ಬೇಲೂರು: ಇಲ್ಲಿನ ಪತ್ರಕರ್ತರಿಗೆ ನಾಗೇಂದ್ರ ಸೇವಾ ಪ್ರತಿಷ್ಠಾನದಿಂದ ಸಿದ್ದೇಶ್‍ನಾಗೇಂದ್ರ ಅವರು ಆಹಾರದ ಹಾಗೂ ಔಷಧಿ ಕಿಟ್ ಮತ್ತು ಆಕ್ಸಿಜನ್ ಲೆವೆಲ್ ಕಂಡುಕೊಳ್ಳುವ ಪಲ್ಸ್ ಆಕ್ಸಿಮೀಟರ್ ಅನ್ನು ಕೊಡುಗೆಯಾಗಿ ನೀಡಿದರು.
ಇಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಿಟ್ ವಿತರಿಸಿ ಮಾತನಾಡಿದ ಅವರು, ನಮ್ಮ ತಂದೆಯವರ ಹೆಸರಿನಲ್ಲಿ ಸ್ಥಾಪಿತವಾದಂತ ಟ್ರಸ್ಟ್ ಅಡಿಯಲ್ಲಿ ರಾಜ್ಯದಾದ್ಯಂತ ಹಲವಾರು ಜನಪರ ಕೆಲಸಗಳ ಮಾಡಿದ್ದೇವೆ. ವಿಶೇಷವಾಗಿ ಹಾಸನ ಜಿಲ್ಲೆ ಹಾಗೂ ಬೇಲೂರು ತಾಲ್ಲೂಕಿನ ಗ್ರಾಮೀನ ಪ್ರದೇಶಗಳ ಸಮುದಾಯ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗಿದೆ.
ಇದೀಗ ಕೊರೊನಾ ನೋವಿನ ಸಂದರ್ಭವಾದ್ದರಿಂದ ಸಂದರ್ಭಯೋಚಿತವಾಗಿ ಬದುಕಿಗೆ ಪೂರಕವಾದಂತ ಕಾರ್ಯಕ್ರಮಗಳ ಹಮ್ಮಿಕೊಳ್ಳುತ್ತಿದ್ದೇವೆ. ನಮ್ಮ ತಂದೆಯವರು ನಿಧನರಾದ ನಂತರವೂ ನನ್ನೆಲ್ಲಾ ಕುಟುಂಬಸ್ಥರು, ಸ್ನೇಹಿತರ ಸಲಹೆಯಂತೆ ಸೇವಾಕಾರ್ಯದಲ್ಲಿ
ತೊಡಗಿದ್ದೇನೆ. ಇದು ಸಮುದಾಯದ ಹಿತದೃಷ್ಠಿಯೆ ಆಗಿದೆ ಹೊರುತು ವೈಯುಕ್ತಿಕ ಉದ್ದೇಶವಿಲ್ಲ ಎಂದು ತಿಳಿಸಿದರು. ವ್ಯಾಕ್ಸಿನೇಶನ್ ಪಡೆದುಕೊಳ್ಳುವುದು ಒಳ್ಳೆಯದು.
ಕೊರೊನ ಬಂದ ಸಂದರ್ಭಕ್ಕೆ ಅನುಗುಣವಾಗಿ ಕೆಲವೊಂದು ಮಾತ್ರೆಗಳನ್ನು ನೀಡಲಾಗಿದೆ. ಕೊರೊನಾ ಕುರಿತು ಸಾಮಾಜಿಕತಾಣಗಳಲ್ಲಿ ತಪ್ಪಾಭಿಪ್ರಾಯ ಬೀರುವಂತ ಮಾಹಿತಿ ಹಾಕುವುದು ಕಂಡುಬರುತ್ತಿದ್ದು ಇದು ಸರಿಯಲ್ಲ. ಇದೀಗ ಮಾಧ್ಯಮದವರಿಗೆ ನೆರವು ನೀಡಬೇಕೆಂಬ ಉದ್ದೇಶದಿಂದ ನೀಡುತ್ತಿದ್ದೇವೆ ಎಂದು ಹೇಳಿದರು.
ಪ್ರತಿಷ್ಠಾನದಿಂದ ಉನ್ನತ ಶಿಕ್ಷಣ ವ್ಯಾಸಂಗಕ್ಕೆ, ಪ್ರತಿಭಾವಂತ ಕ್ರೀಡಾಪಟುಗಳಿಗೆ, ಪ್ರತಿಭಾಪುರಸ್ಕಾರ, ವಿವಿಧ ಮಹಾನೀಯರ ಜಯಂತಿ, ಜಾತ್ಯಾತೀತ, ಧರ್ಮಾತೀತವಾಗಿ ಕಾರ್ಯಕ್ರಮ ರೂಪಿಸಲಾಗಿದೆ. ದೇಗುಲಗಳ ಜೀರ್ಣೋದ್ಧಾರ, ಧಾರ್ಮಿಕ ತಳಹದಿಯ ಮೇಲೆ ಕೆಲವೊಂದು ಕಾರ್ಯಕ್ರಮ ನಡೆಸಲಾಗುತ್ತಿದೆ. ರಂಜಾನ್ ವೇಳೆ ಆಹಾರಧಾನ್ಯ ವಿತರಿಸಲಾಗಿದೆ.
ರಾಮಮಂದಿರ, ಗೋರಿಯೊಂದಕ್ಕೆ ಬೇಲಿ ಹಾಕಿಕೊಡಲಾಗಿದೆ. ಪ್ರತಿಷ್ಠಾನದ ಭುಜಂಗ ಅವರು ಮಾತನಾಡಿ, ಸಿದ್ದೇಶ್ ಅವರ ತಂದೆ ಮೆಟ್ರೋ ರೈಲ್ವೆಯಲ್ಲಿದ್ದಾಗ ಅವರ ಸೇವೆ ಗುರುತಿಸಿದ ಅಂದಿನ ಮುಖ್ಯಮಂತ್ರಿ ಹೆಚ್.ಡಿ.ದೇವೇಗೌಡರಿಂದ ಇಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಹ ನಾಗೇಂದ್ರ ಅವರ ಬದಲಾವಣೆಗೆ ಅವಕಾಶವೇ ಕೊಡಲಿಲ್ಲ. ತಂದೆಗೆ ತಕ್ಕ ಮಗನಾಗಿ ಸಿದ್ದೇಶ್ ಕಾರ್ಯನಿರ್ವಹಿಸುತ್ತಿದ್ದಾರೆ. ಇಂದಿಗೂ 45 ಜನರಿರುವ ಅವಿಭಕ್ತ ಸಿದ್ದೇಶ್ ಅವರದ್ದಾಗಿದ್ದು ಇದು ನಾಗೇಂದ್ರ ಅವರ ಸಂಸ್ಕಾರಯುತ ನಡೆಗೆ ಕೈಗನ್ನಡಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಇನ್ನೂ ಹಲವಾರು ಜನಪರವಾದ ಯೋಜನೆಗಳತ್ತ ಕಣ್ಣಾಡಿಸಿದ್ದೇವೆ. ಈ ರೀತಿಯ ಸೇವಾಕಾರ್ಯಕ್ಕೆ ನಾವು ಯಾವುದೆ ಉದ್ದೇಶ ಇಟ್ಟುಕೊಂಡು ಬಂದಿಲ್ಲ. ಶಿವಕುಮಾರ್ ಮಾತನಾಡಿ, ಸಿದ್ದೇಶ್ ಅವರು ಇದೀಗ ಕೊರೊನಾ ವಾರಿಯರ್ಸ್‍ಗಳಿಗೆ ನೆರವು ನೀಡುತ್ತಿದ್ದು ಈ ಹಿಂದಿನಿಂದಲೂ ಹೆಬ್ಬಾಳು, ಅಡಗೂರು, ಹಳೇಬೀಡಿನಲ್ಲಿ ರಕ್ತದಾನ ಶಿಬಿರ ಸೇರಿದಂತೆ ಹಲವು ಸೇವಾಕಾರ್ಯ ನಡೆಸಿಕೊಟ್ಟಿದ್ಧಾರೆ. ಪುಷ್ಪಗಿರಿ ಟ್ರಸ್ಟ್ ಗೆ ಸಹಾಯ ಮಾಡಿದ್ದಾರೆಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಾಲಾಕ್ಷ ಮಾತನಾಡಿ, ಇದೀಗ ಮಾಧ್ಯಮದವರಿಗೆ ನೆರವು ನೀಡಿರುವ ಸಿದ್ದೇಶ್‍ನಾಗೇಂದ್ರ ಅವರು, ನಂತರ ಆರೋಗ್ಯ, ಆನಂತರ ಶಿಕ್ಷಕರಿಗೆ ನೆರವು ನೀಡುವ ಉದ್ದೇಶ ಹೊಂದಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು.
ಪತ್ರಕರ್ತ ನಿಂಗರಾಜ್ ಮಾತನಾಡಿದರು. ಹಳೇಬೀಡು ಬೇಲೂರು ಪ್ರಾಧಿಕಾರದ ಅಧ್ಯಕ್ಷ ಬಸವರಾಜು, ತಾ.ಪಂ.ಮಾಜಿ ಅಧ್ಯಕ್ಷ ಪರ್ವತಯ್ಯ, ತಾ.ಪಂ.ಮಾಜಿ ಸದಸ್ಯ ಸೋಮಣ್ಣ, ಪ್ರಮುಖರಾದ ಹಲ್ಮಿಡಿ ಲೋಕೇಶ್, ಮೋಹನ್, ಕುಮಾರ್ ಇತರರು ಇದ್ದರು.
ಬಾಕ್ಸ್ ನ್ಯೂಸ್
ಬೇಲೂರಿನಲ್ಲಿ 24 ಗಂಟೆ ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ನೂರ್ ಅಹಮದ್ ಮತ್ತವರ ತಂಡದ ಕಾರ್ಯಕ್ಷಮತೆ ಮೆಚ್ಚುವಂತಾದ್ದು. ರಾಜ್ಯದ ಹಲವು ಕಡೆ ಇಂತಹ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಬೇಲೂರಿನ ಈ ತಂಡ ಜಾತಿ, ಧರ್ಮ ಯಾವುದನ್ನೂ ಲೆಕ್ಕಿಸದೆ ಕೊರೊನಾದಿಂದ ಮೃತಪಟ್ಟವರ ಸಂಸ್ಕಾರದಲ್ಲಿ ತೊಡಗಿರುವುದು ಹೆಮ್ಮೆಯಸಂಗತಿಯಾಗಿದೆ. ನಾಗೇಂದ್ರ ಸೇವಾ ಪ್ರತಿಷ್ಠಾನ ಸದಾ ನೂರ್ ಅಹಮದ್ ಮತ್ತವರ ತಂಡದೊಂದಿಗೆ ಇರುತ್ತದೆ ಎಂದು ಸಿದ್ದೇಶ್‍ನಾಗೇಂದ್ರ ಸಂತಸ ವ್ಯಕ್ತಪಡಿಸಿದರು.