ಸಾಮಾಜಿಕ ಅಂತರವಿಲ್ಲದೆ ಲಸಿಕೆ ಪಡೆಯಲು ಬೃಹತ್ ಸಾಲು

ಹಾಸನ: ಕೊರೋನಾ ಲಸಿಕೆ ಪಡೆಯಲು ಸರಕಾರಿ ನರ್ಸಿಂಗ್ ಕಾಲೇಜು ಆವರಣದಲ್ಲಿ ಸಾಮಾಜಿಕ ಅಂತರವಿಲ್ಲದೇ ಸಾವಿರಾರು ಜನರು ಸಾಲಿನಲ್ಲಿ ನಿಂತಿದ್ದರು.


       ೧೮ ವರ್ಷ ಮೇಲ್ಪಟ್ಟವರಾದ ಯುವ ಸಮೂಹ ಮತ್ತು ೪೫ ವರ್ಷ ಮೇಲ್ಪಟ್ಟವರು ಒಟ್ಟಿಗೆ ಸರದಿ ಸಾಲಿನಲ್ಲಿ ನಿಂತಿದ್ದರು. ಆಧಾರ್ ಕಾರ್ಡ್ನೊಂದಿಗೆ ಬೆಳಿಗ್ಗೆ ೬ ಗಂಟೆಗೆ ಬಂದು ಸಾಲಿನಲ್ಲಿ ಜನರು ನಿಂತಿದ್ದರು. ಈವೇಳೆ ಸಾಮಾಜಿಕ ಅಂತರದಲ್ಲಿ ನಿಲ್ಲಿಸಲು ಪೊಲೀಸರು ಮತ್ತು ಸಿಬ್ಬಂದಿಗಳು ಹರಸಾಹಸಪಟ್ಟು ವಿಫಲರಾದರು. ನಿಗಧಿತ ಲಸಿಕೆ ಡೋಸ್ ಕೊಡುವ ಬಗ್ಗೆ ನಿಕರ ಮಾಹಿತಿ ಇಲ್ಲದೇ ಸಾರ್ವಜನಿಕರು ಮುಗಿ ಬಿದ್ದಿದ್ದರು. ಬೆಳಗಿನ ಸಮಯದಲ್ಲಿ ನರ್ಸಿಂಗ್ ಕಾಲೇಜು ಗೇಟು ಹೊರಗೆ ಬಿ.ಎಂ. ರಸ್ತೆ ಬಳಿ ಸಾಲು ದಾಟಿತ್ತು. ಮದ್ಯಾಹ್ನದ ವೇಳೆಗೆ ಕಾಲೇಜು ಗೇಟ್ ಬಂದ್ ಮಾಡಿ ಒಳಗೆ ಇದ್ದವರಿಗೆ ಮಾತ್ರ ಅವಕಾಶ ಕಲ್ಪಿಸಿದರು.


Post a Comment

Previous Post Next Post