ಸೋಷಿಯಲ್ ಸೇವಾ ತಂಡಕ್ಕೆ ಹೊಟೇಲ್ ಮಾಲೀಕರ ನೆರವು

 ಬೇಲೂರು :ಕೊರೊನಾ ಸೋಂಕಿತರಲ್ಲಿ ಮೃತಪಟ್ಟ ಹಲವು ವ್ಯಕ್ತಿಗಳ ಶವ ಸಂಸ್ಕಾರ ನಡೆಸಿರುವ ಇಲ್ಲಿನ ಸೋಷಿಯಲ್ ಸಮಾಜಸೇವಾ ತಂಡಕ್ಕೆ ಪಟ್ಟಣದ ನೆಹರೂನಗರದ ಹೊಟೇಲ್ ತಾಜ್ ಮಾಲೀಕರು ನೆರವು ನೀಡಿದ್ದಾರೆಂದು ತಂಡದ ಪ್ರಮುಖರು ತಿಳಿಸಿದ್ದಾರೆ.

ಕೊರೊನಾ ಹಾವಳಿಯ ನಡುವೆ ಉಂಟಾದ ಲಾಕ್‍ಡೌನ್ ಆರಂಭದಿಂದಲೂ ನಿರ್ಗತಿಕರಿಗೆ ಊಟ, ಉಪಹಾರ, ಬಟ್ಟೆ, ಹೊದಿಗೆ ಸೇರಿದಂತೆ ಹಲವು ರೀತಿಯ ಕಾರ್ಯದಲ್ಲಿ ತಂಡವು ತೊಡಗಿಸಿದಕೊಂಡಿದೆ. ಇದಕ್ಕಾಗಿ ಜಾತಿ, ಧರ್ಮ ನೋಡದೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಹಲವರು ಹಲವು ರೀತಿಯ ಸಹಕಾರ ನೀಡುತ್ತಿದ್ದಾರೆ.


 ಇಂತವರ ಸಹಕಾರದಿಂದಲೇ ನಾವು ಕೊರೊನಾ ಸೋಂಕಿತರ ಶವ ಸಂಸ್ಕಾರದಲ್ಲಿ ತೊಡಗಲು ಪ್ರೇರಣೆಯಾಗಿದೆ ಎಂದು ತಂಡದ ಪ್ರಮುಖ ನೂರ್ ಅಹ್ಮದ್ ಕೃತಜ್ಞತೆ ಸಲ್ಲಿಸಿದರು.

Post a Comment

Previous Post Next Post