ಕರವೇ ಅಧ್ಯಕ್ಷ ಚಂದ್ರಶೇಖರ್ ಜನುಮದಿನದ ಅಂಗವಾಗಿ ಬೇಲೂರು ಪುರಸಭೆ ಪೌರಕಾರ್ಮಿಕರಿಗೆ ಊಟ ವಿತರಣೆ

 ಬೇಲೂರು : ಬೇಲೂರು ತಾಲ್ಲೂಕು ಕರವೇ ಅಧ್ಯಕ್ಷ ಚಂದ್ರಶೇಖರ್ ಜನುಮದಿನದ ಅಂಗವಾಗಿ ಇಲ್ಲಿನ ಪುರಸಭೆಯ ಪೌರಕಾರ್ಮಿಕರಿಗೆ ಮಧ್ಯಾಹ್ನದ ಊಟವನ್ನು ನೀಡಲಾಯಿತು.

ಊಟದ ಪ್ಯಾಕೇಟ್ ಅನ್ನು ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ ವಿತರಿಸಿ ಮಾತನಾಡಿ, ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವವನ್ನು ಬೇರೆ ರೀತಿಯಲ್ಲಿ ಆಚರಿಸಿಕೊಳ್ಳುವುದು ವಾಡಿಕೆ. ಆದರೆ ಚಂದ್ರಶೇಖ ಪೌರ ಕಾರ್ಮಿಕರಿಗೆ ಆಹಾರವನ್ನು ನೀಡಿ ಆಚರಿಸಿಕೊಂಡಿರುವುದು ಸಂತೋಷದ ವಿಚಾರ.

 ಕೊರೊನಾ ಸೋಂಕಿನ ಬಗ್ಗೆ ಜನತೆ ಎಚ್ಚರದಿಂದ ಇರುವಂತೆ ಮನವಿ ಮಾಡಿದರು. ಚಂದ್ರಶೇಖರ್ ಮಾತನಾಡಿದರು. ಇದೆ ಸಂದರ್ಭ ಚಂದ್ರಶೇಖರ್ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.ಪುರಸಭೆಯ ಸದಸ್ಯರು, ಪ್ರಮುಖರು, ಸಂಘಟನೆ ಪದಾಧಿಕಾರಿಗಳು ಹಾಜರಿದ್ದರು

Post a Comment

Previous Post Next Post