ಲಸಿಕೆ ಹಾಕುವುದರಲ್ಲೂ ಪ್ಲೆಕ್ಸ್ ರಾಜಕೀಯ ಮಾಡ್ತಿದ್ದಾರೆ ಶಾಸಕ ಪ್ರೀತಂ ಗೌಡರ ವಿರುದ್ಧ ಹೆಚ್.ಡಿ. ರೇವಣ್ಣ

ಹಾಸನ : ಕೊರೋನಾ ಲಸಿಕೆ ಹಾಕುವುದರಲ್ಲೂ ಪ್ಲೆಕ್ಸ್ ರಾಜಕೀಯ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಹಾಸನ ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡರ ವಿರುದ್ಧ ಮಾಜಿ ಸಚಿವ ಹೆಚ್.ಡಿ. ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.


     ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನ ಲಸಿಕೆ ನೀಡುವ ವಿಚಾರದಲ್ಲೂ ಪಾಲಿಟಿಕ್ಸ್ ತರಲಾಗಿದೆ. ಹಾಸನ ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಎರಡು ಸಾವಿರ ಲಸಿಕೆ ಕೊಡುತ್ತಿರುವುದಕ್ಕೆ ಕೊಡಲಿ ಅದಕ್ಕೆ ಬೇಡ ಅನ್ನುವುದಿಲ್ಲ. ಆದರೇ ದೊಡ್ಡ ಪ್ಲೆಕ್ಸ್ ನಲ್ಲಿ ಯಾರೋ ಒಬ್ಬರ ಪೋಟೋ ಹಾಕೊಂಡಿದ್ದಾರೆ. ವ್ಯಾಕ್ಸಿನ್ ನೀಡುವ ಸಂಬAಧ ಮಾಹಿತಿ ಬರೆದು ಕೊಡುತ್ತಿರುವ ಕಾರ್ಡ್ನಲ್ಲಿ, ಫ್ಲೆಕ್ಸ್ನಲ್ಲಿ ಪ್ರೀತಂಗೌಡ ಫೋಟೋ ಇದೆ. ಪ್ರೋಟೋಕಾಲ್ ಪ್ರಕಾರ ಎಲ್ಲರ ಫೋಟೋ ಹಾಕಲಿ ಎಂದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮನೆದುಡ್ಡಿನಿಂದ ಯಾವ ಲಸಿಕೆ ಕೊಡುತ್ತಿಲ್ಲ. ಜನರ ತೆರಿಗೆ ದುಡ್ಡಿನಲ್ಲಿ ವ್ಯಾಕ್ಸಿನ್ ಕೊಡ್ತಿದ್ದಾರೆ ಎಂದು ಶಾಸಕ ಪ್ರೀತಮ್ ವಿರುದ್ಧ ಪರೋಕ್ಷವಾಗಿ ತಮ್ಮ ಆಕ್ರೋಶವನ್ನು ಹೊರ ಹಾಕಿದರು. 

      ಯಾವುದೇ ಹಳ್ಳಿಯಲ್ಲಿ ಶೇಕಡ ೧೦ ರಷ್ಟು ವ್ಯಾಕ್ಸಿನ್ ಕೊಟ್ಟಿರುವುದಿಲ್ಲ. ನಮ್ಮ ತಾಲೂಕಿಗೆ ಲಸಿಕೆ ಕೊಟ್ಟರೆ 

ಯಡಿಯೂರಪ್ಪ ನವರದ್ದೆೆ ಬೇಕಾದರೇ ಪ್ಲೆಕ್ಸ್ ಹಾಕೋತಿವಿ. ಹಳ್ಳಿಗಳ ಕಡೆ ನಿಮ್ಮ ಫೋಟೋ ನೇತಾಕೊಂಡ್ ಹೋಗ್ತೇವೆ ಎಂದು ವ್ಯಂಗ್ಯವಾಡಿದ ಅವರು, ಮೊದಲು ಲಸಿಕೆ ಕೊಟ್ಟು ನಮ್ ಜನರ ಜೀವ ಉಳಿಸಿ. ಇದರಲ್ಲಿಯೂ ಏನಾದರೂ ರಾಜಕೀಯ ಬೆರೆಸಿದರೆ ನಾವು ಬೇರೆ ರೂಪಕ್ಕೆ ತೆಗೆದುಕೊಂಡು ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಬನ್ನಿ ರಾಜಕೀಯ ಮಾಡೋದಾದ್ರೆ ನಾವೂ ರಾಜಕೀಯ ಮಾಡ್ತೇವೆ ಸಿದ್ಧರಿದ್ದೇವೆ.

ಇಂತಹವುದಕ್ಕೆಲ್ಲಾ ಕಡಿವಾಣ ಹಾಕದೇ ಹೋದ್ರೆ ಹೋರಾಟ ಮಾಡಬೇಕಾಗುತ್ತದೆ. ಇದಕ್ಕೆ ಜಿಲ್ಲಾಧಿಕಾರಿ, ನಗರಸಭೆ ಆಯುಕ್ತರು ಉತ್ತರ ಕೊಡಬೇಕು. ಬಿಜೆಪಿಯೇ ಶಾಶ್ವತವಾಗಿ ಅಧಿಕಾರವಿರುತ್ತದೆಂದು ಅಧಿಕಾರಿಗಳು ತಿಳಿದುಕೊಂಡಿದ್ದಾರೆ ಎಂದು ಸಿಡಿಮಿಡಿಗೊಂಡರು.

      ಏನೆ ನಡೆದರೂ ಸಿದ್ದರಾಮಯ್ಯ ಒಬ್ಬರೇ ಕೂಗಾಡುವ ಪರಿಸ್ಥಿತಿ ಬಂದಿದೆ ರಾಜ್ಯದಲ್ಲಿ. ರಾಜಕೀಯವಾಗಿ ದೇವರು ಶಕ್ತಿಕೊಟ್ಟಾಗ ನಾನು ಕೆಲಸ ಮಾಡುತ್ತೇನೆ. ಕಾಂಗ್ರೆಸ್ ಪಕ್ಷದ ಉಳಿದವರು ಏಕೆ ಮಾತನಾಡುತ್ತಿಲ್ಲ. ಈ ರೀತಿ ದ್ವೇಷದ ರಾಜಕಾರಣ ಮಾಡಿದರೆ ಒಂದಲ್ಲ ಒಂದು ದಿನ ದೇವರೇ ಶಿಕ್ಷೆ ಕೊಡೋ ಕಾಲ ಬಂದೆ ಬರುತ್ತದೆ. ಮೋದಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದರು, ಈಗ ಉಸಿರೇ ಬಿಡುತ್ತಿಲ್ಲ. ಕೊರೊನಾದಿಂದ ಸಾವನ್ನಪ್ಪಿದವರ ಲೆಕ್ಕಾಚಾರವನ್ನು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮುಚ್ಚಿಡುತ್ತದೆ. ಸರಿಯಾಗಿ ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ಮಾಡುತ್ತಿಲ್ಲ. ಕಡಿಮೆ ಸಂಖ್ಯೆಯಲ್ಲಿ ಕೊವಿಡ್ ಟೆಸ್ಟ್ ಮಾಡಲಾಗುತ್ತಿದೆ. ಇನ್ನು ನೂರಾರು ಕೋಟಿ ರೂಗಳ ಲೂಟಿ ನಡೆಯುತ್ತಿದ್ದು, ಇನ್ನೊಂದು ವಾರದೊಳಗೆ ದಾಖಲೆ ಸಮೇತ ಸಾಕ್ಷಿ ಬಿಡುಗಡೆ ಮಾಡುತ್ತೇನೆ. ನೀರಾವರಿ ಇಲಾಖೆಯಲ್ಲಿ ದೊಡ್ಡದಾದ ಭ್ರಷ್ಟಚಾರ ನಡೆಯುತ್ತಿದ್ದು, ಎ೧ ಆಗಿ ಯಡಿಯೂರಪ್ಪನವರ ಮೇಲೆ ಕೇಸು ದಾಖಲಿಸುತ್ತೇನೆ. ಮುಖ್ಯಮಂತ್ರಿಗಳೆ ಹಣಕಾಸು ಮಂತ್ರಿಯಾಗಿದ್ದು, ಅಧಿಕಾರಿಗಳನ್ನೊಳಗೊಂಡAತೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದರು. ಲಸಿಕೆ ಕೊಡುವುದಕ್ಕೆ ಹಣವಿಲ್ಲ ಎಂದು ಹೇಳುತ್ತಾರೆ. ಶಾಸಕರ ದುಡ್ಡಿಲ್ಲ. ಈಗ ಇವಕ್ಕೆಲ್ಲಾ ಹೇಗೆ ದುಡ್ಡು ಬಂದಿದೆ.. ರಾಜ್ಯದ ಜನರಿಗೆ ೧೫೦೦ ಕೋಟಿ ರೂಗಳ ಕೊಟ್ಟಿರುವುದಾಗಿ ಹೇಳಲಾಗಿದೆ ಎಂದು ಕೆಲ ದಾಖಲೆ ತೋರಿಸಿ ಮುಂದೆ ಇನ್ನು ಹೆಚ್ಚಿನ ದಾಖಲೆ ಸಂಗ್ರಹಿಸಿ ಶೀಘ್ರ ದಾಖಲೆ ಸಮೇತ ಬಿಡುಗಡೆ ಮಾಡವೇ. ದ್ವೇಷದ ರಾಜಕಾರಣ ಮಾಡಿಕೊಂಡು ಜನರನ್ನು ಕೊಲ್ಲಬೇಡಿ. ಬಾಲಬಡುಕ ಅಧಿಕಾರಿಗಳು ಯಾವತ್ತಾದರೂ ತಗುಲಿ ಹಾಕಿಕೊಳ್ಳುತ್ತಾರೆ ಎಂದು ಸರಕಾರದ ವಿರುದ್ಧ ಆಕ್ರೋಶಭರಿತವಾಗಿ ಮಾತನಾಡಿದರು.

     ಡಿ.ಕೆ. ಶರತ್:

ಹಾಸನ ಜಿಲ್ಲಾ ಶಂಕರ್ ನಾಗ್ ಅಭಿಮಾನಿಗಳ ಸಂಘದ ಗೌರವಾಧ್ಯಕ್ಷರಾದ ಮತ್ತು ಹುಡಾ ನಿರ್ದೇಶಕರಾದ ಡಿ.ಕೆ. ಶರತ್ ಮಾಧ್ಯಮದೊಂದಿಗೆ ಮಾತನಾಡಿ, ಶಂಕರ್ ನಾಗ್ ಅಂದರೆ ಆಟೋ ಚಾಲಕರಿಗೆ ಸ್ಪೂರ್ತಿ. ಅವರ ಸಂಘದವನ್ನು ಕಟ್ಟಿಕೊಂಡಿದ್ದೇವೆ. ಆಟೋ ಚಾಲಕರಿಗೆ ರಕ್ಷಣೆ ಕೊಡುತ್ತಿರುವ ಶಾಸಕರಾದ ಪ್ರೀತಮ್ ಜೆ. ಗೌಡರ ಎಲ್ಲಾ ಕಾರ್ಯಕ್ಕೂ ನಾವು ಸ್ವಾಗತಿಸುತ್ತೇವೆ. ವ್ಯಾಕ್ಸಿನ್ ನೀಡುವ ಸಂಬAಧ ಮಾಹಿತಿ ಬರೆದು ಕೊಡುತ್ತಿರುವ ಕಾರ್ಡ್ನಲ್ಲಿ, ಫ್ಲೆಕ್ಸ್ನಲ್ಲಿ ಪ್ರೀತಂಗೌಡ ಫೋಟೋ ವನ್ನು ನಾವು ಮುದ್ರಿಸಿ ಕೊಟ್ಟಿದ್ದೇವೆ ಅಷ್ಟೆ. ಇದರಲ್ಲಿ ಯಾವ ರಾಜಕೀಯ ಮಾಡುವುದು ಬೇಡ ಎಂದು ಈಬ್ಗಗೆ ವಿರೋಧವ್ಯಕ್ತಪಡಿಸಿರುವ ಮಾಜಿ ಸಚಿವ ಹೆಚ್.ಡಿ. ರೇವಣ್ಣನವರಿಗೆ ಕೋರಿದ್ದಾರೆ


Post a Comment

Previous Post Next Post