ಹಾಸನ: ಬೇರೆ ಜಿಲ್ಲೆಗಳ ಅಭಿವೃದ್ಧಿಗೆ ಕೇಂದ್ರದಲ್ಲಿ ಹಣ ಇಲ್ಲ ಎಂದು ಹೇಳಿ ಮುಖ್ಯಮಂತ್ರಿಗಳ ಶಿವಮೊಗ್ಗ ಜಿಲ್ಲೆಯೊಂದಕ್ಕೆ ೫,೫೦೦ ಕೋಟಿ ರೂಗಳನ್ನು ಬಿಡುಗಡೆ ಮಾಡಲು ಕೊರೋನಾ ಬಂದಿರುವುದಿಲ್ಲವೇ? ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ಸರಕಾರಕ್ಕೆ ಪ್ರಶ್ನೆ ಮಾಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕರವು ನ್ಯಾಷನಲ್ ಹೈವೆ ರಸ್ತೆ ರಸ್ತೆಗಾಗಿ ಶಿವಮೊಗ್ಗ ಜಿಲ್ಲೆಯೊಂದಕ್ಕೆ ೪ ಸಾವಿರ ಕೋಟಿ ರೂಗಳು ಮತ್ತು ೧೫೦೦ ಕೋಟಿ ಸೇರಿ ಒಟ್ಟು ೫,೫೦೦ ಕೋಟಿ ರೂಗಳನ್ನು ಬಿಡುಗಡೆ ಮಾಡಿದ್ದಾರೆ. ಕೇಂದ್ರದಲ್ಲಿ ಒಂದು ಕಡೆ ಹಣ ಇಲ್ಲ ಎನ್ನುತ್ತಿದೆ. ಕರ್ನಾಟಕ ರಾಜ್ಯಲ್ಲಿ ಮುಖ್ಯಮಂತ್ರಿಗಳ ಜಿಲ್ಲೆಗೆ ಮಾತ್ರ ಪ್ರಾಮುಖ್ಯತೆ ನೀಡಿದರೇ ಬೇರೆ ಜಿಲ್ಲೆಗಳ ಪರಿಸ್ಥಿತಿ ಏನು? ಹೆಚ್.ಡಿ. ಕುಮಾರಸ್ವಾಮಿ ಆಡಳಿತದಲ್ಲಿ ಹಾಸನದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ೫೦ ಕೋಟಿ ರೂ ಬಿಡುಗಡೆ ಮಾಡಿದ ವೇಳೆ ಇದೆ ಬಿಜೆಪಿ ಪಕ್ಷದಿಂದ ಹಾಸನ-ಮಂಡ್ಯ-ರಾಮನಗರ ಬಜೆಟ್ ಆಗಿದೆ ಎಂದು ದೂರಿದ್ರು. ಆದರೆ ಈಗ ಒಂದು ಜಿಲ್ಲೆಗೆ ಇಷ್ಟೊಂದು ಹಣ ಬಿಡುಗಡೆ ಮಾಡಿದ್ರೂ ಬಿಜೆಪಿ ಪಕ್ಷದ ಶಾಸಕರು ಮತ್ತು ಸಂಸದರು ಉಸಿರೆ ಬಿಡುತ್ತಿಲ್ಲ. ಎಂದು ಅಸಮಧಾನವ್ಯಕ್ತಪಡಿಸಿದರು. ಕೇಂದ್ರದ ಹಣ ಒಮದು ಜಿಲ್ಲೆಗೆ ವಿನಿಯೋಗವಾಗುತ್ತಿದ್ದು, ಇದುವರೆಗೂ ೨೫ ಜನ ಎಂಪಿಗಳಿಗೆ ಎಷ್ಟೆಷ್ಟು ಹಣ ಕೊಟ್ಟಿದ್ದಾರೆ? ಕನಿಷ್ಟ ಒಂದೊAದು ಸಾವಿರ ರೂಗಳಾದರೂ ಕೊಡಬೇಕು ಎಂದು ಒತ್ತಾಯಿಸಿದರು. ಅಚ್ಛೆ ದಿನ್ ಆಯಿಗಾ ಎಂದು ಹೇಳಿ ಶಿವಮೊಗ್ಗ ಜಿಲ್ಲೆಗೆ ಮಾತ್ರ ಅನ್ವಯಿಸಿದೆ. ಗೌರವ ಎಂಬುವುದು ಇದ್ರೆ ಆ ಜಿಲ್ಲೆಯ ಜನತೆಗೆ ನ್ಯಾಯಕ್ಕಾಗಿ ರಾಜಿನಾಮೆ ಕೂಡುವುದು ಕ್ಷೇಮ ಎಂದು ಗುಡುಗಿದ ಅವರು, ಈ ರಾಜ್ಯ ಸರಕಾರದ ಬಗ್ಗೆ ಹೇಳುವವರು, ಕೇಳುವವರು ಯಾರು ಇಲ್ಲ. ಈ ಮಟ್ಟಕ್ಕೆ ಸರಕಾರ ಇದೆ ಎಂದರು.
ಕೇಂದ್ರದ ಮಂತ್ರಿ ಗಡ್ಕರಿ ಅವರು ಹಾಸನದಲ್ಲಿ ಪೌಂಡೇಶನ್ ಹಾಕಿ ಹೋದರೂ ಕಾಮಗಾರಿ ಆಗೆ ಉಳಿದಿದೆ. ಗಡ್ಕರಿ ಒಬ್ಬ ಡೈನಾಮಿಕ ಲೀಡರ್. ನಾನು ಕಂಡAತಹ ಮಂತ್ರಿ ಎಂದರೆ ಟಿ.ಆರ್. ಬಾಲು ಮತ್ತು ಗಡ್ಕರಿ ಉತ್ತಮ ಮಂತ್ರಿ. ಯಾವುದೇ ಆರೋಪ ಮಾಡಬೇಕಾದರೇ ನಾ ದಾಖಲೆ ಇಟ್ಟುಕೊಂಡೆ ಮಾತನಾಡುತ್ತೇನೆ. ಇನ್ನು ಪಕ್ಷದ ಯಾವ ಶಾಸಕರು ಮತ್ತು ಸಂಸದರು ಮುಖ್ಯಮಂತ್ರಿಗಳಿಗೆ ಜೈ ಅನ್ನುತ್ತಾರೆ ಅಂತಹ ಕ್ಷೇತ್ರಕ್ಕೆ ಹಣ ಬಿಡುಗಡೆ ಮಾಡುತ್ತಾರೆ. ಇಲ್ಲಿಯವರೆಗೂ ಶಾಸಕರ ಅನುಧಾನ ಬಿಡುಗಡೆ ಮಾಡದೇ ತಡೆ ಹಿಡಿದಿರುವುದಾಗಿ ಆಕ್ರೋಶವ್ಯಕ್ತಪಡಿಸಿದರು.
ಕಳೆದ ೧೦ ವರ್ಷಗಳಿಂದ ಹಾಸನ-ಬಿಸಿಲೆ ರಸ್ತೆಯನ್ನು ಮಾಡಿರುವುದಿಲ್ಲ. ಇಲ್ಲಿವರೆಗೂ ಅದೇಷ್ಟು ಜನರು ಸಾವನಪ್ಪಿದ್ದಾರೆ? ರಸ್ತೆ ಮಾಡದಿರಲು ಇದಕ್ಕೆ ಏನು ಕಾರಣ? ಇನ್ನು ಮುಂದೆ ವಾರದಲ್ಲಿ ಎರಡು ದಿನ ಒಂದೊAದು ವಿಚಾರವನ್ನು ಇಟ್ಟುಕೊಂಡು ದಾಖಲೆ ಸಮೇತ ಬಿಡುಗಡೆ ಮಾಡಲಾಗುವುದು. ವಿಧಾನ ಸೌದದಲ್ಲಿ ನಡೆಯುವ ಸಭೆ ಒಳಗೆ ದಾಖಲೆ ಸಮೇತ ವಿಚಾರವನ್ನು ಮುಂದೆ ಇಡಲಾಗುವುದು. ೩ನೇ ಅಲೆ ಬಗ್ಗೆ, ಹಣಕಾಸು ಪರಿಸ್ಥಿತಿ ಬಗ್ಗೆ ಚರ್ಚೆ ಮಾಡುವುದಾಗಿ ಎಚ್ಚರಿಸಿದರು. ಇಂದು ಒಂದು ಲೀಟರ್ ಪೆಟ್ರೋಲ್ ಗೆ ರಾಜ್ಯವು ೨೬ ರೂಗಳ ಮತ್ತು ಕೇಂದ್ರವು ೩೧ ರೂಗಳ ತೆರಿಗೆ ವಿಧಿಸುತ್ತಿದೆ. ಅಬಕಾರಿ ಇಲಾಖೆ ಒಂದರಲ್ಲೆ ೨೫೦೦ ಕೋಟಿ ರೂಗಳ ಆಧಾಯ ಬಂದಿದೆ ಎಂದು ಹೇಳಿದರು.
ಇನ್ನು ಅರಸೀಕೆರೆ ನಗರಸಭೆ ಸದಸ್ಯರನ್ನು ಸೆಳೆಯಲು ಲಕ್ಷಾಂತರ ಹಣ ನೀಡಿದ ಬಗ್ಗೆ ಈಗಾಗಲೇ ಪೊಲೀಸ್ ಇಲಾಖೆಯಲ್ಲಿ ಎಫ್.ಐ.ಆರ್. ಮಾಡಲಾಗಿದ್ದು, ಮೂರು ಜನ ಆರೋಪಿಗಳಲ್ಲಿ ಓರ್ವರ ಕೈಬಿಡಲಾಗಿದವರ ಬಗ್ಗೆ ಮಾತನಾಡುತ್ತಾ, ಈ ಮೂರು ಜನರ ಬಗ್ಗೆ ದೂರು ಕೊಡುವುದಾಗಿ ಅರಸೀಕೆರೆ ತಾಲೂಕು ಶಾಸಕರಾದ ಕೆ.ಎಂ. ಶಿವಲಿಂಗೇಗೌಡರು ಹೇಳಿದ್ದರು. ಆದರೇ ಒಬ್ಬರ ಹೆಸರು ಏಕೆ ಬಿಟ್ಟಿದ್ದಾರೆ ನನಗೆ ಗೊತ್ತಿರುವುದಿಲ್ಲ. ಯಾರು ಯಾರು ಮಾತನಾಡಿದ್ದಾರೆ ಬಗ್ಗೆ ಪೋನ್ ಕಾಲ್ ಲೀಸ್ಟ್ ನಮ್ಮ ಬಳಿ ಇದ್ದು, ತನಿಖೆ ಶುರುವಾದ ಮೇಲೆ ಈಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಕೊಡಲಾಗುವುದು ಎಂದು ಕಾಲ್ ಲೀಸ್ಟ್ ನ ಜೆರಕ್ಸ್ ಕಾಫಿಯನ್ನು ಇದೆ ವೇಳೆ ಪ್ರದರ್ಶಿಸಿದರು. ವರ್ಗವಣೆಗಾಗಿ ಅಧಿಕಾರಿಗಳು ಯಾವುದಕ್ಕಾದರೂ ಸೀಲು ಹಾಕಲು ಸಿದ್ಧರಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಅಧಿಕಾರಿಗಳನ್ನು ಜೈಲಿಗೆ ಹೋಗುವ ಕಾಲ ಬಂದೆ ಬರುತ್ತದೆ ಎಂದು ಭವಿಷ್ಯ ನುಡಿದರು.