> ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಇಂಧನ ಬೆಲೆ ಏರಿಕೆ ಖಂಡಿಸಿ ಇಂದು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು .
> ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಂಗನಾಥ್ ಯುಪಿಎ ರ‍್ಕಾರದ ಅವಧಿಯಲ್ಲಿ ಇಂಧನ ಬೆಲೆ ೬೫ ರೂ. ಗೆ ಏರಿದ ಸಂರ‍್ಭದಲ್ಲಿ ದೇಶದಾದ್ಯಂತ ಬಿಜೆಪಿ ಪಕ್ಷದವರು ಬೆಲೆಯೇರಿಕೆ ಖಂಡಿಸಿ ಬೃಹತ್ ಪ್ರತಿಭಟನಾ ರ‍್ಯಾಲಿಯನ್ನು ನಡೆಸಿದ್ದರು, ಆದರೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ಕೇವಲ ಏಳೇ ರ‍್ಷದಲ್ಲಿ ೬೫ರೂ ಇದ್ದಂತಹ ಇಂಧನ ಬೆಲೆ ಮೂರಂಕಿಯನ್ನು ದಾಟಿದ್ದರೂ ಸಹ ಯಾವೊಬ್ಬ ಬಿಜೆಪಿ ಪಕ್ಷದ ಜನಪ್ರತಿನಿಧಿ ಬೆಲೆಯೇರಿಕೆ ವಿರೋಧಿಸಿ ಮಾತನಾಡದೇ ಇರುವುದು ನಿಜಕ್ಕೂ ದುರದೃಷ್ಟಕರ ಹಾಗೆಯೇ ಎಲ್ ಪಿಜಿ ಅಡುಗೆ ಅನಿಲದ ದರವು ಕೂಡ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಜನಸಾಮಾನ್ಯರ ಜೀವನದ ಮೇಲೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಆದ್ದರಿಂದಾಗಿ ಕೂಡಲೇ ಕೇಂದ್ರ ರ‍್ಕಾರವು ತೈಲದ ಮೇಲೆ ವಿಧಿಸಿರುವ ತೆರಿಗೆಯನ್ನು ಕಡಿತಗೊಳಿಸಿ ಜನಸಾಮಾನ್ಯರಿಗೂ ಅನುಕೂಲವಾಗುವ ರೀತಿಯಲ್ಲಿ ದರವನ್ನು ಪರಿಷ್ಕರಿಸಬೇಕು ಇಲ್ಲವಾದಲ್ಲಿ ದೇಶದಾದ್ಯಂತ ತೈಲ ವಿರೋಧಿ ಪ್ರತಿಭಟನೆಗಳು ನಡೆಯುವುದರಲ್ಲಿ ಸಂಶಯವಿಲ್ಲ ಎಂದು ಮಾತನಾಡಿದರು .
> ನಂತರ ಮಾತನಾಡಿದ ಕಾಂಗ್ರೆಸ್ ಮುಖಂಡ ಟೀಕರಾಜು ಕೇವಲ ಇಂಧನ ಬೆಲೆ ಅಷ್ಟೇ ಅಲ್ಲದೆ ದಿನಬಳಕೆಯ ವಸ್ತುಗಳ ಬೆಲೆಯೂ ಸಹ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು ಇದು ಜನಸಾಮಾನ್ಯರ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು ಕೂಡಲೇ ರ‍್ಕಾರ ಇದರತ್ತ ಗಮನಹರಿಸಿ ಜನಸಾಮಾನ್ಯರು ನೆಮ್ಮದಿಯ ನಿಟ್ಟುಸಿರು ಬಿಡುವಂತಹ ರೀತಿಯಲ್ಲಿ ಕರ‍್ಯಪ್ರವೃತ್ತಿ ಕೊಳ್ಳಬೇಕಿದೆ ಎಂದು ಒತ್ತಾಯಿಸಿದರು .
> ಈ ಸಂರ‍್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಹೆಮ್ಮಿಗೆ ಮೋಹನ್ , ಶಾಂತಕೃಷ್ಣ , ಅಜ್ಜೇನಹಳ್ಳಿ ಲೋಕೇಶ್ , ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಶಿವಣ್ಣ , ಪಟ್ಟಣ ಪಂಚಾಯಿತಿ ಸದಸ್ಯರಾದ ತಾಹಿರಾ ಬೇಗಮ್ ಹಾಗೂ ಇತರ ಮುಖಂಡರುಗಳು ಹಾಜರಿದ್ದರು
