ಹಾಸನ: ಇಂಟರ್ ನ್ಯಾಷನಲ್ ಪೋರಂ ಫಾರ್ ಆ್ಯಂಟಿ ಕರಪ್ಷನ್ ಇವರವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿಗೆ ಸ್ಯಾನಿಟೈಸರ್ ಸ್ಪ್ರೈ ಮಿಷೆನನ್ನು ಕೊಡುಗೆಯಾಗಿ ನೀಡಲಾಯಿತು.
ಇಂಟರ್ ನ್ಯಾಷನಲ್ ಪೋರಂ ಫಾರ್ ಆ್ಯಂಟಿ ಕರಪ್ಷನ್ ಜಿಲ್ಲಾಧ್ಯಕ್ಷ ನಸ್ರುತಾ ಸೈರಜ್ ಮಾಧ್ಯಮದೊಂದಿಗೆ ಮಾತನಾಡಿ, ಕೊರೋನಾ ಆವರಿಸಿರುವ ಹಿನ್ನಲೆಯಲ್ಲಿ ವಿರುದ್ಧ ಹೋರಾಡುವ ಸ್ಯಾನಿಟೈಸರ್ ಮಿಷೆನನ್ನು ನಿರ್ಮಿಸಿದ್ದು, ಇಸ್ಮಾನ್ ಎನ್ನುವವರು ತಮ್ಮ ಪ್ರತಿಭೆ ಮೂಲಕ ಒಂದು ಟೆನಲ್ ಮಾಡುವ ಕನಸ್ಸಿದೆ ಎಂದು ನಿರ್ಮಿಸಿ ಆಸ್ಪತ್ರೆಗೆ, ಕೋವಿಡ್ ಸೆಂಟರ್ ಗೆ ಕೊಡುವ ಉದ್ದೇಶ ಹೊಂದಲಾಗಿದೆ. ಅದರಲ್ಲೂ ಈ ಕೊರೋನಾ ಸಂದರ್ಭದಲ್ಲಿ ಪೊಲೀಸ್ ಇಲಾಖೆಯೂ ಕಷ್ಟದಲ್ಲಿ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ನಾವುಗಳು ಪೊಲೀಸ್ ಅಧಿಕಾರಿಗಳ ಬಳಿ ಈಬಗ್ಗೆ ಚರ್ಚಿಸಿದಾಗ ಸಂತೋಷದಿಂದ ಒಪ್ಪಿದ್ದಾರೆ ಎಂದರು. ಈಬಗ್ಗೆ ಆಸಕ್ತಿ ಹೊಂದಿರುವ ಇಸ್ಮಾನ್ ಗೆ ಸಹಕಾರ ಆಗಲಿ ಎಂಬ ಉದ್ದೇಶ ಹೊಂದಿದ್ದೇವೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಮಾತನಾಡಿ, ಇಸ್ಮಾನ್ ಎನ್ನುವ ಹಾಸನದ ಸ್ಥಳೀಯ ಪ್ರತಿಭೆಯನ್ನು ತೋರಿಸಲು, ಅದನ್ನು ಲಾಂಚ್ ಮತ್ತು ಸಹಾಯ ಮಾಡುವ ನಿಟ್ಟಿನಲ್ಲಿ ಸ್ಯಾನಿಟೈಸರ್ ಮಿಷೆನ್ ಸಿದ್ಧಪಡಿಸಿ ನಮ್ಮ ಕಛೇರಿಗೆ ಅಳವಡಿಸುವ ಮೂಲಕ ಉಚಿತವಾಗಿ ನಮ್ಮ ಇಲಾಖೆಗೆ ನೀಡಿದ್ದಾರೆ ಎಂದರು. ಇಂತಹ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಹಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಇದೆ ವೇಳೆ ಹೆಚ್ಚುವರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ನಂದಿನಿ, ಇಂಟರ್ ನ್ಯಾಷನಲ್ ಪೋರಂ ಫಾರ್ ಆ್ಯಂಟಿ ಕರಪ್ಷನ್ ನ ಹಾಸನ್ ಇನ್ಚಾರ್ಜ್ ಜಿ.ಓ. ಮಹಾಂತಪ್ಪ, ಟೆನಲ್ ನಿರ್ಮಿಸಿದ ಪ್ರತಿಭೆ ಇಸ್ಮಾಲ್ ಇತರರು ಪಾಲ್ಗೊಂಡಿದ್ದರು.