ನೂರಾರು ಕೋಟಿ ಎಚ್ ಆರ್ ಪಿ ಭೂ ಹಗರಣ: ಭ್ರಷ್ಟರ ಮೊದಲ ಬೇಟೆ:


ಐವರು ಅಧಿಕಾರಿಗಳ ಬಂಧನ, ವಿಚಾರಣೆ: 

7824 ಎಕರೆಯ, 11736000000 ರೂ ಹಗರಣ



ಸಕಲೇಶಪುರ:  ನೂರಾರು ಕೋಟಿ

ಎಚ್ ಆರ್ ಪಿ  ಭೂ ಹಗರಣಕ್ಕೆ ಸಂಬಂದಿಸಿದಂತೆ  ವಾರಪತ್ರಿಕೆ  ಪತ್ರಿಕೆಯ ವರದಿಗಾರ  ಎಸ್‌.ಕೆ. ಪ್ರದೀಪ್‌ಕುಮಾರ್‌  ಎಂಬಾತನನ್ನು

ಪೋಲಿಸರು ಬಂದಿಸಿದ್ದಾರೆ.

7824 ಎಕ್ಕರೆಯ ಅಂಕಿ ಸಂಖ್ಯೆಗೆ 

ಸಿಗದ ಬೃಹತ್ ಭ್ರಷ್ಟಾಚಾರ ವಾಗಿದ್ದು ಇಂದಿನ ಮಾರುಕಟ್ಟೆ ಬೆಲೆಗೆ ಹೋಲಿಸಿದರೆ ಮೌಲ್ಯ ಬೆಚ್ಚಿಬೀಳಿಸುತ್ತದೆ. 

ಒಂದು ಎಕರೆಗೆ 15 ಲಕ್ಷ ರೂಪಾಯಿಯಂತೆ 78 24 ಎಕರೆಗೆ ಕ್ಯಾಲುಕುಲೇಟರ್ ನಲ್ಲಿ ಲೆಕ್ಕ ಹಾಕುತ್ತಾ ಹೋದರೆ ಅಂಕಿಗಳೇ ಸಿಗುವುದಿಲ್ಲ ಇದಕ್ಕೆ ನೀವು  ಗೂಗಲ್ ಕ್ಯಾಲುಕುಲೇಟರ್ ಬಳಸಿದರೆ‌

11736000000 ರೂ  ಲೆಕ್ಕ ಸಿಗುತ್ತದೆ.


ಈ ಭ್ರಷ್ಟಾಚಾರದಲ್ಲಿ ಅಧಿಕಾರಿಗಳ ಹಾಗೂ ದಲ್ಲಾಳಿಗಳ ಪಾತ್ರ ಪ್ರಮುಖವಾಗಿದ್ದು,ಪ್ರಕರಣದ ಪ್ರಥಮ ಆರೋಪಿಯಾಗಿ ಪ್ರದೀಪ್ ಕುಮಾರ್ ನನ್ನು 

ಬಂಧಿಸಲಾಗಿದೆ 


ಈತನ ಹೇಳಿಕೆಯ ಮೇರೆಗೆ ಇತರೆ 

ಕೆಲವು ಅಧಿಕಾರಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ. 


ಪ್ರದೀಪ್ ಕುಮಾರ್ ಮೂಲತಃ ಸಕಲೇಶಪುರದ ವಾಸಿಯಾಗಿದ್ದು ಹೆಚ್ ಆರ್ ಪಿ ಭೂದಾಖಲೆಗಳನ್ನು

ಸೃಷ್ಟಿಸಿ ಭೂಮಿಯನ್ನು ಗುರುತುಮಾಡಿ ನಂತರ ಮಾರಾಟ ಮಾಡಿ ಲೆಕ್ಕಕ್ಕೆ ಸಿಗದಷ್ಟು ಹಣ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ವಾರಪತ್ರಿಕೆಯಲ್ಲಿ ವರದಿಗಾರನಾಗಿ ಅಧಿಕಾರಿಗಳ ಸಂಪರ್ಕ ಸಾಧಿಸುತ್ತಾ 

ಅಧಿಕಾರಿಗಳನ್ನು ದೌರ್ಬಲ್ಯ ಅರಿತು ಅವರ ಸರ್ವ

ಆಸೆ-ಆಕಾಂಕ್ಷೆಗಳನ್ನು ಪೂರೈಸುತ್ತಾ 

ಹೆಚ್ ಆರ್ ಪಿ ದಾಖಲೆಗಳಿಗೆ ಈ ಹಾಕಿಸಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ 


ಇತ್ತೀಚಿಗೆ ಕರ್ನಾಟಕ ಪತ್ರಕರ್ತರ ಸಂಘ ಎಂಬ ಹೆಸರಿನ ಸಂಘಟನೆಯ ಜಿಲ್ಲಾ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದ  ಜಿಲ್ಲೆಯ ತಾಲೂಕು

ಕೇಂದ್ರಗಳಲ್ಲಿ ಸಂಘಟನೆಯ ಶಾಖೆಗಳನ್ನು ತೆರೆದು 

ಅಧಿಕಾರಿಗಳನ್ನು ಪೀಡಿಸುತ್ತಿದ್ದ ಎಂದು ಹೇಳಲಾಗುತ್ತಿದೆ. 


ಜಿಲ್ಲೆಯಲ್ಲಿ ಭ್ರಷ್ಟಾಚಾರ ನಡೆಸಲು ಒಂದು ವ್ಯವಸ್ಥಿತ ತಂಡವನ್ನೇ ಪತ್ರಿಕೋದ್ಯಮದ ಹೆಸರಿನಲ್ಲಿ 

ಸ್ಥಾಪಿಸಿ ಕೊಂಡು ಈ ಮೂಲಕ ತನ್ನ ಅಕ್ರಮಗಳನ್ನು ಮುಚ್ಚಿ ಕೊಳ್ಳಲು ಮುಂದಾಗಿದ್ದ  ಈತನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿರುವ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿ ಮತ್ತೆ ವಿಚಾರಣೆಗೆ ಪಡೆದಿದ್ದಾರೆ.


ಪ್ರಕರಣದ ವಿವರ:

ಹೇಮಾವತಿ ಜಲಾಶಯ ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ  8  ಎಕರೆ ಭೂಮಿ ಮಂಜೂರು ಮಾಡಿಸಿಕೊಡುತ್ತೇನೆಂದು ತಾಲ್ಲೂಕಿನ ಬಾಗೆ ಗ್ರಾಮದ ರೈತ ಶಾಂತಕುಮಾರ್‌ 20 ಲಕ್ಷ ರೂಪಾಯಿ ಪಡೆದು,  ಎಚ್‌ಆರ್‌ಪಿ ವಿಶೇಷ ಭೂ ಸ್ವಾಧೀನಾಧಿಕಾರಿಯ ಸಹಿ ನಕಲಿ ಮಾಡಿದ  ಅಧಿಕೃತ ಜ್ಞಾಪನಾ ಪತ್ರ (ಓಎಂ) ನೀಡಿ ವಂಚನೆ ಮಾಡಿರುವ ಬಗ್ಗೆ  ಇ‌ಲ್ಲಿಯ ಪಟ್ಟಣ ಪೊಲೀಸ್‌ ಠಾಣೆಯಲ್ಲಿ  ಮೊಖದ್ದಮೆ ದಾಖಲಾಗಿದ್ದು, ರೆವಿನ್ಯೂ ಇನ್‌ಸ್ಪೆಕ್ಟರ್‌ ಮಂಜುನಾಥ್ 

ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.


ಸಕಲೇಶಪುರದಲ್ಲಿ ಕಂಪ್ಯೂಟರ್‌ ಸೆಂಟರ್ ನಡೆಸುತ್ತಿದ್ದು, ಇದೀಗ ಹಾಸನದಲ್ಲಿ ವಾಸವಾಗಿರುವ ಎಸ್‌.ಕೆ. ಪ್ರದೀಪ್‌ಕುಮಾರ್‌ ಹಾಗೂ ಯಸಳೂರು ರೆವಿನ್ಯೂ ಇನ್‌ಸ್ಪೆಕ್ಟರ್‌ ಮಂಜುನಾಥ್ ಇವರನ್ನು ಪಟ್ಟಣ ಪೊಲೀಸ್‌ ಠಾಣೆ ಪಿಎಸ್‌ಐ ಬಸವರಾಜ್ ಚಿಂಚೊಳ್ಳಿ ಶುಕ್ರವಾರ ಬಂಧಿಸಿದ್ದಾರೆ. 

ಪ್ರದೀಪ್‌ ಕುಮಾರ್‌ ವಿರುದ್ಧ ವಂಚನೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣಗೆ ಪೊಲೀಸರ ವಶಕ್ಕೆ ಪಡೆದುಕೊಳ್ಳಲಾಗಿದೆ.

ಈ ಅಕ್ರಮ ಭೂಮಿ ಮಂಜೂರು ವಿಚಾರದಲ್ಲಿ ರೆವಿನ್ಯೂ ಇನ್‌ಸ್ಪೆಕ್ಟರ್‌ ಮಂಜುನಾಥ್‌ ಅವರಿಗೆ ಸುಮಾರು 40 ಲಕ್ಷ ರೂಪಾಯಿ ನೀಡಿದ್ದೇನೆ, ಭೂ ಹಗರಣದಲ್ಲಿ  ಅವರ ಪಾತ್ರವೂ ಇದೆ ಎಂದು ಪ್ರದೀಪ್‌ ಕುಮಾರ್‌ ಪೊಲೀಸರ ವಿಚಾರಣೆ ವೇಳ ಬಾಯ್ಬಿಟ್ಟಿದ್ದಾನೆ. ತನಿಖೆ ಚುರುಕುಗೊಳಿಸಿರುವ ಪೊಲೀಸರು ಆರ್‌ ಐ ಮಂಜುನಾಥ್‌ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ, ಅವರ ಆಸ್ತಿ ವಿವರ, ಬ್ಯಾಂಕ್‌ ಖಾತೆ ನಂಬರ್‌ ಎಲ್ಲವನ್ನೂ ಸಂಗ್ರಹಿಸಿದ್ದಾರೆ.   


8 ಎಕ್ಕರೆ ಗೆ 20 ಲಕ್ಷ ರೂ: 

ಎಸ್‌.ಕೆ. ಪ್ರದೀಪ್‌ಕುಮಾರ್‌   ತಾಲ್ಲೂಕಿನ ಬಾಗೆ ಗ್ರಾಮದ ರೈತ ಶಾಂತಕುಮಾರ್‌ ಎಂಬುವವರಿಗೆ ಹೇಮಾವತಿ ಜಲಾಶಯ ಯೋಜನೆಯ ಮು‌ಳುಗಡೆ ಸಂತ್ರಸ್ತರ ಹೆಸರಿನಲ್ಲಿ 8 ಎಕರೆ ಮಂಜೂರು ಮಾಡಿಸಿಕೊಡುತ್ತೇನೆ ಎಂದು  ಹಣ ಪಡೆದಿದ್ದಾನೆ.

ನಕಲಿ ದಾಖಲೆ: 

 ಆಲೂರು ತಾಲ್ಲೂಕು ಕುಂದೂರು ಹೋಬಹಳಿ ಸತೀಶ್ ಬಿನ್‌ ಲೇಟ್‌ ದೊಡ್ಡೇಗೌಡ ಮತ್ತು ಆಲೂರು ತಾಲ್ಲೂಕು ಪಾಳ್ಯ ಹೋಬಳಿ ಸಿಂಗಾಪುರ ಗ್ರಾಮದ ಜನಾರ್ಧನ್‌ ಬಿನ್‌ ವೆಂಕಟೇಗೌಡ ಇವರ ಹೆಸರಿನಲ್ಲಿ ಮುಳುಗಡೆ ಸರ್ಟಿಫಿಕೇಟ್‌ ಸೃಷ್ಟಿ ಮಾಡಲಾಗಿದೆ. ಆ ಸರ್ಟಿಫಿಕೇಟ್‌ಗೆ ಸಕಲೇಶಪುರ ತಾಲ್ಲೂಕಿನ ಕಸಬಾ ಹೋಬಳಿ ಬುಗಡಹಳ್ಳಿ ಗ್ರಾಮದ ಸರ್ವೆ ನಂಬರ್‌ 43ರಲ್ಲಿ ತಲಾ  4 ಎಕರೆ ಹೇಮಾವತಿ ಜಲಾಶಯ ವಿಶೇಷ ಭೂ ಸ್ವಾಧೀನಾಧಿಕಾರಿ ಆದೇಶ ಮಾಡಿರುವಂತೆ ಅಧಿಕೃತ ಜ್ಞಾಪನ ಪತ್ರ  (ಓಎಂ) ಪ್ರಿಂಟ್‌ ಮಾಡಿ ಶಾಂತಕುಮಾರ್ ಅವರಿಗೆ ನೀಡಲಾಗಿದೆ. ಎರಡು ಕರಾರಿನ ಮೂಲಕ ತಲಾ 7.5 ಲಕ್ಷ ದಂತೆ ಒಟ್ಟು 15 ಲಕ್ಷ ರೂಪಾಯಿಗಳನ್ನು ನಗದು ಪಡೆದಿದ್ದಾರೆ. ಉಳಿದ 5 ಲಕ್ಷ ರೂಪಾಯಿಗಳನ್ನು  ಶಾಂತಕುಮಾರ್ ಅವರ ಪುತ್ರ ಕಿರಣ್‌ ಕುಮಾರ್‌ ಎಂಬುವವರ ಐಸಿಐಸಿಐ ಬ್ಯಾಂಕಿನಿಂದ ಎಸ್‌.ಕೆ. ಪ್ರದೀಪ್‌ಕುಮಾರ್‌ ತನ್ನ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ದೂರುದಾರರು ಈ ಎಲ್ಲಾ ದಾಖಲೆಗಳನ್ನು ಪೊಲೀಸರಿಗೆ ನೀಡಿದ್ದಾರೆ.


(ಬಾಕ್ಸ್)

ಇತ್ತೀಚೆಗೆ ಹೇಮಾವತಿ ಜಲಾಶಯ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಯಿಂದ ಸುಮಾರು 8 ಸಾವಿರ ಎಕರೆ ಭೂಮಿ ಅಕ್ರಮವಾಗಿ ಮಂಜೂರಾಗಿದೆ ಎಂದು ಸಾರ್ವಜನಿಕ ಪ್ರಕಟಣೆ ಹಾಗೂ ಕೆಲವು ಮಾಧ್ಯಮಗಳಲ್ಲಿ ಈ ವಿಚಾರ ತಿಳಿದಾಗಲೇ ನಾವು ಹಣ ಕೊಟ್ಟು ಮೋಸ ಹೋಗಿದ್ದೇವೆ ಎಂದು ತಿಳಿಯಿತು. ಈ ಬಗ್ಗೆ ಪ್ರ‌ದೀಪ್‌ಗೆ ಕಡೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಸಕಲೇಶಪುರ ಬಿಟ್ಟು ಹಾಸನದಲ್ಲಿ ವಾಸ ಇದ್ದಾನೆ ಎಂಬುದು ಗೊತ್ತಾಯಿತು. ಭೂಮಿ ಬೇಡ ನಾವು ಕೊಟ್ಟ ಹಣ ಕೊಡು ಎಂದು ಕೇಳಿದರೆ ಉಢಾಫೆಯ ಉತ್ತರ ನೀಡುತ್ತಾನೆ. ಆದ್ದರಿಂದ  ನ್ಯಾಯಕ್ಕಾಗಿ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಶಾಂತಕುಮಾರ್‌ ಸುದ್ದಿಗಾರರಿಗೆ ಹೇಳಿದರು.  


ದೂರು ನೀಡಿದ 12 ಗಂಟೆಯಲ್ಲಿ ಆರೋಪಿ ಬಂಧನ: ವಂಚನೆಗೆ ಒಳಗಾದ ಶಾಂತಕುಮಾರ್‌ ದೂರು ನೀಡಿದ 12 ಗಂಟೆಯೊಳಗೆ ಇನ್‌ಸ್ಪೆಕ್ಟರ್‌ ಗಿರೀಶ್ ಪಟ್ಟಣ ಪಿಎಸ್‌ಐ ಬಸವರಾಜ್‌ ಚಿಂಚೊಳ್ಳಿ ಜಿಲ್ಲಾ ಪೊಲೀಸ್‌ ವಿರಿಷ್ಠಾಧಿಕಾರಿಗಳ ನಿರ್ದೇಶನದ ಮೇಲೆ ಆರೋಪಿ ಪ್ರದೀಪ್‌ ಕುಮಾರನನ್ನು ಬಂಧಿಸುವಲ್ಲಿ ಯಶಸ್ವಿ ಕಾರ್ಯಾಚರಣೆ ಮಾಡಿದ್ದಾರೆ.   


ಸಾರ್ವಜನಿಕರ ಶ್ಲಾಘನೆ:

ಎಚ್‌ಆರ್‌ಪಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ  ಭೂ ಹಗರಣದಲ್ಲಿ ಸುಮಾರು 8 ಸಾವಿರ ಎಕರೆ ಅಕ್ರಮ ಮಂಜೂರಾತಿ ರದ್ದು ಎಂಬ ಮಾಹಿತಿ ಬಿಟ್ಟರೆ ‌ಇದುವರೆಗೂ ಯಾರ ವಿರುದ್ಧವೂ ಪ್ರಕರಣ ದಾಖಲಾಗಿರಲಿಲ್ಲ. ಸಕಲೇಶಪುರ ಪೊಲೀಸರು ಮೊದಲ ಪ್ರಕರಣ ದಾಖಲು ಮಾಡುವ ಮೂಲಕ ಧಕ್ಷತೆ ಮರೆದಿದ್ದಾರೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ದೂರುಗಳ ಸುರಿಮಳೆ: 

ಈ ಹಗರಣದಲ್ಲಿ 2 ಸಾವಿರಕ್ಕೂ ಹೆಚ್ಚು ಜನ ಮೋಸ ಹೋಗಿದ್ದಾರೆ. ದಲ್ಲಾಳಿಗಳು, ಅಧಿಕಾರಿಗಳ  ವಿರುದ್ಧ ಮೊಸ ಹೋದವರು ದೂರು ನೀಡಲು ಮುಂದಾಗಿದ್ದಾರೆ.  

 

ಅಮಾನತ್ತು ಮಾಡಿ:   ಯಸಳೂರು ರೆವಿನ್ಯೂ ಇನ್‌ಸ್ಪೆಕ್ಟರ್‌ ಮಂಜುನಾಥ್‌, ಹಾನುಬಾಳು ರೆವಿನ್ಯೂ ಇನ್‌ಸ್ಪೆಕ್ಟರ್‌ ಮಹೇಂದ್ರ, ತಾಲ್ಲೂಕು ಕಚೇರಿ ದ್ವಿತೀಯ ದರ್ಜೆ ಸಹಾಯಕ ಚೇತನ್‌ ಇವರು ಸಹ ಈ ಭೂ ಹಗರಣದಲ್ಲಿ ಭಾಗಿಯಾಗಿರುವ ಆರೋಪಗಳಿದ್ದು, ಇವರನ್ನು ಸಹ ಅಮಾನತ್ತಿನಲ್ಲಿ ಇಟ್ಟು ತನಿಖೆ ನಡೆಸಬೇಕು  ಒತ್ತಾಯಿಸಿ ಬ

ಜರಂಗದ ದಳ ಕಾರ್ಯಕರ್ತರು ಶನಿವಾರ ಉಪವಿಭಾಗಾಧಿಕಾರಿ ಎಂ. ಗಿರೀಶ್ ನಂದನ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

Post a Comment

Previous Post Next Post