ಉಳಿದ ೨ ವರ್ಷ ನಾನೇ ಸಿಎಂ ಘಂಟ ಘೋಷವಾಗಿ ಹೇಳಿದ ಸಿಎಂ ಯಡಿಯೂರಪ್ಪ

ಹಾಸನ: ಉಳಿದಿರುವ ಎರಡು ವರ್ಷ ನಾನೇ ಸಿಎಂ ಆಗಿ ಮುಂದುವರಿಯುವುದಾಗಿ ಘಂಟಾ ಘೋಷವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾಜಿ ಸಚಿವ ಹೆಚ್.ಡಿ. ರೇವಣ್ಣನವರ ಮುಂದೆ ಹೇಳಿದರು.



       ನಗರದ ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ಕೊರೋನಾ ಕುರಿತು ಸಭೆ ನಡೆಸಿ ಮುಗಿದ ಬಳಿಕ ಹೇಮಾವತಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಉಳಿದಿರುವ ಎರಡು ವರ್ಷ ಮುಖ್ಯಮಂತ್ರಿ ಆಗಿ ಒಳ್ಳೆ ಕೆಲಸ ಮಾಡುವ ಭರವಸೆ ಕೊಡುತ್ತೇನೆ. ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಇಂಜಾರ್ಜ್ ಇದ್ದಾರೆ. ಬರುತ್ತಾರೆ ಎಂದರು. ಅರುಣ್ ಸಿಂಗ್ ಮಾತಿನಿಂದ ನನಗೆ ನೂರಕ್ಕೆ ನೂರು ಬಲ ಬಂದಿದೆ. ಪ್ರಧಾನಿಗಳು ಮತ್ತು ಅಮಿತ್‌ಷಾ ಅವರ ಪ್ರೀತಿ ವಿಶ್ವಾಸ ಉಳಿಸಿಕೊಳ್ಳುವ ಕೆಲಸ ಮಾಡುತ್ತೇನೆ ಮಾಧ್ಯಮದವರು ಸಹಕರಿಸಿ ಎಂದು ಕೋರಿದರು.

       ಪ್ರಧಾನಿ ಹೆಚ್.ಡಿ. ದೇವೇಗೌಡರ ಅಪೇಕ್ಷೆಯಂತೆ ಹಾಸನ ಬೂವನಹಳ್ಳಿ ಬಳಿ ಏರ್ಪೋರ್ಟ್ ಹಾಸನದಲ್ಲಿ ಕಾಮಗಾರಿ ಪ್ರಾರಂಭ ಮಾಡುವುದಕ್ಕೆ ನಾಳೆ ಇಲ್ಲವೇ ನಾಡಿದ್ದು ದೇವೇಗೌಡರ ಬಳಿ ಮಾತನಾಡುತ್ತೇನೆ. ಯಾರಿಗೆ ಆ ಕೆಲಸ ಕೊಡಬೇಕು ಎಂದು ಸೂಚಿಸುತ್ತಾರೆ ಅವರಿಗೆ ಕೊಡಲಾಗುವುದು. ಹಣಕಾಸುಗಳ ಸಮಸ್ಯೆ ಯಾವುದು ಇಲ್ಲ. ತಕ್ಷಣದಲ್ಲಿ ಹಾಸನದ ಏರ್ ಪೋರ್ಟ್ ಕೆಲಸ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿ ಗ್ರೀನ್ ಸಿಗ್ನಲ್ ಕೊಟ್ಟರು. ಕೋವಿಡ್‌ನಿಂದ ಜನ ಸಾವಿಗೀಡಾಗುತ್ತಿರುವುದಕ್ಕೆ ಸರ್ಕಾರವೇ ಕಾರಣ ಎಂಬ ರೇವಣ್ಣ ಹೇಳಿಕೆ ವಿಚಾರವಾಗಿ ಮಾತನಾಡಿದ ಮುಖ್ಯಮಂತ್ರಿಗಳು, ಜವಬ್ದಾರಿಯುತ ಶಾಸಕರಾಗಿ ಬೇಜವಬ್ದಾರಿ ಹೇಳಿಕೆ ನೀಡಬಾರದು. ಅವರೂ ಕೂಡ ಶಾಸಕರಾಗಿ ಕೆಲಸ ನಿರ್ವಹಿಸಬೇಕಿದೆ. ಅವರ ಕೆಲಸ ಸಮರ್ಪಕವಾಗಿ ನಿರ್ವಹಿಸದೆ ಬೇರೆಯವರ ಬಗ್ಗೆ ಬೆಟ್ಟು ತೋರಿಸಬಾರದು ಎಂದು ಅಸಮಧಾನವ್ಯಕ್ತಪಡಿಸಿದರು. ಕೋವಿಡ್ ಬಗ್ಗೆ ಸುಳ್ಳು ಲೆಕ್ಕ ಕೊಡುತ್ತಿದ್ದಾರೆ ಎಂಬ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ಕೋವಿಡ್ ಸುಳ್ಳು ಲೆಕ್ಕ ಕೊಡುತ್ತೇವೆ ಅಂದಿದ್ದು ಯಾರು..? ಇಂತಹ ಲೆಕ್ಕ ಕೊಡುವುದರಿಂದ ನಮಗೇನು ಲಾಭವಿದೆ ಎಂದು ಪ್ರಶ್ನೆ ಮಾಡಿದರು. ಇದರಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆ ಇಲ್ಲ ಎಂದು ರಮೇಶ್ ಜಾರಕಿಹೋಳಿ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

     ಕೊರೋನಾ ಆವರಿಸಿ ಅಭಿವೃದ್ಧಿ ಕೆಲಸಗಳು ಸ್ಥಗಿತವಾಗಿತ್ತು. ಹಣ ಬಿಡುಗಡೆ ಮಾಡಿ ಕೂಡಲೇ ಕೆಲಸ ಪ್ರಾರಂಭಿಸಲು ಸೂಚಿಸಲಾಗುವುದು. ರಾಜ್ಯದಲ್ಲಿ ಹಣಕಾಸು ಸ್ಥಿತಿ ಹದಗೆಟ್ಟಿದೆ. ಆದರೂ ಬಡವರಿಗೆ ತೊಂದರೆ ಆಗಬಾರದು ಎಂಬ ದೃಷ್ಠಿಯಲ್ಲಿ ಅವರ ಅನುಕೂಲಕ್ಕಾಗಿ ಪ್ಯಾಕೇಜ್ ಘೋಷಣೆ ಮಾಡಿದ್ದೇನೆ. ಮೂರನೆ ಅಲೆ ಬಗ್ಗೆ ಯಾವುದೇ ಅನಾಹುತ ಆಗದಂತೆ ಈಗಾಗಲೇ ಸಿದ್ಧತೆ  ಮಾಡುತ್ತಿದ್ದೇವೆ ಎಂದರು. 

     ಸಕಲೇಶಪುರ-ಆಲೂರು ಭಾಗಗಳಲ್ಲಿ ಕಾಡಾನೆ ಕಾಟದಿಂದ ಕಳೆದ ಮರ‍್ನಾಲ್ಕು ತಿಂಗಳಲ್ಲಿ ೭ ಜನರು ಸಾವನಪ್ಪಿದ್ದಾರೆ. ಇದನ್ನು ತಡೆಗಟ್ಟಲು ಹಾಸನದ ಗಡಿ ಭಾಗವಾದ ಕೊಡಗಿನಲ್ಲಿ ಶಾಶ್ವತ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗುವುದು. ವ್ಯಾಕ್ಸಿನೇಷನನ್ನು ದೊಡ್ಡ ಪ್ರಮಾಣದಲ್ಲಿ ಕೊಟ್ಟರೆ ಮೂರನೇ ಅಲೆಯನ್ನು ತಪ್ಪಿಸಬಹುದಾಗಿದೆ ಎಂದು ಹೇಳಿದರು.

     ಇದೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ, ಆರೋಗ್ಯಾ ಸಚಿವರಾದ ಸುಧಾಕರ್, ಶಾಸಕ ಪ್ರೀತಮ್ ಜೆ. ಗೌಡ, ಮಾಜಿ ಸಚಿವ ಹೆಚ್.ಡಿ. ರೇವಣ್ಣ ಉಪಸ್ಥಿತರಿದ್ದರು.


Post a Comment

Previous Post Next Post