಕೊರೋನ ಕಿಟ್ ಗಳು, ೮೬೪೦ ಜisiಟಿಜಿeಛಿಣಚಿಟಿಣ sಚಿಟಿiಣizeಡಿ ಠಿಚಿಛಿಞeಣ ಗಳು, ೨೪೦ hಚಿಟಿಜ sಚಿಟಿiಣizeಡಿ
ಈ ವಸ್ತುಗಳನ್ನು ಪಡೆದು ಹಾಸನ ಜಿಲ್ಲಾ ಅರೋಗ್ಯ ಅಧಿಕಾರಿಗಳಿಗೆ ಒದಗಿಸಿರುತ್ತಾರೆ. ಜೊತೆಗೆ ಈ ವಿಷಯ ಬಹಿರಂಗವಾಗಿ ಯಾರಿಗೂ ತಿಳಿಯಬಾರದು ಎಂದು ಹೇಳಿ ದೊಡ್ಡತನ ಮೆರೆದಿದ್ದಾರೆ.
ಮತ್ತೊಂದು ಕಡೆ ಅನೇಕರು ಒಂದೆರಡು ಮೂಟೆ ಅಕ್ಕಿ ಕೊಟ್ಟು ಸಮಾಜ ಜಾಲ ತಾಣದಲ್ಲಿ ದಾನ ಶೂರರಂತೆ ಫೋಟೋ ತೆಗೆಸುವ ಕೆಲವರಿರುವ ಈ ಕಾಲದಲ್ಲಿ. ಇಂತಹವರು ಸಮಾಜದಲ್ಲಿ ಹೊರ ಬರಬೇಕು. ಎಂಬುದೆ ನಮ್ಮ ಉದ್ದೇಶ. ಇವರ ಕಾರ್ಯಗಳು ಇತರರಿಗೆ ಮಾದರಿಯಾಗಬೇಕೆಂಬುದು ಸಾರ್ವಜನಿಕರ ಅಭಿಪ್ರಾಯ…