ತಾಲೂಕು ಒಕ್ಕಲಿಗರ ಸಂಘದಲ್ಲಿ ಕೆಲವರು ತಮ್ಮ ಸ್ವಪ್ರತಿಷ್ಠೆ, ಅಹಂ ಮತ್ತು ಏಕಸ್ವಾಮ್ಯಕ್ಕಾಗಿ ಸಮುದಾಯ ಜನರ ನಡುವೆ ಬಿರುಕು ಮೂಡಿಸುವ ಹುನ್ನಾರವನ್ನು ಬಿಡಬೇಕು ಎಂದು ತಾಲೂಕು ಒಕ್ಕಲಿಗರ ಸಂಘದ ಸದಸ್ಯ ವಿ ಎಸ್ ಭೋಜೇಗೌಡ ಆಗ್ರಹಿಸಿದ್ದಾರೆ.
ಪಟ್ಟಣದ ಕೆಂಪೇಗೌಡ ವೃತ್ತದಲ್ಲಿ ಕೆಂಪೇಗೌಡರ ಸೇವಾ ಸಮಿತಿ ಹಾಗೂ ಒಕ್ಕಲಿಗರ ಯುವ ವೇದಿಕೆಯಿಂದ ನಡೆದ ಕೆಂಪೇಗೌಡರ ಜಯಂತಿಯ ಸಂರ‍್ಭದಲ್ಲಿ ಮಾತನಾಡಿ ೨೦ ರ‍್ಷದ ಹಿಂದೆ ಕೆಂಪೇಗೌಡರ ಸೇವಾ ಸಮಿತಿ ರಚಿಸಿ ವಿಶ್ವವಿಖ್ಯಾತ ಚನ್ನಕೇಶವ ಸ್ವಾಮಿ ದೇಗುಲ ರಸ್ತೆ ವೃತ್ತದಲ್ಲಿ ಕೆಂಪೇಗೌಡರ ಪುತ್ಥಳಿ ಸ್ಥಾಪಿಸಲಾಗಿದೆ. ಅಂದಿನಿಂದಲೂ ಕೆಂಪೇಗೌಡರ ಸೇವಾ ಸಮಿತಿ ಹಾಗೂ ಒಕ್ಕಲಿಗ ಯುವ ವೇದಿಕೆ ಕೆಂಪೇಗೌಡರ ಜಯಂತಿ ದಿನ ವಿಶೇಷವಾದ ಕರ‍್ಯಕ್ರಮವನ್ನು ನಡೆಸುತ್ತಾ ಬಂದಿದೆ. ಅದರೆ ಇತ್ತೀಚಿನ ರ‍್ಷಗಳಲ್ಲಿ ಒಕ್ಕಲಿಗ ಸಂಘದಲ್ಲಿರುವ ಕೆಲವರು ತಮ್ಮ ಸ್ವಪ್ರತಿಷ್ಠೆಗಾಗಿ ಸಂಘದಲ್ಲಿ ಬಿರುಕು ಮೂಡಿಸುತ್ತಿದ್ದಾರೆ. ಕಳೆದ ರ‍್ಷ ಕೆಂಪೇಗೌಡರ ಜಯಂತಿ ದಿನದಂದು ಗೊಂದಲ ಸೃಷ್ಟಿಸಿ ಸಂಘಕ್ಕಾಗಿ ಶ್ರಮಿಸಿದವರನ್ನು ಹೊರಗಿಟ್ಟು ಕಾಟಾಚಾರಕ್ಕೆ ಸಮಾರಂಭ ಮಾಡಿ ಸಮುದಾಯದಲ್ಲಿ ಬಿರುಕು ಮೂಡಿಸಿದ ಕಹಿ ನೆನಪು ಇನ್ನೂ ಮಾಸಿಲ್ಲ . ಒಕ್ಕಲಿಗ ಸಮುದಾಯಕ್ಕೆ ಸಮಾಜದಲ್ಲಿ ವಿಶೇಷವಾದ ಸ್ಥಾನಮಾನವಿದೆ . ನಮ್ಮ ಸಮುದಾಯದಿಂದ ಹೊರಹೊಮ್ಮಿದ ಅದೆಷ್ಟೋ ಜನ ಇಂದು ಉನ್ನತ ಸ್ಥಾನದಲ್ಲಿ ಇದ್ದಾರೆ . ಅಲ್ಲದೆ ಸಂಘಟನೆಯಲ್ಲಿ ತೊಡಗಿಸಿಕೊಂಡು ಒಕ್ಕಲಿಗ ಸಮುದಾಯವನ್ನು ಬಲಿಷ್ಠಗೊಳಿದ್ದಾರೆ . ಆದರೆ ತಾಲ್ಲೂಕಿನ ಒಕ್ಕಲಿಗರ ಸಂಘದಲ್ಲಿ ಕೆಲವರಿಂದ ಬಿರುಕು ಮೂಡಿಸುವ ವಾತಾವರಣ ಉಂಟಾಗಿದ್ದು ಈ ಹಿನ್ನೆಲೆಯಲ್ಲಿ ಚುಂಚನಶ್ರೀಗಳು ಮದ್ಯೆ ಪ್ರವೇಶಿಸಿ ದಾರಿ ತಪ್ಪಿಸುತ್ತಿರುವ ಅವರಿಗೆ ಬುದ್ಧಿ ಹೇಳಿ ಸಮಾಜದ ಒಗ್ಗಟ್ಟಿಗೆ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ .