ಹಾಸನ: ಜಿಲ್ಲೆಯ ಬೇಲೂರು ತಾಲೂಕು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾದಿಹಳ್ಳಿ ಹೋಬಳಿ ಹಗರೆ ಗ್ರಾಮದಲ್ಲಿ ಅಂಗವಿಕಲರು, ಆಸಹಾಯಕರು ಹಾಗೂ ಕಡು ಬಡವರಿಗೆ ಆಹಾರ ಕಿಟ್ ಹಾಗೂ ತರಕಾರಿ ವಿತರಣೆ ಕಾರ್ಯಕ್ರಮವನ್ನು ಮಾಜಿ ಸಚಿವರು ಹಾಗೂ ಕೆಪಿಸಿಸಿ ಉಪಾಧ್ಯಕ್ಷರು ಸನ್ಮಾನ್ಯ ಬಿ ಶಿವರಾಮು ರವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕೊರೋನಾ ಆವರಿಸಿದ ಹಿನ್ನಲೆಯಲ್ಲಿ ಲಾಕ್ಡೌನ್ ಜಾರಿಯಲ್ಲಿದೆ. ಇದರಿಂದ ಕೆಲಸವಿಲ್ಲದೇ ಅನೇಕ ಕಡು ಬಡವರು ಒಂದು ಹೊತ್ತು ಉಟಕ್ಕೂ ಪರದಾಡುವ ಸ್ಥಿತಿ ಬಂದಿದೆ. ಅಂತವರನ್ನು ಗುರುತಿಸಿ ಪ್ರತಿನಿತ್ಯ ಉಪಯೋಗಿಸುವ ಆಹಾರದ ದಾನ್ಯ ಮತ್ತು ತರಕಾರಿ ನೀಡುವ ಕೆಲಸ ಮಾಡಲಾಗುತ್ತಿದೆ ಎಂದರು. ಇನ್ನು ಕೊರೋನಾ ವಿರುದ್ಧ ಹೋರಾಡಲು ಕಡ್ಡಾಯವಾಗಿ ಮಾಸ್ಕ್ ಬಳಕೆ, ಆಗಾಗ್ಗೆ ಸ್ಯಾನಿಟೈಟರ್, ಸಾಮಾಜಿಕ ಅಂತರದ ಜೊತೆಗೆ, ಸಭೆ ಸಮಾರಂಭ ಹೋಗುವುದನ್ನು ನಿಯಂತ್ರಿಸಿ ಮನೆಯಲ್ಲಿ ಇರುವುದರ ಮೂಲಕ ಕೊರೋನಾದಿಂದ ದೂರ ಇರಲು ಸಾಧ್ಯ ಎಂದು ಜಾಗೃತಿ ಮೂಡಿಸಿದರು.
ಇದೆ ವೇಳೆ ಬೇಲೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾದಿಹಳ್ಳಿ ಹೋಬಳಿ ಹಗರೆ ಗ್ರಾಮದ ಎಪಿಎಂಸಿ ಸದಸ್ಯರಾದ ರಾಮೇಗೌಡರವರ ಮಗ ಎಂ.ಆರ್. ರವಿರಾಮೇಗೌಡ ರವರು ಬಿಜೆಪಿ ಪಕ್ಷ ತೋರೆದು ಮಾಜಿ ಸಚಿವರು ಹಾಗೂ ಕೆಪಿಸಿಸಿ ಉಪಾಧ್ಯಕ್ಷರು ಸನ್ಮಾನ್ಯ ಬಿ ಶಿವರಾಮು ರವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಜಿಲ್ಲಾ ಯೂತ್ ಕಾಂಗ್ರೆಸ್ ಉಪಾಧ್ಯಕ್ಷರಾದ ಕೋಮಲೇಶ್, ತಾಲ್ಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ದರ್ಶನ್, ಹಳೇಬೀಡು-ಜಾವಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿರೂಪಾಕ್ಷ, ತಾಲ್ಲೂಕು ಪಂಚಾಯಿತ್ ಸದಸ್ಯರಾದ ಅಡಗೂರು ವಿಜಯಕುಮಾರ್, ಹೋಬಳಿ ಅಧ್ಯಕ್ಷರಾದ ಎಸ್ ಗೌಡರು, ಹಿಂದುಳಿದ ವರ್ಗದ ಹೋಬಳಿ ಅಧ್ಯಕ್ಷರಾದ ಸುರೇಶ್ ಬೈ, ಮಾದಿಹಳ್ಳಿ ಹೋಬಳಿ ರೈತ ಸಂಘದ ಅಧ್ಯಕ್ಷರಾದ ಅಂಗಡಿಹಳ್ಳಿ ರಂಗಸ್ವಾಮಿ, ಆಂದಲೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಹಾರೋಹಳ್ಳಿ ಪಾಪಣ್ಣ, ಇಬ್ಬೀಡು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ರಮೇಶ್, ಮುಖಂಡರಾದ ಅಂದಲೆ ಹರ್ಷ, ರವೀಶ್, ಪಂಡಿತನಹಳ್ಳಿ ಸುನಿಲ್, ಬೆಟ್ಟದಾಲೂರು ಸೋಮೇಶ್, ಸುನಿಲ್, ಬಾಲು, ಅಂಗಡಿಹಳ್ಳಿ ರಮೇಶ್, ಮಾದಿಹಳ್ಳಿ ಸೋಮೇಶ್, ಹಗರೆ ಆಟೋ ಶಿವಣ್ಣ ಇತತರು ಉಪಸ್ಥಿತರಿದ್ದರು.
