ಜಮೀನಿನ ವಿಚಾರ ಕೊಲೆಯಲ್ಲಿ ಅಂತ್ಯ.

ಬೇಲೂರು: ತಾಲೂಕಿನ ಚಿನ್ನೆನಹಳ್ಳಿ ಗ್ರಾಮದಲ್ಲಿ ಗುರುವಾರ ಸಂಜೆ ೭-೩೦ ರ ಸಮಯದಲ್ಲಿ  ಸಿ ಹೆಚ್  ಚನ್ನೇಗೌಡ ಹಾಗೂ ತಮ್ಮ ಸಹೋಧರ  ರಾಜೇಗೌಡರ ಜಮೀನಿನ ವಿಚಾರದಲ್ಲಿ ಸಣ್ಣ ವಿಚಾರಕ್ಕೆ ಜಗಳ ನಡೆದಿತ್ತು.ಅದರಂತೆ ಚನ್ನೇಗೌಡರ ಪತ್ನಿ ಮಾಜಿ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಮಂಜುಳಾ (೫೨)  ತನ್ನ ಜಮೀನಿಗೆ ತೆರಳಿದ ಸಮಯದಲ್ಲಿ ರಾಜೇಗೌಡರ ಪುತ್ರ ಗೌತಮ್ ದೊಣ್ಣೆ ಯಿಂದ ತಲೆಗೆ ಹೊಡೆದ ಪರಿಣಾಮವಾಗಿ ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದನ್ನು ಸ್ಥಳೀಯರು ಕಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಉಸಿರೆಳೆದಿದ್ದು ಆರೋಪಿ ಗೌತಮ್ ತಲೆ ಮರೆಸಿಕೊಂಡಿದ್ದು,ಬೇಲೂರು ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಕೇವಲ  ನೀರಿನ ಪೈಪಿನ ವಿಚಾರಕ್ಕೆ ತನ್ನ ದೊಡ್ಡಮ್ಮನನ್ನೇ ಕೊಲೆಗೈದ ಆರೋಪಿಯನ್ನು ಬಂಧಿಸಲು ಪೋಲೀಸರು ಬಲೆ ಬೀಸಿದ್ದಾರೆ.

Post a Comment

Previous Post Next Post