ನಾಳೆ ಯಿಂದ ಕೆ.ಎಸ್.ಅರ್.ಟಿ.ಸಿ ಬಸ್ ಸಂಚಾರ ಆರಂಭ

 ಹಾಸನ: ಹಾಸನದಿಂದ ಮೈಸೂರು ಜಿಲ್ಲೆಗೆ ಹೊರತು ಪಡಿಸಿ ಎಲ್ಲಾ ಜಿಲ್ಲೆಗಳಿಗೆ ಹೊರಡಲಿದೆ ಬಸ್ ಗಳು.

ಹಾಸನ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಗೆ ಸಂಚಾರ ಇಲ್ಲ.

ಬಸ್ ನಲ್ಲಿ ಶೇ 50 ರಷ್ಟು ಮಾತ್ರ ಪ್ರಯಾಣಿಕರು ಪ್ರಯಾಣಿಸಲು ಮಾತ್ರ ಅವಕಾಶ.

ಕಳೆದ 55 ದಿನಗಳಿಂದ ಶೆಡ್ ನಲ್ಲಿ ನಿಂತಿರುವ ಬಸ್ ಗಳು ಸೋಮವಾರ ಬೆಳಿಗ್ಗೆ ರಸ್ತೆಗೆ ಇಳಿಯಲಿವೆ...


ಬಸ್ ಸಂಚಾರವು ಶೇ. 50 ಪ್ರಯಾಣಿಕರಿಗೆ ಮಿತಿಗೊಳಿಸಿ ಸಂಚಾರಕ್ಕೆ ಅನುಮತಿಸಿದೆ.  ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಕೇಂದ್ರದಿಂದ ಬೆಂಗಳೂರು, ಮೈಸೂರು, ಮತ್ತು ಜಿಲ್ಲೆಯ ಎಲ್ಲ ತಾಲೂಕುಗಳಿಗೂ ಬಸ್ ಸಂಚಾರವನ್ನು ಜೂನ್ 21 ರಂದು ಬೆಳಗ್ಗೆ ಆರು ಗಂಟೆಯಿಂದ ಆರಂಭಿಸಲಾಗುತ್ತದೆ. 


ಹಾಸನ ಬಸ್ ನಿಲ್ದಾಣದ ವ್ಯವಸ್ಥಾಪಕ ಮಂಜುನಾಥ್ ಮಾತನಾಡಿ, ಜೂನ್ 21 ರಿಂದ ಬಸ್ ಸಂಚಾರ ಆರಂಭ ಮಾಡಲಾಗುವುದು. ಪ್ರಯಾಣಿಕರು ಕೋವಿಡ್ ನಿಯಮದಂತೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರಯಾಣ ಮಾಡಬೇಕಿದೆ. ಎಲ್ಲ ಬಸ್ಸುಗಳನ್ನು ಬಿಡುವುದಿಲ್ಲ, ಪ್ರಯಾಣಿಕರ ಸಂಖ್ಯೆಗೆ ತಕ್ಕಂತೆ ಬಸ್ ಬಿಡಲಾಗುವುದು ಎಂದು ತಿಳಿಸಿದರು.

Post a Comment

Previous Post Next Post