ದಿನಾಂಕ -5-06-2021 ರಂದು ಬೆಳಿಗ್ಗೆ 11ಗಂಟೆಗೆ ಹಾಸನ ನಗರದ ಎಸ್ ಎಂ ಕೃಷ್ಣ ನಗರ ಲೇಔಟ್ ನ ಉದ್ಯಾನವನದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಯುತ ಶ್ರೀನಿವಾಸಗೌಡ, ಮುಖ್ಯ ನ್ಯಾಯಾಧೀಶರಾದ ರವಿಕಾಂತ್, ನಗರಾಭಿವೃದ್ಧಿ ಪ್ರಾಧಿಕಾರದ ಕಮಿಷನರ್ ಶ್ರೀಯುತ ರಮೇಶ್, ನಿರ್ದೇಶಕರುಗಳಾದ ಶರತ್ ಹಾಗೂ ಅಶೋಕ್, ಆರ್ಮಿ ಮೇಜರ್ ನವನೀತ್ ರಾಜ್ ,ಡಿಎಫ್ಓ ಶ್ರೀ ಬಸವರಾಜು ಆರ್. ಎ ಫ್. ಓ ಶ್ರೀ ಶಿವರಾಮ್ ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಯುತ ಪುಟ್ಟಯ್ಯ ಹಾಗೂ ಎಲ್ಲಾ ಪದಾಧಿಕಾರಿಗಳು, ಪರಿಸರಪ್ರೇಮಿ ಶ್ರೀ ಹೆಮ್ಮಿಗೆ ಮೋಹನ್, ವಕೀಲರಾದ ಶ್ರೀಮತಿ ಗಿರಿಜಾಂಬಿಕ,ಶ್ರೀಯುತ ಶೇಖರ್,ಸ್ಥಳೀಯ ಉತ್ಸಾಹಿ ಯುವಕರಾದ ಶ್ರೀ ಅಶೋಕ್, ಅಶೋಕ್ ಗೌಡ, ಭರತ್, ಪುನೀತ್, ಚಂದ್ರು ಮತ್ತು ಗೋವಿಂದಗೌಡ ಇನ್ನಿತರರು ಪಾಲ್ಗೊಂಡರು.
ಸಾಂಕೇತಿಕವಾಗಿ ಉದ್ಯಾನವನದಲ್ಲಿ ಸುಮಾರು 70 ಗಿಡಗಳನ್ನು ನೆಡಲಾಯಿತು ಡಿಎಫ್ಓ ಬಸವರಾಜ್ ಅವರು ಗಿಡಗಳ ಸಂರಕ್ಷಣೆ ಹಾಗೂ ನಿರ್ವಹಣೆಗಾಗಿ ಇಲಾಖೆಯು ಸದಾ ಸಿದ್ಧವಿರುವುದಾಗಿ ತಿಳಿಸಿದರು ಪ್ರತಿಷ್ಠಾನ ಹಾಗೂ ಸ್ಥಳೀಯರ ಬೇಡಿಕೆಗಳಿಗೆ ಪ್ರತಿಸ್ಪಂದಿಸುತ್ತದೆ ಎಂದು ಭರವಸೆ ನೀಡಿದರು. ಕೃಷ್ಣ ನಗರದಲ್ಲಿಯೂ ತಂತಿ ವ್ಯವಸ್ಥೆ ಅತ್ಯುತ್ತಮವಾಗಿದ್ದು ಪ್ರತಿ ಉದ್ಯಾನವನದಲ್ಲಿ ಗಿಡಗಳನ್ನು ನೆಟ್ಟು ಪೋಷಣೆ ಮಾಡುವ ಉದ್ದೇಶದಿಂದ ಸ್ಥಳೀಯ ನಾಗರಿಕರ ಸಮಿತಿಯನ್ನು ರಚಿಸಲಾಯಿತು ನಿಜವಾದ ಅರ್ಥದಲ್ಲಿ ವಿಶ್ವ ಪರಿಸರ ದಿನವನ್ನು ಸಾರ್ಥಕ ರೀತಿಯಲ್ಲಿ ಆಚರಿಸಲಾಯಿತು.
Tags
ಹಾಸನ