ಸವಿತಾ ಸಮಾಜಕ್ಕೆ ಲಯನ್ಸ್ ಸಂಸ್ಥೆ ಯಿಂದ ಮಾಸ್ಕ ಹಾಗೂ ಫೇಸ್ ಶೀಲ್ಡ್ ವಿತರಣೆ.



ಪಟ್ಟಣದ ಶ್ರೀ ವೆಂಕಟಾದ್ರಿ ಹೇರ್ ಡ್ರೆಸ್  ಸವಿತಾ ಸಮಾಜದ ಕಚೇರಿಯಲ್ಲಿ ಲಯನ್ಸ್ ಸಂಸ್ಥೆಯಿಂದ ಕೋವೀಡ್ ಪರಿಕರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಪ್ರಭಾಕರ್ ಮಾತನಾಡಿ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಮನುಷ್ಯನನ್ನು ಸುಂದರವನ್ನಾಗಿ ಮಾಡುವ ಸವಿತಾ ಸಮಾಜದವರು ತಮ್ಮ ಕ್ಷೌರಿಕ ವೃತ್ತಿಯನ್ನು ಲಾಕ್ ಡೌನ್ ಸಮಯದಲ್ಲಿ ನಿಲ್ಲಿಸಿದ್ದು ಅವರ ಜೀವನೋಪಾಯಕ್ಕಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.ಇಂತಹವ ನೆರವಿಗೆ ಸರ್ಕಾರ ಮುಂದಾಗಬೇಕು .ನಮ್ಮ ಲಯನ್ಸ್ ಸಂಸ್ಥೆಯ ವತಿಯಿಂದ ಮಾಸ್ಕ್ ಹಾಗೂ ಫೇಸ್ ಶೀಲ್ಡ್ ಕೊಡಲಾಗುತ್ತಿದ್ದು ಭಾಂದವರು ತಮ್ಮ ಅರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು,ಹಾಗೂ ಈ ಕೋವೀಡ್ ನಿಂದ ರಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು.
ವೈಧ್ಯಾಧಿಕಾರಿ ಡಾ,ಚಂದ್ರಮೌಳಿ ಮಾತನಾಡಿ ನಮ್ಮ ಲಯನ್ಸ್ ಸಂಸ್ಥೆಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಅದರಲ್ಲೂ ಕೋವೀಡ್ ಸೊಂಕಿನಿಂದ  ಸುರಕ್ಷಿತವಾಗಿ ಸಿಸಿ ಕೇಂದ್ರಗಳಿಂದ   ಮನೆಗೆ  ತೆರಳುವ ಸೊಂಕಿತರಿಗಾಗಿ ರಸಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಿದ್ದು,ಅವರ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ನೀಡುವಂತೆ ಅವರಿಗೆ ಸೂಚಿಸಿದ್ದೆವು.ಇಂತಹ ಸಮಯದಲ್ಲಿ ದೃತಿಗೆಡದೆ ಧೈರ್ಯವಾಗಿ ಇದ್ದು ಆರೋಗ್ಯ ಕಾಪಾಡಿಕೊಂಡು ಹೋಗಬೇಕು ಎಂದು ತಿಳಿಸಿದ್ದೆವು.ನಮ್ಮ ಲಯನ್ಸ್ ಸಂಸ್ಥೆಯಿಂದ ಹತ್ತು ಹಲವು ಅನುಕೂಲಕರ ಕಾರ್ಯಕ್ರಮಗಳನ್ನು ನೆಡೆಸಿದ್ದು ಕಳೆದ ವರ್ಷ ಕೋವೀಡ್ ಮೊದಲ ಅಲೆ‌ ಸಮಯದಲ್ಲಿ ಆಹಾರ ಒದಗಿಸಿದ್ದು

 ಮುಂದೆಯೂ ಕೂಡ ಜನರಿಗೆ ಅನುಕೂಲವಾಗುವಂತಹ ಕೆಲಸ ಮಾಡಲಾಗುತ್ತಿದೆ.ಕೊರೋನಾ ಅಟ್ಟಹಾಸದಿಂದ ಕ್ಷೌರಿಕ ವೃತ್ತಿ ಬಾಂಧವರಿಗೆ ಜೀವನ ನೆಡಸಲು ಕಷ್ಟವಾಗಿದ್ದ ಸಮಯದಲ್ಲಿ ಮಾಸ್ಕ್ ಹಾಗೂ ಶೀಲ್ಡ್ ಫೇಸ್ ನೀಡುತ್ತಿದ್ದು ಒಂದು ಸಣ್ಣ ಸಹಾಯ ಮಾಡುತ್ತಿದ್ದೆವೆ ಮುಂದೆ ಹೆಚ್ಚಿನ ಜನಪರ ಕಾರ್ಯಕ್ರಮ ಮಾಡಲಾಗುವುದು ಎಂದರು.
ನಂತರ ಸವಿತಾ ಸಮಾಜದ ನಗರ ಅಧ್ಯಕ್ಷ  ನರಸಿಂಹ ಸ್ವಾಮಿ ಮಾತನಾಡಿ ನಮ್ಮ ಸವಿತಾ ಸಮಾಜದ ಬಂಧುಗಳು ಕೋವಿಡ್ ಸಂದರ್ಭದಲ್ಲಿ ತೀವ್ರವಾಗಿ ಸಂಕಷ್ಟಕ್ಕೆ ಗುರಿಯಾಗಿದ್ದು, ಕೆಲಸ ಕಾರ್ಯವಿಲ್ಲದೆ ಕೈ ಕಟ್ಟಿ ಕೂರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಇಂತಹ ಸಂದರ್ಭದಲ್ಲಿ ಲಯನ್ಸ್ ಸಂಸ್ಥಯವರು ಮಾಸ್ಕ್ ಹಾಗೂ ಫೇಸ್ ಶೀಲ್ಡ್ ಅನ್ನು ನೀಡುತ್ತಿರುವುದು ಸಂತೋಷ ಎಂದರು.
ಈ ಸಂದರ್ಭದಲ್ಲಿ ಲಯನ್ಸ್ ಮಾಜಿ ಅಧ್ಯಕ್ಷ ಡಾ ಸಂತೋಷ್,ಪೂವಯ್ಯ,ಪಧಾದಿಕಾರಿಗಳಾದ ನೌಷದ್,ರಮೇಶ್,ಕಾರ್ಯದರ್ಶಿ ಹರೀಶ್ ,ಕುಮಾರ್ ಸೇರಿದಂತೆ ಇತರರು ಹಾಜರಿದ್ದರು.

Post a Comment

Previous Post Next Post