ಹಾಸನ: ಮೂರನೇ ಲಿಂಗ ಎಂದೆ ಬಿಂಭಿಸಿರುವ ಮಂಗಳಾಮುಖಿಯರು ಮನವಿ ಮಾಡಿದ ಹಿನ್ನಲೆಯಲ್ಲಿ ಒಟ್ಟಿಗೆ ಸರದಿ ಸಾಲಿನಲ್ಲಿ ನಿಲ್ಲಲು ಮುಜುಗರವಾಗಬಹುದು ಎಂದು ಕಾಂಗ್ರೆಸ್ ಮುಖಂಡರು ಮತ್ತು ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ದೇವರಾಜೇಗೌಡರು ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರತ್ಯೇಕವಾಗಿ ಲಸಿಕೆ ಕೊಡಿಸಿದರು.
ಇದೆ ವೇಳೆ ಮಾತನಾಡಿದ ಪ್ರಕೃತಿ ಸಮುದಾಯ ಸಂಸ್ಥೆಯ ಮಂಗಳಮುಖಿ ವÀರ್ಷ ಅವರು ಮಾತನಾಡಿ, ಜನರ ಮಧ್ಯೆ ಹೋಗಿ ಲಸಿಕೆ ಪಡೆಯಲು ಮುಜುಗರವಾಗುತ್ತದೆ ಎಂದು ಕಾಂಗ್ರೆಸ್ ಮುಖಂಡರಾದ ದೇವರಾಜೇಗೌಡರ ಬಳಿ ಹೇಳಿಕೊಂಡಾಗ ಅವರು ಆರೋಗ್ಯ ಇಲಾಖೆಯೊಂದಿಗೆ ಮಾತನಾಡಿ ನಮ್ಮ ಸಮುದಾಯದವರಿಗೆ ಪ್ರತ್ಯೇಕವಾಗಿ ಲಸಿಕೆ ಹಾಕಿಸಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ಅವಕಾಶ ಮಾಡಿಕೊಟ್ಟಿರುವುದಕ್ಕೆ ಧನ್ಯವಾದಗಳನ್ನು ಸಲ್ಲಿಸುವುದಾಗಿ ಹೇಳಿದರು.
ಕಾಂಗ್ರೆಸ್ ಮುಖಂಡರು ಮತ್ತು ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ದೇವರಾಜೇಗೌಡ ಮಾತನಾಡುತ್ತಾ, ಇಂದು ಸಮಾಜದಲ್ಲಿ ಮುಂಗಳಮುಖಿಯರು ಎಂದರೇ ಬೇರೆಯೇ ಭಾವನೆಯನ್ನು ಇಟ್ಟುಕೊಂಡಿರುವ ಹಿನ್ನಲೆಯಲ್ಲಿ ಮೂರನೇ ವರ್ಗದ ಸಮುದಾಯದವರು ನಮಗೆ ಲಸಿಕೆ ಹಾಕಿಸಿಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಮಾಡಿಸಿಕೊಡಿ ಎಂದು ಪ್ರಕೃತಿ ಸಮುದಾಯ ಸಂಸ್ಥೆಯಿAದ ನಮ್ಮಲ್ಲಿ ಚರ್ಚೆ ಮಾಡಿದ್ದರು. ಈಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಬಳಿ ಮನವಿ ಮಾಡಿದಾಗ ಒಪ್ಪಿಕೊಂಡು ಅವರಿಗಾಗಿ ಪ್ರತ್ಯೇಕ ಅವಕಾಶ ಮಾಡಿಕೊಟ್ಟಿರುವುದಕ್ಕೆ ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ ಎಂದರು.
ಇದೆ ವೇಳೆ ಕಾಂಗ್ರೆಸ್ ಮುಖಂಡರಾದ ಕುಮಾರಸ್ವಾಮಿ, ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಲ್ಲಿಗೆವಾಳ್ ದೇವಪ್ಪ, ಅಶೋಕ್ ನಾಯಕರಹಳ್ಳಿ, ರವಿಕುಮಾರ್, ಕೃಷ್ಣ ಆಸ್ಪತ್ರೆಯ ಟೆಕ್ನಿಷಿಯನ್ ಡಾ. ಅಶೋಕ್, ದಯಾನಂದ್ ಮತ್ತು ವೈದ್ಯ ಸಿಬ್ಬಂದಿಗಳು ಸೇರಿದಂತೆ ಇತರರು ಪಾಲ್ಗೊಂಡಿದ್ದರು.