ಹಾಸನ ಜೂನ್ 07:- ಜಿಲ್ಲೆಯ ಅರಣ್ಯ ವಿಭಾಗದ ಆಲೂರು, ಸಕಲೇಶಪುರ, ಮತ್ತು ವಲಯಗಳ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿರುವ ಗುಂಡ ಎಂಬ ಪುಂಡಾನೆಯನೆಯನ್ನು ಸೆರೆಹಿಡಿದು ರೇಡಿಯೋ ಕಾಲರ್ ಅಳವಡಿಸಿ ಎಂ.ಎಂ.ಹಿಲ್ಸ್ ವನ್ಯಜೀವಿದಾಮಕ್ಕೆ ಸ್ಥಳಾಂತರಿಸಲು ಹಾಗೂ ಮೌಂಟೇನ್ ಎಂಬ ಇನ್ನೋಂದು ಪುಂಡಾನೆಯಯನ್ನೂ ಸೆರೆಹಿಡಿದು ರೆಡಿಯೋ ಕಾಲರ್ ಅಳವಡಿಸಿ ಕಾವೇರಿ ವನ್ಯಜೀವಿದಾಮಕ್ಕೆ ಸ್ಥಳಾಂತರಿಸುವ ಕುರಿತು ಕಾರ್ಯಚಾರಣೆನ್ನು ಜೂನ್.8 ರಿಂದ 11 ರವೆರೆಗೆ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಚಾರಣೆಯ ಅವಧಿಯಲ್ಲಿ ನಿರ್ಧರಿಸಿದ ಸ್ಥಳಗಳಲ್ಲಿ ರೈತರು ಮತ್ತು ಸಾರ್ವಜನಿಕರು ಕಾರ್ಯಚಾರಣೆಗೆ ಸಹಕರಿಸುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಬಸವರಾಜು ತಿಳಿಸಿದ್ದಾರೆ.
Tags
ಹಾಸನ