ಲಯನ್ಸ್ ಕ್ಲಬ್-ಹಸಿರು ಭೂಮಿ ಪ್ರತಿಷ್ಠಾನದಿಂದ ವಿಶ್ವ ಪರಿಸರ ದಿನಾಚರಣೆ

ಹಾಸನ: ವಿಶ್ವ ಪರಿಸರ ದಿನದ ಅಂಗವಾಗಿ ಲಯನ್ಸ್ ಕ್ಲಬ್ ಮತ್ತು ಹಸಿರು ಭೂಮಿ ಪ್ರತಿಷ್ಠಾನದಿಂದ ನಗರದ ಹೌಸಿಂಗ್ ಬೋರ್ಡ್ನಲ್ಲಿ ೫೦ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ನಗರಸಭೆ ಅಧ್ಯಕ್ಷರಾದ ಆರ್. ಮೋಹನ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.


       ನಂತರ ಮಾತನಾಡಿದ ನಗರಸಭೆ ಅಧ್ಯಕ್ಷ ಆರ್. ಮೋಹನ್ ಮತ್ತು ಲಯನ್ಸ್  ಕ್ಲಬ್ ಅಧ್ಯಕ್ಷರಾದ ಎಸ್.ಪಿ. ಪ್ರಕಾಶ್ ರವರು, ಪರಿಸರ ಎಂಬುದು ಮನೆ ಮನೆಯಲ್ಲಿ ಜಾಗೃತಿ ಮೂಡಬೇಕು. ಪರಿಸರವನ್ನು ಉತ್ತಮವಾಗಿ ಇಟ್ಟುಕೊಳ್ಳದಿದ್ದರೇ ನಾನಾ ರೋಗಗಳು ಉದ್ಭವಿಸುತ್ತದೆ. ಇಂದಿನ ಕೊರೋನಾ ಮಹಾಮಾರಿ ಆವರಿಸಿ ಸಾವು-ನೋವುಗಳು ಸಂಭವಿಸುತ್ತದೆ. ಸರಕಾರ ಜಾರಿಗೆ ತರಲಾಗಿರುವ ನಿಯಮಗಳಾದ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಮಾಡುವುದು, ಸಾಮಾಜಿಕ ಅಂತರ ಪಾಲಿಸಿ, ಸಭೆ ಸಮಾರಂಭವನ್ನು ಕಡಿತಗೊಳಿಸಿ ಹೆಚ್ಚಿನ ಸಮಯವನ್ನು ಮನೆ ಒಳಗೆ ಕಳೆಯುವುದರ ಮೂಲಕ ಕೊರೋನಾ ವಿರುದ್ಧ ಹೋರಾಟ ಮಾಡಬಹುದು ಎಂದರು. 

      ಇದೆ ವೇಳೆ ಹಸಿರುಭೂಮಿ ಪ್ರತಿಷ್ಠಾನದ ತೋಫಿಕ್, ಲಯನ್ಸ್ ಕ್ಲಬ್ ಸದಸ್ಯರಾದ ಪರಮೇಶ್, ಶಂಕರ್, ದೇವರಾಜ್, ರಘು, ನಿವಾಸಿಗಳಾದ ಹೇಮಂತ್, ನಾಗೇಶ್ ಇತರರು ಉಪಸ್ಥಿತರಿದ್ದರು.


Post a Comment

Previous Post Next Post