ಮೈಸೂರು ಜಿಲ್ಲಾಧಿಕಾರಿ ನಿವಾಸದಲ್ಲಿ ₹ 50 ಲಕ್ಷ ವೆಚ್ಚದಲ್ಲಿ ಈಜುಕೊಳ ಹಾಗೂ ಜಿಮ್‌

ಮೈಸೂರು: ಪಾರಂಪರಿಕ ಕಟ್ಟಡವಾದ ಮೈಸೂರು ಜಿಲ್ಲಾಧಿಕಾರಿ ನಿವಾಸದಲ್ಲಿ ₹ 50 ಲಕ್ಷ ವೆಚ್ಚದಲ್ಲಿ ಈಜುಕೊಳ ಹಾಗೂ ಜಿಮ್‌ ನಿರ್ಮಿಸಿರುವ ವಿಷಯವಾಗಿ, ಪ್ರಾದೇಶಿಕ ಆಯುಕ್ತರು ತನಿಖೆ ಆರಂಭಿಸಿದ ಬೆನ್ನಿನಲ್ಲೇ, ಜಿಲ್ಲಾಧಿಕಾರಿ ನಿವಾಸದ ಆವರಣದಲ್ಲಿನ ಅತ್ಯಾಧುನಿಕ ಐಷಾರಾಮಿ ಈಜುಕೊಳದ ಚಿತ್ರಗಳು ಶುಕ್ರವಾರ ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.


ಇದುವರೆಗೂ ನಿರ್ಮಾಣ ಹಂತದಲ್ಲಿದ್ದ ಹಾಗೂ ನಿರ್ಮಾಣಗೊಂಡಿದ್ದ ಈಜುಕೊಳದ ಸುತ್ತಲೂ ಕವರಿಂಗ್‌ ಮಾಡಿದ್ದ ಚಿತ್ರಗಳಷ್ಟೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.

ಕೋವಿಡ್‌ ನಿರ್ವಹಣೆಗೆ ಸಂಬಂಧಿಸಿದಂತೆ ಸಂಸದ ಪ್ರತಾಪ ಸಿಂಹ ಬಹಿರಂಗವಾಗಿಯೇ ಲೆಕ್ಕ ಕೇಳಿದ ಮೂರ್ನಾಲ್ಕು ತಾಸಿನೊಳಗೇ ಪ್ರಕಟಣೆ ಬಿಡುಗಡೆ ಮಾಡಿದ್ದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಈಜುಕೊಳ ಹಾಗೂ ಜಿಮ್‌ ನಿರ್ಮಾಣದ ಬಗ್ಗೆ ಇಲ್ಲಿಯವರೆಗೂ ತುಟಿ ಬಿಚ್ಚದಿರುವುದಕ್ಕೆ ಟೀಕೆಗಳು ವ್ಯಕ್ತವಾಗಿವೆ.

Post a Comment

Previous Post Next Post