ಮಂಡ್ಯ .ಜೂ 28 : ಕೋವಿಡ್ -19 ಮೂರನೇ ಅಲೆಯನ್ನು ಸಮರ್ಪಕವಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ ನಾರಾಯಣಗೌಡ ಹೇಳಿದರು.
ಜಿಲ್ಲಾ ಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ ಕೋವಿಡ್ 19 ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆ ಹಾಗೂ ಕೋವಿಡ್ -19, 3 ನೇ ಅಲೆ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿನಿತ್ಯ 4500 ಟೇಸ್ಟಿಂಗ್ ನ್ನು ಮಾಡಿಸಬೇಕು ಎಂದರು. ಆದ್ಯತಾ ವಲಯದವರಿಗೆ ಹಾಗೂ 18 ವರ್ಷ ಮೇಲ್ಪಟ್ಟವರಿಗೆ ಹಾಗೂ 45 ಮೇಲ್ಪಟ್ಟವರಿಗೆ ಕೈಗೊಂಡಿರುವ ಲಸಿಕಾಕರಣವನ್ನು ಹೆಚ್ಚು ಮಾಡಿಸಬೇಕು ಎಂದರು.
ತಾಲ್ಲೂಕುವಾರು ಪಿ.ಎಚ್ .ಸಿ ಹಾಗೂ ಪಿ.ಎಚ್ ಸಿ ಆರೋಗ್ಯ ಸಿಬ್ಬಂದಿಗಳಿಗೆ 3 ನೇ ಅಲೆಯ ನಿರ್ವಹಣೆ ಬಗ್ಗೆ ತರಬೇತಿ ನೀಡಿ ಎಂದರು.
ಕರೋನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಮಾಸ್ಕ್ ಧರಿಸದವರಿಗೆ ಸಾಮಾಜಿಕ ಅಂತರ ಉಲ್ಲಂಘಣೆ ಮಾಡಿದವರ ಮೇಲೆ ಕಠಿಣ ಕ್ರಮ ಜರುಗಿಸಿ ಎಂದು ಪೆÇಲೀಸ್ ಇಲಾಖೆಗೆ ಸೂಚಿಸಿದರು.
ಜಿಲ್ಲೆಯಲ್ಲಿ ಆಹಾರ ಕಿಟ್ ವಿತರಣೆ, ಹಾಗೂ ಇನ್ನಿತರ ಸಭೆಗಳಲ್ಲಿ ರಾಜಕಾರಣಿಗಳು ಬಂದಾಗ ಹೆಚ್ಚು ಜನರು ಸೇರುತ್ತಿದ್ದು,ಇವುಗಳನ್ನ ನಿಬರ್ಂಧಿಸಿ ಎಂದು ಸಚಿವರು ಹೇಳಿದರು.
ಮಕ್ಕಳ ಹಾಲು ಪೌಡರ್ ನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟಮಾಡುತ್ತಿರುವವರ ಮೇಲೆ ಕ್ರಮವಹಿಸಿ ಅಂತಹ ಅಧಿಕಾರಿಗಳನ್ನು ಅಮಾನತು ಮಾಡಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.
*ಟೇಸ್ಟಿಂಗ್ ನ್ನು ಹೆಚ್ಚಿಸಿ*
ಜಿಲ್ಲೆಯಲ್ಲಿ ಕರೋನಾವನ್ನು ನಿಯಂತ್ರಿಸಲು ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಿ ಚಿಕಿತ್ಸೆ ನೀಡಿ ಎಂದರು.
ಆರ್ ಟಿ ಪಿ ಸಿ ಆರ್ ಟೆಸ್ಟ್ ನ್ನು ಹೆಚ್ಚು ಮಾಡಿ ಎಂದರು.
ಕೇರಳ, ಮಹಾರಾಷ್ಟ್ರ, ಹಾಗೂ ಇನ್ನಿತರ ರಾಜ್ಯಗಳಿಂದ ಹೆಚ್ಚು ಜನರು ಜಿಲ್ಲೆಗೆ ಬರುತ್ತಿದ್ದು ಇದನ್ನ ಪೆÇಲೀಸ್ ಇಲಾಖೆಯವರು ಗಮನಿಸಿ ನಿರ್ಬಧಿಸಿ ಎಂದರು.
ಹೊರರಾಜ್ಯದಿಂದ ಬಂದವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಿ ಎಂದರು.
ಕೋವಿಡ್ ಸೆಂಟರ್ ನಿಂದ ಹೋಮ್ ಐಶೋಲೇಷನ್ ಗೆ ಸೋಂಕಿತರನ್ನು ಕಳುಹಿಸಬೇಡಿ ಎಂದು ಹೇಳಿದರು.
ಆಹಾರ ಕಿಟ್ ಗಳ ವಿತರಣೆ ಸಂದರ್ಭದಲ್ಲಿ ಹೆಚ್ಚಿನ ಜನರನ್ನು ಸೇರಿಸಿ ಕರೋನಾ ಮಾರ್ಗಸೂಚಿ ಗಳನ್ನು ಉಲ್ಲಂಘನೆ ಮಾಡದಂತೆ ಕ್ರಮವಹಿಸಿ ಎಂದು ಹೇಳಿದರು. ಕರೋನಾ ಸಂದರ್ಭದಲ್ಲಿ ಹೆಚ್ಚು ಜನರು ಸೇರುವುದನ್ನು ನಿಬರ್ಂಧಿಸಿ ಕ್ರಮ ತೆಗೆದುಕೊಳ್ಳಿ ಎಂದರು.
ಇನ್ನು ಕಲ್ಯಾಣ ಮಂಟಪಗಳಲ್ಲಿ ಮದುವೆ ಸಮಾರಂಭಕ್ಕೆ 50 ಕ್ಕಿಂತ ಹೆಚ್ಚಿನ ಜನ, ಹಾಗೂ ಶವ ಸಂಸ್ಕಾರ ಸಂದರ್ಭದಲ್ಲಿ ಹೆಚ್ಚಿನ ಜನ ಸೇರುವುದನ್ನು ನಿಬರ್ಂಧಿಸಿ ಅಂತಹವರ ಮೇಲೆ ಕೇಸ್ ದಾಖಲಿಸಿ ಎಂದು ಜಿಲ್ಲಾಧಿಕಾರಿ ತಹಶೀಲ್ದಾರ್ ಗಳಿಗೆ ಸೂಚಿಸಿದರು.
ಮೂರನೇ ಅಲೆ ಎದುರಿಸಲು, ಕಲ್ಯಾಣ ಮಂಟಪಗಳನ್ನು ತೆರೆಯಲು ಅವಕಾಶ ಮಾಡಿಕೊಡಬೇಡಿ, ಮದುವೆ ಸಮಾರಂಭ ಗಳಿಗೆ ನಿಬರ್ಂಧಗಳನ್ನು ವಿಧಿಸಿ ಎಂದು ಶಾಸಕರು ಒತ್ತಾಯಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಜಿಲ್ಲೆಯಲ್ಲಿ ಪ್ರಸುತ್ತ ಇರುವ ಕರೋನಾ ಪ್ರಕರಣಗಳು, ವೈದ್ಯಕೀಯ ಸೌಲಭ್ಯ, ವ್ಯಾಕ್ಸಿನೇಷನ್, ಕರೋನಾ ಮಕ್ಕಳ ಪ್ರಕರಣಗಳು, ಕರೋನಾ ಮೊದಲನೇ ಮತ್ತು ಎರಡನೇ ಅಲೆಯಲ್ಲಿ ಕೈಗೊಂಡ ಕ್ರಮಗಳು, ಹಾಗೂ ಮೂರನೇ ಅಲೆ ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರಿಸಿದರು.
1 ನೇ ಮತ್ತು 2 ನೇ ಅಲೆಯಲ್ಲಿ ಮಕ್ಕಳ ಚಿಕಿತ್ಸೆಗಾಗಿ ವಿಶೇಷ ಘಟಕವನ್ನು ಪ್ರಾರಂಭಿಸಿ , ಚಿಕಿತ್ಸೆ ನೀಡುತ್ತಿದ್ದೇವೆ ಎಂದರು.
ಮೂರನೇ ಅಲೆ ಮಕ್ಕಳಿಗೆ ಹೆಚ್ಚು ತಗಲುವ ಸಂಭಾವ್ಯವಿದ್ದು ಈ ಸಂಬಂಧ ಐಸಿಯು ಬೆಡ್, ಇನ್ನಿತರ ಸೌಲಭ್ಯಗಳ ಒದಗಿಸುವಿಕೆ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಶಾಸಕರಾದ ಶ್ರೀನಿವಾಸ್, ಡಾ ಕೆ.ಅನ್ನದಾನಿ, ಅಶ್ವಿನ್ ಕುಮಾರ್, ಸುರೇಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಕೆ.ಟಿ ಶ್ರೀಕಂಠೇಗೌಡ, ಜಿಲ್ಲಾಧಿಕಾರಿ ಎಸ್.ಅಶ್ವತಿ, ಜಿ.ಪಂ ಸಿಇಒ ದಿವ್ಯಪ್ರಭು, ಅಪರ ಜಿಲ್ಲಾಧಿಕಾರಿ ಶೈಲಜಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಧನಂಜಯ, ಉಪವಿಭಾಗಾಧಿಕಾರಿಗಳಾದ ಶಿವಾನಂದಮೂರ್ತಿ, ಐಶ್ವರ್ಯ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.