ಹಾಸನ: ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ಹೋಬಳಿಯಲ್ಲಿರುವ ಒಡನಹಳ್ಳಿಯಲ್ಲಿ ನಾನೋ ಪುಡ್ ಪಾರ್ಕ್ ಸ್ಥಾಪನೆ ಪ್ರಾರಂಭಗೊಳುತ್ತಿದೆ ಎಂದು ಒಡನಹಳ್ಳಿ ದೇಸಿ ಮಿಲ್ಕ್ ನಿರ್ಮಾಪಕರ ಲಿಮಿಟಿಡ್ ಕಂಪನಿ ಸಿಇಒ ಅಶೋಕ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರದಂದು ಮಾತನಾಡಿ, ನ್ಯಾನೋ ಫುಡ್ ಪಾರ್ಕ್ ಪರಿಕಲ್ಪನೆ ಸುಮಾರು ೩ ವರ್ಷಗಳ ಹಿಂದೆಯೆ ತುಮಕೂರು ಜಿಲ್ಲೆಯಲ್ಲಿ ಪ್ರಾರಂಭಿಸಬೇಕೆAದು ಅಡಿಗಲ್ಲು ಹಾಕಲಾಗಿತ್ತು. ಆದರೆ ತುಮಕೂರು ಜಿಲ್ಲೆಯ ರೈತರ ನೀರಸ ಪ್ರತಿಕ್ರಿಯೆ ಫಲವಾಗಿ ಈ ಒಂದು ಪರಿಕಲ್ಪನೆಯನ್ನು ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕು ಹಳ್ಳಿಮೈಸೂರು ಹೋಬಳಿ ಒಡನಹಳ್ಳಿಯಲ್ಲಿ ಪ್ರಾರಂಭಗೊಳ್ಳುತ್ತಿದೆ. ಸುಮಾರು ೯ ರಿಂದ ೧೦ ತಿಂಗಳು ಸರ್ವೇ ನಡೆಸಿದ್ದು, ಪೂರ್ವ ನಿರ್ಧಾರಿತ ಯೋಜನೆ ( PIಐಔಖಿ Pಖಔಎಇಅಖಿ )ನಡೆಸಿ ಯಶಸ್ವಿಯಾಗಿರುತ್ತೇವೆ ಎಂದರು. ಕೃಷಿಯಲ್ಲಿ ಮಾರುಕಟ್ಟೆಯೇ ಮುಖ್ಯ ಆದರೆ ನಮ್ಮ ಸ್ಥಳೀಯ ರೈತರು ಬೆಳೆಗಳನ್ನು ಬೆಳೆಯುವುದರಲ್ಲಿ ಮಾತ್ರ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಒಡನಹಳ್ಳಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಒಡನಹಳ್ಳಿ ನಾನೂ ಪುಡ್ ಪಾರ್ಕ್ ಅನ್ನು ಸ್ನಾಪಿಸಲಾಗುತ್ತಿದೆ. ಇದರ ಉದ್ದೇಶ ಸ್ಥಳೀಯವಾಗಿ ರೈತರು ಬೆಳೆಯುವ ಆಯ್ದ ಉತ್ಪನ್ನಗಳನ್ನು ಯೂರೋಪ್, ಅಮೇರಿಕಾ ಮತ್ತು ಅರಬ್ ದೇಶಗಳ ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಪದಾರ್ಥಗಳನ್ನಾಗಿ ಪರಿವರ್ತಿಸಿ ಆ ದೇಶಗಳಿಗೆ ರಫ್ತು ಮಾಡುವ ಒಂದು ಯೋಜನೆ ಆಗಿರುತ್ತದೆ. ಇಲ್ಲಿ ೧೦ ಲಕ್ಷಕ್ಕಿಂತ ಕಡಿಮ ವೆಚ್ಚದ ಯೋಜನೆಗಳಿಗೆ ಹೂಡಿಕೆ ಮಾಡಲು ಅವಕಾಶ ಇರುತ್ತದೆ. ಇದರಿಂದ ಸ್ಥಳೀಯ ರೈತರಿಗೆ ಉತ್ಪನ್ನಗಳಿಗೆ ಸ್ವಲ್ಪ ಹೆಚ್ಚಿನ ದರ ಸಿಗುವುದರೊಂದಿಗೆ ಸಾಕಷ್ಟು ಗ್ರಾಮೀಣ ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ. ಇದರಲ್ಲಿ ರೈತರಿಗೆ ಮಾರುಕಟ್ಟೆ ವ್ಯವಸ್ಥೆಯನ್ನು ಸಹ ಕಲಿಸಿ ಕೊಡಲಾಗುತ್ತದೆ ಎಂದು ಹೇಳಿದರು.
ಹಾಲಿನ ಉತ್ಪನ್ನಗಳನ್ನು ಭಾರತದಿಂದ ಉತ್ಪನ್ನ ರಫ್ತು ಮಾಡುತ್ತಿದ್ದು, ನಮ್ಮ ದೇಸಿ ತಳಿ ಹಸುವಿನ ಹಾಲು ಮತ್ತು ಹಾಲುಗಳಿಗೆ ಬೇರೆ ದೇಶಗಳಲ್ಲಿ ಬಹಳ ಬೇಡಿಕೆ ಇದ್ದು, ಸ್ಥಳೀಯ ರೈತರಿಗೆ ೨ ಹಸುಗಳನ್ನು ಕೊಟ್ಟು ಅವರಿಂದ ಹಾಲನ್ನು ಹಿಂಪಡೆದು, ಹಿಂಪಡೆದ ಹಾಲನ್ನು ಯೂರೋಪ್ ಅಮೇರಿಕ ಮತ್ತು ಇತರ ದೇಶಗಲ್ಲಿ ಬೇಡಿಕೆ ಇರುವ ಪದಾರ್ಥಗಳನ್ನಾಗಿ ಪರಿವರ್ತಿಸಿ ರಫ್ತು ಮಾಡುವ ಕಾರ್ಯವನ್ನು ಮುಂದಿನ ೨ ತಿಂಗಳಲ್ಲಿ ಪ್ರಾರಂಭಿಸಲಾಗುತ್ತದೆ ಎಂದರು. ಈ ಸಂಸ್ಥೆಯ ಪಂಚಾಯಿತಿ ವ್ಯಾಪ್ತಿಯ ಸ್ಮಳೀಯ ರೈತರಿಗೆ ೨ ದೇಸಿ ಹಸುಗಳನ್ನು ಕೊಟ್ಟು ೧ ಲೀಟರ್ ಹಾಲಿಗೆ ೬೦ ರೂಪಾಯಿಯನ್ನು ಕೊಟ್ಟು ಹಾಲನ್ನು ಹಿಂಪಡೆದು ಅದನ್ನು ಹಾಲಿನ ಉಪ ಉತ್ಪನ್ನಗಳನ್ನಾಗಿ ಪರಿವರ್ತಿಸಿ ರಫ್ತು ಮಾಡುತ್ತದೆ. ಕೇಂದ್ರ ಸರ್ಕಾರದ ಅಳವಡಿಸಿಕೊಂಡು ಪ್ರಾರಂಬಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಪ್ರಥಮ ಬಾರಿಗೆ ಈ ಸಂಸ್ಥೆಯಿAದ ರೈತರನ್ನು ಇನ್ನು ಹೆಚ್ಚಿನ ಕೃಷಿಯಲ್ಲಿ ಅಧ್ಯಾಯನಕ್ಕಾಗಿ ಇಸ್ರೇಲ್ ದೇಶಕ್ಕೆ ಪ್ರವಾಸವನ್ನು ಆಗಸ್ಟ್ ಇಲ್ಲವೇ ಸೆಪ್ಟಂಬರ್ ತಿಂಗಳಲ್ಲಿ ಕಳುಹಿಸಲಾಗುತ್ತಿರುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉದಯಕುಮಾರ್, ಬೋಜಣ್ಣ, ಸಾಗರ್ ಸೇರಿದಂತೆ ಇತರರು ಉಪಸ್ಥಿತರಿದ್ದರು