ಬೇಲೂರು : ಕೊರೊನಾ ಸಂದರ್ಭ ಸಾರ್ವಜನಿಕರು ಕೆಲವೊಂದು ನಿಯಮಗಳ ಪಾಲನೆ ಮಾಡಿದರೆ ಅದು ಪೊಲೀಸರಿಗೆ ನೀಡುವ ದೊಡ್ಡ ಗೌರವ ಎಂದು ಪಿಎಸ್‍ಐ ಎಸ್.ಜಿ.ಪಾಟೀಲ್ ಹೇಳಿದರು.
ಇಲ್ಲಿನ ಜಯಕರ್ನಾಟಕ ಸಂಘಟನೆಯ ತಾಲ್ಲೂಕು
ಅಧ್ಯಕ್ಷ ಸನ್ಯಾಸಿಹಳ್ಳಿರಾಜಣ್ಣ ಹಾಗೂ ಜಿಲ್ಲಾಧ್ಯಕ್ಷ ಸೋಮೇಶ್
ನೇತೃತ್ವದಲ್ಲಿ ಪೊಲೀಸರಿಗೆ ಮಧ್ಯಾಹ್ನದ ಬೋಜನಾ ವ್ಯವಸ್ಥೆ
ಮಾಸ್ಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಕೊರೊನಾ ಎನ್ನುವುದು ಮನುಷ್ಯನ ನೆಮ್ಮದಿಯ
ಬದುಕನ್ನೇ ಕಿತ್ತುಕೊಳ್ಳುತ್ತಿದೆ. ಇದರ ವಿರುದ್ಧ ಹೋರಾಟ
ನಡೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮಾಸ್ಕ್
ಧರಿಸದಿರುವುದು, ಸುಕಾಸುಮ್ಮನೆ ಓಡಾಡುವುದು, ಅಂಗಡಿಗಳ
ಮುಂದೆ ಅಂತರ ಕಾಯ್ದುಕೊಳ್ಳದಿರುವುದು
ಮಾಡಬಾರದೆಂದು ಮನವಿ ಮಾಡಿದರು. ಅನ್ನದಾನದ ಮೂಲಕ
ಪೊಲೀಸರಿಗೆ ಸಹಕಾರ ನೀಡುತ್ತಿರುವುದಕ್ಕೆ ಜಯಕರ್ನಾಟಕ
ಸಂಘಟನೆಗೆ ಕೃತಜ್ಞತೆ ಸಲ್ಲಿಸಿದರು.
ತಾಲ್ಲೂಕು ಅಧ್ಯಕ್ಷ ಸನ್ಯಾಸಿಹಳ್ಳಿರಾಜಣ್ಣ, ಕೊರೊನಾ
ಸಂದರ್ಭ ಶ್ರಮವಹಿಸಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಅವರಿಗೂ ಕುಟುಂಬ ಸದಸ್ಯರು ಇರುತ್ತಾರೆ. ಪೊಲೀಸರಿಗೆ
ಸಾರ್ವಜನಿಕರ ಸಹಕಾರ ಅಗತ್ಯವಿದೆ. ಮಳೆ, ಬಿಸಿಲು, ಹಗಲು, ರಾತ್ರಿ ಎನ್ನದೆ ಕಾರ್ಯನಿರ್ವಹಿಸುವ ಪೊಲೀಸರ ಸೇವೆ ಮನಗಂಡು ಸದಸ್ಯರೆಲ್ಲರ ಸಹಕಾರದಿಂದ ಪುಟ್ಟದಾದ ಸೇವಾಕಾರ್ಯ ನಡೆಸಿದ್ದೇವೆಂದರು.
ಜಿಲ್ಲಾ ಜಯಕರ್ನಾಟಕ ಅಧ್ಯಕ್ಷ ಸೋಮೇಶ್ ಮಾತನಾಡಿ,
ಪೊಲೀಸರ ಸೇವೆ ನಿಜಕ್ಕೂ ಸ್ಮರಣೀಯ. ಪೊಲೀಸರು ಜೀವದ
ಹಂಗುತೊರೆದು ಜನತೆಯ ರಕ್ಷಣೆ ಮಾಡುತ್ತಿದ್ದಾರೆ.
ಪೊಲೀಸರ ಸೇವಾಕಾರ್ಯಕ್ಕೆ ಜನತೆ ಸಹಕಾರ ನೀಡಬೇಕೆಂದು
ಕೋರಿದರು. ಕಾರ್ಯಾಧ್ಯಕ್ಷ ಲಕ್ಷ್ಮಣ್,
ತಾ.ಉಪಾಧ್ಯಕ್ಷ ಸಯ್ಯದ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ
ಅಕ್ಮಲ್, ಸಾಂಸ್ಕøತಿಕ ಘಟಕದ ಅಧ್ಯಕ್ಷ ಬಂಡೆಮಂಜು, ಆಟೋ
ಘಟಕದ ಅಧ್ಯಕ್ಷ ಕೋನೇರ್ಲು ಲಕ್ಷ್ಮಣ್, ವಿದ್ಯಾರ್ಥಿ ಘಟಕದ
ಅಧ್ಯಕ್ಷ ಶ್ರೇಯಸ್ ಪ್ರಮುಖರಾದ ಪಾಪಣ್ಣ, ನವೀನ್, ದಿನೇಶ್,
ಲೋಕೇಶ್, ಕಾಂತರಾಜು, ಎಎಸ್‍ಐ ಮೂಡ್ಲಗಿರಿಗೌಡ ಮತ್ತು ಸಿಬ್ಬಂದಿ ಇದ್ದರು.
