ಹಾಸನ: ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆವರಣದಲ್ಲಿ ಸಮಾಜಸೇವಕರಾದ ಟಿ.ಆರ್. ಪ್ರಸಾದ್ ಗೌಡ, ಲತಾ ಪ್ರಸಾದ್ ಇವರು ಕರ್ತ ಫೌಂಡೇಶನ್ ಸಹಯೋಗದಲ್ಲಿ ಫ್ರಂಟ್ ಲೈನ್ ವಾರಿಯರ್ಸ್ ಪತ್ರಕರ್ತರಿಗೆ ಆಹಾರದ ಕಿಟ್ ವಿತರಿಸಿದರು.
ನಂತರ ಮಾತನಾಡಿದ ಅವರು, ಇಂದು ಕೊರೋನಾ ಆವರಿಸಿ ಅನೇಕ ಸಾವು-ನೋವುಗಳ ಕಾಣುತ್ತಿದ್ದೇವೆ. ಈ ಸಮಯದಲ್ಲಿ ದಿನದ ೨೪ ಗಂಟೆಯೂ ಕೆಲಸದಲ್ಲಿ ನಿರತರಾಗಿ ಕೆಲಸ ಮಾಡುತ್ತಾ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನು ಇವರ ಸೇವೆಯನ್ನು ಪರಿಗಣಿಸಿ ಸರಕಾರವು ಇಂದು ಫ್ರಂಟ್ ಲೈನ್ ವಾರಿಯರ್ಸ್ ಎಂದು ಪತ್ರಕರ್ತರ ಎಲ್ಲಾರನ್ನು ಘೋಷಣೆ ಮಾಡಿದೆ. ಇವರ ಬಗ್ಗೆಯೂ ನಾವು ಗಮನವಹಿಸಿ ಸೇವೆ ಮಾಡುವ ನಿಟ್ಟಿನಲ್ಲಿ ಆಹಾರದ ಕಿಟ್ ಗಳನ್ನು ನೀಡಲಾಗುತ್ತಿದೆ ಎಂದರು.
ಇದೆ ವೇಳೆ ಜೆಡಿಎಸ್ ಮುಖಂಡರಾದ ಟಿ.ಆರ್. ಪ್ರಸಾದ್ ಗೌಡ, ಕರ್ತ ಪೌಂಢೇಶನ್ ಮ್ಯಾನೇಜಿಂಗ್ ಟ್ರಸ್ಟಿ ಲತಾ ಪ್ರಸಾದ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಪ್ರಸನ್ನಕುಮಾರ್, ಪ್ರಧಾನ ಕಾರ್ಯದರ್ಶಿ ಕೆ.ಜಿ. ಸುರೇಶ್, ಉಪಾಧ್ಯಕ್ಷ ಹಿಂದು ಪ್ರಕಾಶ್, ನಗರ ಕಾರ್ಯದರ್ಶಿ ಸಿ.ಬಿ. ಸಂತೋಷ್, ಅತೀಖುರ್ ರೆಹಮನ್, ಜ್ಞಾನದೀಪ ದಿನಪತ್ರಿಕೆ ಸಂಪಾದಕ ರಾಜೇಶ್, ಅಮೋಘವಾಣಿ ದಿನಪತ್ರಿಕೆ ಸಂಪಾದಕ ರಂಗಸ್ವಾಮಿ ಇತರರು ಪಾಲ್ಗೊಂಡಿದ್ದರು.