ಬೇಲೂರು .ತಾಲ್ಲೂಕಿನ ಮಲೆನಾಡು ಭಾಗವಾದ ಅರೇ ಹಳ್ಳಿ ಹೋಬಳಿಯ ಸುತ್ತ ಮುತ್ತ ಹಳ್ಳಿ ಗಳಲ್ಲಿ ಕೊರೋನಾ ಸೋಂಕು ಮಿತಿಮೀರಿದ್ದು ಸರ‍್ವಜನಿಕರು ಭಯಪಡದೆ ತಮ್ಮ ಕುಟುಂಬಗಳ ಆರೋಗ್ಯದ ದೃಷ್ಟಿಯಿಂದ ಎಲ್ಲರೂ ಕೂಡ ಕೊರೋನಾ ಪತ್ತೆ ಹಚ್ಚುವ ಆಂದೋಲನದಲ್ಲಿ ಭಾಗವಹಿಸಿ ರೋಗ ನಿಯಂತ್ರಣ ಮಾಡಲು ಸಹಕಾರ ನೀಡಬೇಕು ಎಂದು ಅರೇ ಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಹೇಳಿದರು .
ರ‍್ಕಾರ ಕಡ್ಡಾಯವಾಗಿ ಪ್ರತಿಯೊಬ್ಬ ನಾಗರಿಕರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಆದೇಶ ಹೊರಡಿಸಿದೆ, ದಿನ ಕಳೆದಂತೆ ಸೋಂಕಿತರ ಪ್ರಮಾಣ ಹೆಚ್ಚಿಗ ತೊಡಗಿದ್ದು ನ್ಯಾಯಬೆಲೆ ಅಂಗಡಿಯ ಗ್ರಾಹಕರಿಗೆ ವಿತರಿಸಲಾಗುತ್ತಿದ್ದ ಪಡಿತರ ಧಾನ್ಯ ಪಡೆಯಲು ತೊಂದರೆಯಾಗದಂತೆ, ವಿನಾಯಕ ಭವನ, ಕೇಶವ ನಗರ,. ಬಸ್ ನಿಲ್ದಾಣ, ಕಡೆರ‍್ಜೆ,ಸೇರಿದಂತೆ ನಾಲ್ಕು ಕಡೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಈ ವೇಳೆ ಪಡಿತರ ಧಾನ್ಯ ಪಡೆಯಲು ಬಂದಿದ್ದ ನೂರಾರು ಜನ ಸಾಮಾಜಿಕ ಅಂತರದೊಂದಿಗೆ ಕೋವಿಡ್ ತಪಾಸಣೆ ಮಾಡಿಸಿ ಕೊಂಡರು.
ಈ ಸಂರ‍್ಭ ನ್ಯಾಯಬೆಲೆ ಅಂಗಡಿಯ ಹಾಲಪ್ಪ ಇತರರು ಹಾಜರಿದ್ದರು.
