ಹಾಸನ: ಕೊರೋನಾ ಹೆಸರಿನಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಗಳ ಎಲ್ಲಾ ಅನುಧಾನವನ್ನು ಕಡಿತಗೊಳಿಸಿದ್ದು, ಇನೊಂದು ಕಡೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಎರಡು ರಾಷ್ಟ್ರೀಯ ಪಕ್ಷಗಳು ಹೊಡೆದಾಡುತ್ತಿದೆ ಎಂದು ಬೇಸರವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಕೋವಿಡ್ ಹೆಸರು ಹೇಳಿಕೊಂಡು ಎ ಗ್ರೇಡ್ ಗೆ ೧೩ ಲಕ್ಷ ಬರೋದನ್ನಾ ೬ ಲಕ್ಷಕ್ಕೆ ಇಳಿಸಿದರೇ ಪಂಚಾಯತಿ ಸದಸ್ಯರು ಹೇಗೆ ಕೆಲಸ ಮಾಡ್ತಾರೆ? ಅಬಕಾರಿ ಇಲಾಖೆಯೊಂದರಲ್ಲೆ ೨೫೦೦ ಕೋಟಿ ಆದಾಯ ಬಂದಿದೆ ಅಂತಾರೆ. ಯಾವ ಮೂಲದಿಂದ ಬಂದಿದೆ ಗೊತ್ತಿಲ್ಲ. ರಾಜ್ಯ ಸರ್ಕಾರ ಏನಾದರೂ ಆರ್ಥಿಕವಾಗಿ ದಿವಾಳಿ ಆಗಿದೆಯಾ ಅದನ್ನಾದರೂ ಹೇಳಲಿ. ಸಂಸದರ ಮತ್ತು ಶಾಸಕರ ಅನುಧಾನವನ್ನು ಕೂಡ ನಿಲ್ಲಿಸಲಾಗಿದೆ. ಕೂಡಲೇ ಸರಕಾರ ಸರಿಪಡಿಸದಿದ್ದರೇ ಹಾಗೂ ಪಂಚಾಯಿತಿ ಸಮಸ್ಯೆ ಬಗೆಹರಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕವಾಗಿ ಪ್ರತಿಭಟನೆ ಮಾಡಿ ನಂತರದಲ್ಲಿ ರಾಜ್ಯ ಮಟ್ಟದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪಂಚಾಯಿತಿ ಹಣ ಕಟ್ ಮಾಡೋದು, ನರೇಗಾ ಯೋಜನೆ, ಜಲಶಕ್ತಿ ಮಿಷನ್ ಯೋಜನೆಯಲ್ಲೂ ಶೇಕಡ ೫೦ ರಷ್ಟು ಅನುದಾನ ಕಟ್ ಮಾಡ್ತಿದಾರೆ. ಪಂಚಾಯಿತಿ ದುಡ್ಡು ೨೫ ಪರ್ಸೆಂಟ್ ಹಿಡಿತಿದಾರೆ. ಮಂಡಲ ಮತ್ತು ಪಂಚಾಯಿತಿ ಹಕ್ಕುಗಳನ್ನು ಮೊಟಕುಗೊಳಿಸಲಾಗಿದೆ. ಮರ‍್ನಾಲ್ಕು ಜಿಲ್ಲೆಗಳ ಸೇರಿ ರಾಜ್ಯ ಮಟ್ಟದಲ್ಲಿ ಏಕೆ ಟೆಂಡರ್ ಕರೆಯಬೇಕು ಎಂದು ಪ್ರಶ್ನೆ ಮಾಡಿದ ಅವರು, ಈ ತರಹ ರಾಜ್ಯ ಮಟ್ಟದ ದುಡ್ಡು ಹೊಡೆಯುವ ಕಾರ್ಯಕ್ರಮ ಇವೆಲ್ಲ ಆಗಿದೆ. ಪ್ರಾಮಾಣಿಕರಾಗಿದ್ದರೆ ಜಿಲ್ಲಾ ಮಟ್ಟದಲ್ಲಿ ಟೆಂಡರ್ ಕರಿಯಬೇಕು. ಉಳಿದ ಅವಧಿಯ ಎರಡು ವರ್ಷದಲ್ಲಿ ಸಿಕ್ಕಷ್ಟು ಲೂಟಿ ಮಾಡಬೇಕು ಎಂದು ಆರೋಪಿಸಿದ ಅವರು, ರಾಜ್ಯವು ಲೂಟಿ ಕೋರರ ಕೈಗೆ ಸಿಲುಕಿದೆ ಎಂದು ವಾಗ್ದಾಳಿ ನಡೆಸಿದರು.
ಕೋವಿಡ್ ಮೂರನೇ ಅಲೆ ತಡೆಗೆ ಯಾವ ಕ್ರಮ ಕೈಗೊಳ್ಳಬೇಕು. ಮಕ್ಕಳಿಗೆ ಹೆಚ್ಚು ತಟ್ಟುವುದರಿಂದ ಮುಂಜಾಗೃತ ಕ್ರಮವನ್ನು ರಾಜ್ಯ ಸರಕಾರ, ಜಿಲ್ಲಾಡಳಿತ ವಹಿಸಬೇಕು. ಜಿಲ್ಲಾ ಸಮುದಾಯ, ಪ್ರಾಥಮಿಕ ಆಸ್ಪತ್ರೆಗಳಿಗೆ ಏನ್ ಬೇಕು ಅನ್ನೋದನ್ನ ಮೊದಲು ಅದನ್ನ ಪಟ್ಟಿ ಮಾಡಿ ಸರಕಾರಕ್ಕೆ ಕೂಡಲೇ ವರದಿ ಕಳುಹಿಸಿಕೊಡಲಿ ಎಂದು ಸಲಹೆ ನೀಡಿದರು. ಎಮ್ಮೆ ಚರ್ಮದ ಸರ್ಕಾರ ಆಗಿರುವುದರಿಂದ ಆಗಾಗ ಹೇಳ್ತಾ ಇರಬೇಕು. ಸರ್ಕಾರಕ್ಕೆ ರಿಪೇರಿ ಆಗಬೇಕಿದೆ. ಎರಡೂ ಪಕ್ಷಗಳು ಸಿಎಂ ಸ್ಥಾನಕ್ಕಾಗಿ ಹೊಡೆದಾಡುತ್ತಿದ್ದಾರೆ. ನಾನು ಜನ ಉಳಿಸಿ ಅಂತ ಕೇಳ್ತಿನಿ ಅಷ್ಟೆ. ಜೆಡಿಎಸ್ ಮುಗಿಸಲು ಎರಡು ರಾಷ್ಟಿçÃಯ ಪಕ್ಷಗಳು ಓಡಾಡ್ತಿದಾರೆ. ಆನರು ಅವಕಾಶ ಕೊಟ್ಟರೆ ಹೆಚ್.ಡಿ. ಕುಮಾರಸ್ವಾಮಿನೇ ಮುಂದಿನ ಮುಖ್ಯಮಂತ್ರಿ ಆದರೇ ಒಳ್ಳೆ ಕೆಲಸ ಮಾಡುತ್ತೇವೆ. ಹತ್ತು ವರ್ಷದಿಂದ ನಿಂತಿದ್ದ ಕೆಲಸ ಮಾಡಿದ್ದೇವೆ. ಬಡವರ ಕೆಲಸ ಅಷ್ಟೇ ನನ್ನ ಆದ್ಯತೆಯಾಗಿದೆ ಎಂದು ಇದೆ ವೇಳೆ ವಿಶ್ವಾಸವ್ಯಕ್ತಪಡಿಸಿದರು.
ಮೋದಿಯವರೇ ನೀವು ಲೂಟಿ ಕೋರರ ಕೈಲಿ ಸರಕಾರ ಕೊಟ್ಟಿದ್ದೀರಿ. ಭ್ರಷ್ಟಾಚಾರ ಮುಕ್ತ ಮಾಡಬೇಕು ಎಂದು ಅಚ್ಛೆ ದಿನ್ ಮಾಡಲು ಹೋಗಿ ಲೂಟಿಕೋರರ ಕೈಲಿ ಸರಕಾರವಿದೆ. ಹೇಳ್ತಿದಿರಿ ಡಬಲ್ ಇಂಜಿನ್ ಸರ್ಕಾರ ಅಂತ. ಲೂಟಿಕೋರರ ಕೈಗೆ ಅಧಿಕಾರ ಕೊಟ್ಟಿದಿರಿ. ಲೂಟಿ ಮಾಡಬೇಕು ಮೂರ್ನಾಲ್ಕು ಜಿಲ್ಲೆ ಒಟ್ಟುಗೂಡಿಸಿ ಟೆಂಡರ್ ಕರೆದಿದ್ದಾರೆ. ಅದಕ್ಕೆ ವಿಧಾನಸಭೆ ಅಧಿವೇಶನ ಕರೀರಿ ಅಂತೀದಿನಿ. ೪ ತಿಂಗಳಿAದ ನೀರುಗಂಟಿಗಳ ಸ್ಯಾಲರಿ ಕೊಟ್ಟಿಲ್ಲ. ಮಾಸಾಶನ ನೀಡಲು ಪೋಸ್ಟ್ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಸಾವಿರಾರು ಜನ ಕ್ಯೂನಲ್ಲಿ ನಿಂತಿದಾರೆ. ಪೆನ್ಷನ್ ಹಣ ಪಡೆಯಲು ಹೋದರೇ ಕಂಪ್ಯೂಟರ್ ರಿಪೇರಿ ಇದೆ ಎನ್ನುತ್ತಾರೆ. ಸಾವ ಸಾಮಾಜಿಕ ಅಂತರವಿಲ್ಲದೇ ಕ್ಯೂ ಇರುವುದಕ್ಕೆ ಲಾಕ್ ಡೌನ್ ಬೇಡ. ನೇರವಾಗಿ ಅವರವರ ಹೆಸರಿನ ಬ್ಯಾಂಕಿನ ಖಾತೆಗೆ ಹಣ ಬರುವಂತಾಗಬೇಕು. ಬ್ಯಾಂಕ್ ಮತ್ತು ಪೋಸ್ಟ್ ಆಪೀಸ್ ಗೆ ನಿಯಮ ಬೇಡ ಪೂರ್ಣ ತೆಗೆಯಲು ಅವಕಾಶ ಕೊಡಬೇಕು. ಇಲ್ಲವಾದರೇ ಇದಕ್ಕೂ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.