ಅಕ್ರಮ ಮರಳು-ಕಲ್ಲುಗಣಿಗಾರಿಕೆ ನಿಲ್ಲಿಸದಿದ್ರೆ, ಸಂತ್ರಸ್ತರಿಗೆ ಭೂಮಿ ಮಂಜೂರು ಮಾಡದಿದ್ರೆ ಹೋರಾಟ: ಹೊನ್ನವಳ್ಳಿ ಗಣೇಶ್

ಹಾಸನ: ಅಕ್ರಮ ಮರಳು ಸಾಗಾಣಿಕೆ, ಕಲ್ಲು ಗಣಿಗಾರಿಕೆ ನಿಲ್ಲಿಸದಿದ್ರೆ ಮತ್ತು  ಮುಳುಗಡೆ ಸಂತ್ರಸ್ತರಿಗೆ ಭೂಮಿ ಮಂಜೂರು ಮಾಡದಿದ್ದರೇ ಜಿಲ್ಲಾಧಿಕಾರಿ ಕಛೇರಿ ಮುಂದೆ ಉಗ್ರ ಹೋರಾಟ ಮಾಡುವುದಾಗಿ ಕಾಂಗ್ರೆಸ್ ಮುಖಂಡರಾದ ಹೊನ್ನವಳ್ಳಿ ಗಣೇಶ್ ಎಚ್ಚರಿಸಿದರು.


     ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡುತ್ತಾ, ಆಲೂರು ತಾಲ್ಲೂಕು ಕೆಂಚಮ್ಮನಹೊಸಕೋಟೆ ಹೋಬಳಿಯಲ್ಲಿ ಅಕ್ರವಾಗಿ ಕಲ್ಲು ಹಾಗೂ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಇದನ್ನೂ ಕೂಡಲೇ ನಿಲ್ಲಿಸಬೇಕು. ಹಗಲು ವೇಳೆಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯ ಸ್ಫೋಟಕ್ಕೆ ಕಾಡು ಪ್ರಾಣಿಗಳು ಊರುಗಳತ್ತ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಲೇ ಕಾಡಾನೆಗಳು ದಾಳಿ ಮಾಡಿ ಅಪಾರ ಪ್ರಮಾಣದಲ್ಲಿ ಸಾವು ನೋವುಗಳು ಸಂಭವಿಸಿದೆ. ಬೆಳೆ ಹಾನಿ ಲೆಕ್ಕಕ್ಕಿಲ್ಲವಾಗಿದೆ. ಇದಕ್ಕೆ ಮರಳು ಹಾಗೂ ಕಲ್ಲು ಗಣಿಗಾರಿಕೆ ಪ್ರಮುಖ ಕಾರಣವಾಗಿದೆ. ಇದನ್ನು ತಡೆಯುವಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ದೂರಿದುರ. ಇನ್ನು ಕೋವಿಡ್ ತುರ್ತು ಸಂದರ್ಭದಲ್ಲಿಯೂ ಗಣಿಗಾರಿಕೆಯಲ್ಲಿ ತೊಡಗಿರುವ ಕಾರ್ಮಿಕರು ಯಾವುದೇ ನಿಯಮಗಳನ್ನು ಪಾಲಿಸದ ಕಾರಣ ಹಳ್ಳಿಹಳ್ಳಿಯಲ್ಲಿ ಕೊರೋನಾ ಹರಡಲು ಕಾರಣವಾಗಿದೆ.  ಮಲ್ಲಾಪುರ ಪಂಚಾಯಿತಿ ವ್ಯಾಪ್ತಿಯಲ್ಲಿಯೇ ಸಾಕಷ್ಟು ಜನರಿಗೆ ಕೋವಿಡ್ ಸೋಂಕು ತಗುಲಿದ್ದು, ಜನರು ಆತಂಕಗೊAಡಿದ್ದಾರೆ. ಮರಳು, ಕಲ್ಲು ಗಣಿಗಾರಿಕೆ ಕೆಂಚಮ್ಮಹೊಸಕೋಟೆ ಹೋಬಳಿಯಲ್ಲಿ ಹೆಚ್ಚು ನಡೆಯುತ್ತಿರುವುದರಿಂದ ಸೋಂಕಿತರ ಸಂಖ್ಯೆ ಹೆಚ್ಚಾಗಿ ಸಾಕಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆಲ್ಲ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರು ಕೋವಿಡ್ ನಿಯಮ ಉಲ್ಲಂಘನೆ ಮಾಡಿರುವುದು ಕಾರಣವಾಗಿದೆ.  ನಮ್ಮ ಗ್ರಾಮ ನಮ್ಮ ಸೇವೆ'ಯಡಿಯಲ್ಲಿ ಈಗಾಗಲೇ ಯುವಕರ ತಂಡ ಕೋವಿ ಸೋಂಕಿತರಿಗೆ ಸಹಾಯಸ್ತ ನೀಡುತ್ತಿರುವುದು ಶ್ಲಾಘನೀಯವಾಗಿದ್ದು, ಇವರಿಗೆ ತುಂಬು ಹೃದಯದ ಧನ್ಯವಾದಗಳು. ನಾನು ಕೂಡ ಮುಂದಿನ ದಿನಗಳಲ್ಲಿ ನಮ್ಮ ಕ್ಷೇತ್ರದಲ್ಲಿ ಕೋವಿಡ್‌ನಿಂದ ಮೃತಪಟ್ಟ ಕುಟುಂಬಗಳಿಗೆ ಸಹಾಯ ಮಾಡಿ ಸಾಂತ್ವನ ಹೇಳುವ ಕಾರ್ಯಕ್ರಮ ಶೀಘ್ರ ಹಮ್ಮಿಕೊಳ್ಳಲಾಗುವುದು ಎಂದರು. 

      ಕೆಂಚಮ್ಮನ ಹೊಸಕೋಟೆ ಹೋಬಳಿಯಲ್ಲಿಯೇ ಸಾಕಷ್ಟು ಮುಳುಗಡೆ ಸಂತ್ರಸ್ತರಿದ್ದು, ಅವರಿಗೆ ಇದುವರೆಗೂ ಭೂಮಿ ಸಿಕ್ಕದಾಗಿದೆ. ಇಲ್ಲಿನ ನಿಜವಾದ ಸಂತ್ರಸ್ತರಿಗೆ ಮಂಜೂರಾದ ಜಮೀನನ್ನು ಜಿಲ್ಲಾಧಿಕಾರಿಗಳು ತಡೆಹಿಡಿದಿದ್ದಾರೆ. ಯಾವ ಕಾರಣಕ್ಕೆ ಜಿಲ್ಲಾಧಿಕಾರಿಗಳು ಈ ರೀತಿಯ ನಿರ್ಧಾರ ಕೈಗೊಂಡಿದ್ದಾರೆ ಎಂಬುವುದನ್ನು ಬಹಿರಂಗ ಪಡಿಸಿ, ನಿಜವಾದ ಸಂತ್ರಸ್ತರಿಗೆ ತೀವ್ರ ಅನ್ಯಾಯವಾಗಬಾರದು. ಹೆಚ್‌ಆರ್‌ಪಿ ಇಲಾಖೆಯಲ್ಲಿ ಹಗರಣ ನಡೆದರೆ ಅದರ ವಿರುದ್ದ ಉನ್ನತ ಮಟ್ಟದ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಈಗಾಗಲೇ ಅಕ್ರಮ ಮಾಡಿರುವವರ ಮೇಲೆ ಯಾವುದೇ ಕ್ರಮ ಆಗಿರುವುದಿಲ್ಲ. ಜಿಲ್ಲಾಧಿಕಾರಿಗಳು ವಾಸ್ತವ ಅರಿತು ನಿಜವಾದ ಫಲಾನುಭವಿಗಳಿಗೆ ಭೂಮಂಜರಾತಿ ಮಾಡಿಕೊಡಬೇಕು. ಇಲ್ಲವಾದರೆ ಕೋವಿಡ್ ಲಾಕ್ ಡೌನ್ ಮುಗಿದ ಮೇಲೆ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಸಿದರು.

      ಕೇಂದ್ರ ಬಿಜೆಪಿ ಸರ್ಕಾರವು ಇಂಧನ, ರಸಗೊಬ್ಬರ, ಹಾಗೂ ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹೆಚ್ಚು ಮಾಡಿರುವುದು ಖಂಡನೀಯ. ಕೂಡಲೇ ಸರ್ಕಾರ ಬೆಲೆ ಏರಿಕೆ ಕಡಿತಗೊಳಿಬೇಕು. ಬಡವರ ಜೀವನದ ಮೇಲೆ ಬಿಜೆಪಿ ಸರ್ಕಾರ ಚೆಲ್ಲಾಟವಾಡುವುದನ್ನು ಬಿಡಬೇಕು ಎಂಬುವುದು ನಮ್ಮ ಆಗ್ರಹವಾಗಿದೆ ಎಂದರು. ಇನ್ನು ದೇಶದ್ಯಾಂತ ಕಾಂಗ್ರೆಸ್ ಪಕ್ಷದಿಂದ ಬೆಲೆ ಏರಿಕೆ ಖಂಡಿಸಿ ಎಐಸಿಸಿ ಹಾಗೂ ಕೆಪಿಸಿಸಿ ಮಾರ್ಗದರ್ಶನದಂತೆ ಎಲ್ಲಾ ಜಿಲ್ಲಾ, ತಾಲ್ಲೂಕು, ಹೋಬಳಿ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುವ ಮೂಲಕ ಬೆಲೆ ಏರಿಕೆ ಖಂಡಿಸಲಾಗುತ್ತಿದೆ. ಇಂದು ಬುಧವಾರ ಎಐಸಿಸಿ ಹಾಗೂ ಕೆಪಿಸಿಸಿ ಹಾಸನ ಜಿಲ್ಲಾ ಉಸ್ತುವಾರಿ ಡಿ.ಕೆ. ಸುರೇಶ್ ಅವರು ಹಾಸನಕ್ಕೆ ಆಗಮಿಸಿ ಜಿಲ್ಲಾ ಕಾಂಗ್ರೆಸ್‌ನಿAದ ನಡೆಯುವ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಲೆ ಏರಿಕೆ ಖಂಡಿಸಲಿದ್ದಾರೆ. ಬೆಲೆ ಏರಿಕೆ ಕಡಿಮೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ರೀತಿ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು.


Post a Comment

Previous Post Next Post