ಕೋವೀಡ್ ಲಸಿಕೆ ವಿಚಾರದಲ್ಲಿ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರ ದಲ್ಲಿ ತೊಡಗಿದೆ ಎಂದು ರಾಜ್ಯ ಕೆಪಿಸಿಸಿ ಸದಸ್ಯ ಬಿಎಲ್ ಧರ್ಮೇಗೌಡ ಆರೋಪಿಸಿದರು.

ಸುದ್ದಿಘೊಷ್ಟಿಯಲ್ಲಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಕೋವೀಡ್ ಎರಡನೆ ಅಲೆಯಲ್ಲಿ ದೇಶ ಹಾಗೂ ರಾಜ್ಯವನ್ನು ತತ್ತರಿಸುವಂತೆ ಮಾಡಿದ್ದರೂ ಸಹ ಅದನ್ನು ತಡೆಗಟ್ಟುವ ಬದಲು ಈ ಕೋವೀಡ್ ನಲ್ಲಿ ಕೇಂದ್ರ ಹಾಗೂ ರಾಜ್ಯಸರ್ಕಾರಗಳ ಭ್ರಷ್ಟಾಚಾರ ಮರೆಮಾಚಲು ಸಿಎಂ ಬದಲಾವಣೆ ಎಂಬ ವಿಚಾರವನ್ನು ಜನತೆ ಮುಂದೆ ನಾಟಕವಾಡುತ್ತಿದ್ದಾರೆ.ಇಡೀ ದೇಶದಲ್ಲಿ ಎಂದೂ ಕಂಡರಿಯದಂತಹ ದಿನನಿತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡುತ್ತಿದ್ದು, ಜನಸಮಾನ್ಯರ ಜೀವನ ನಡೆಸಲು ಕಷ್ಟಕರವಾಗಿದೆ.ಯಾವ ಪ್ರಧಾನಿ ಮಾಡದ ಸಾಧನೆಯನ್ನು ಈ ಭ್ರಷ್ಟ ಪ್ರಧಾನಿ ಹಾಗೂ ಮುಖ್ಯಮಂತ್ರಿ ಮಾಡಿದ್ದಾರೆ.ಜನಸಾಮಾನ್ಯರಿಗೆ ಲಸಿಕೆ‌ ನೀಡುತ್ತೇವೆ ಎಂದು ಭರವಸೆ ನೀಡಿ ಜನಸಾಮಾನ್ಯರಿಗೆ ಬೀದಿಯಲ್ಲಿ ಅಲೆಯುವಂತಹ ಸ್ಥಿತಿಗೆ ತಂದಿದ್ದಾರೆ.ಇಂತಹ ಸರ್ಕಾರವನ್ನು ರಾಷ್ಟ್ರಪತಿಗಳು ಕೂಡಲೇ ವಜಾಗೊಳಿಸಬೇಕೆಂದು ಆಗ್ರಹಿಸಿದರು.


ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಮದ್ ಮಾತನಾಡಿ ಈ ದೇಶವನ್ನೇ ವಿಕಾಸ ಮಾಡಿ‌ಸುವರ್ಣ ರಾಜ್ಯ ವನ್ನಾಗಿ ಮಾಡುತ್ತೇನೆ ಎಂದು ಸುಳ್ಳು ಭರವಸೆ ನೀಡುವ ಮೂಲಕ ಇಡೀ ದೇಶದ ಜನರನ್ನೇ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು, ದೇಶದಲ್ಲಿ ಗರೀಬಿ ಹಠಾವೋ ಎನ್ನುವ ವೇದ ಘೋಷಣೆ ಮೂಲಕ  ಹೇಳಿ ಅಧಿಕಾರ ಹಿಡಿದ ನಂತರ ದೇಶದಲ್ಲಿ ಬಡವರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಿದೆ.ಕೊರೋನ ೨೦೨೦ ರಲ್ಲಿ ಭಾರತದಲ್ಲಿ ಪ್ರವೇಶಿಸಲಿದೆ ಎಂದರೂ ಇದರ ಬಗ್ಗೆ ಗಮನ ಹರಿಸದೆ ನಮಸ್ತೇ ಟ್ರಂಪ್ ಕಾರ್ಯಕ್ರಮ ಕೋಟಿಗಟ್ಟಲೆ ಹಣ ಖರ್ಚುಮಾಡಿ ಇಡೀ ದೇಶವನ್ನೇ ಸರ್ವನಾಶ ಮಾಡಲು ಹೊರಟಿದ್ದಾರೆ.ತಜ್ಞರ ಹಾಗೂ ವೈಧ್ಯರ ಸಲಹೆಯನ್ನು ಪಡೆಯದೆ ಲಕ್ಷಾಂತರ ಜನರ ಸಾವಿಗೆ ಕಾರಣರಾಗಿದ್ದಾರೆ.ಇಂತಹ ಲಜ್ಜೆಗೆಟ್ಟ ಸರ್ಕಾರಕ್ಕೆ ಮುಂದೆ ಉಳಿಗಾಲವಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಸದಸ್ಯ ಮಂಜುನಾಥ್,ಕಾಂಗ್ರೆಸ್ ಮಖಂಡ ಶಿವಣ್ಣ ಜಾಕೀರ್ ಪಾಷಾ ಇದ್ದರು.

Post a Comment

Previous Post Next Post