ಹಿಮ್ಸ್ ಗೆ ಮತ್ತೊಂದು ಸಾಧನೆಯ ಗರಿ

ಹಾಸನ ಜೂ.೩೦ :-  ರಾಷ್ಟ್ರೀಯ ಆರೋಗ್ಯ ಕುಟುಂಬ ಕಲ್ಯಾಣ ಸಚಿವಾಲಯ ಮತ್ತು , ನವದೆಹಲಿರವರು ವಿವಿಧ ಹಂತಗಳಲ್ಲಿ ಪರಿವೀಕ್ಷಣೆ ನಡೆಸಿ ಆರೋಗ್ಯ ಸೇವೆಗಳು, ಕುಟುಂಬ ಕಲ್ಯಾಣ ಯೋಜನೆ ಅನುಷ್ಠಾನ, ಸೋಂಕು ನಿವಾರಣಾ ಕ್ರಮಗಳು, ತುರ್ತು ಚಿಕಿತ್ಸೆ, ಗರ್ಭಿಣಿ ಮತ್ತು ಸ್ತ್ರೀ  ರೋಗಿಗಳ ತೃಪ್ತಿದಾಯಕ ಸೇವೆಗಳು ಮತ್ತು ಸತತ ಬೆಂಬಲ ಸೇವೆಗಳಾದ ಲ್ಯಾಬ್, ರಕ್ತನಿಧಿ, ಉಚಿತ ಸೇವೆಗಳು, ಆ್ಯಂಬುಲೆನ್ಸ್, ವಸತಿ ಮತ್ತು ಆಹಾರ ಗುಣಮಟ್ಟ, ಸೋಂಕು ನಿವಾರಣೆ, ತೃಪ್ತಿದಾಯಕ ಸೇವೆಗಳ ಬಗ್ಗೆ ಮೇಲ್ಕಂಡ ಪರಿವೀಕ್ಷಣೆಯಲ್ಲಿ   ರಾಷ್ಟ್ರೀಯ ಮಟ್ಟದಲ್ಲಿ ಶೇಕಡ ೯೨% ಅಂಕಗಳಿಸಿದ್ದು, ಉತ್ತಮ ಗುಣಮಟ್ಟದ ಆಧಾರದ ಮೇಲೆ ಮುಂದಿನ ಮೂರುವರ್ಷದ ಅವಧಿಗೆ ``ಪ್ರಸೂತಿ ಮತ್ತು  ಸ್ತ್ರೀ ರೋಗ ಚಿಕಿತ್ಸಾ ವಿಭಾಗಕ್ಕೆ ಲಕ್ಷ್ಯ ಯೋಜನೆಯಡಿ ರಾಷ್ಟ್ರೀಯ ಪ್ರಮಾಣ ಪತ್ರ ಮತ್ತು ಪ್ಲಾಟಿನಮ್ ಮೆಡಲ್ ಹಿಮ್ಸ್ ಗೆ ದೊರೆತಿದೆ'' 


ರಾಷ್ಟ್ರ ಮತ್ತು ರಾಜ್ಯದ ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳು ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರಸೂತಿ ಮತ್ತು ಸ್ತ್ರೀ ರೋಗ ಚಿಕಿತ್ಸಾ ವಿಭಾಗದ ಹೆರಿಗೆ ವಿಭಾಗ ಮತ್ತು ಪ್ರಸೂತಿ ಶಸ್ತ್ರಚಿಕಿತ್ಸೆಗಾರಗಳ ಗುಣಮಟ್ಟದ ಪ್ರಾಮಾಣೀಕರಣಕ್ಕಾಗಿ ರಾಷ್ಟ್ರೀಯ ಮಟ್ಟದಲ್ಲಿ  ಕಾರ್ಯಕ್ರಮವನ್ನು ರೂಪಿಸಿದ್ದು, ಸದರಿ ಕಾರ್ಯಕ್ರಮದ ಮೂಲಕ ಜಿಲ್ಲೆ, ರಾಜ್ಯ ಹಾಗೂ ರಾಷ್ಟç ಮಟ್ಟದಲ್ಲಿಹಂತಹಂತವಾಗಿ  ಪರಿವೀಕ್ಷಣೆಗಳನ್ನು ನಡೆಸಿ ಹೆರಿಗೆ ವಿಭಾಗದ ಕಾರ್ಯವೈಖರಿ ಮತ್ತು ಗರ್ಭಿಣಿ ಹಾಗೂ   ಸ್ತ್ರೀ

ರೋಗಿಗಳ ಸೇವೆಗಳ ಗುಣಮಟ್ಟವನ್ನು ಖಾತರಿ ಪಡಿಸಿಕೊಂಡು ನಂತರ  ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. 


ಈ ಯೋಜನೆಯಡಿ ಪ್ರಸೂತಿ ಮತ್ತು   ಸ್ತ್ರೀ ರೋಗ ಚಿಕಿತ್ಸಾ ವಿಭಾಗದಲ್ಲಿ ೨೦೧೭ರ ಡಿಸೆಂಬರ್‌ನಲ್ಲಿ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ಹಂತಹಂತವಾಗಿ

 ಪರಿವೀಕ್ಷಣೆಗೆ ಒಳಪಟ್ಟಿದ್ದು, ರೋಗಿಗಳಿಗೆ ನೀಡಲಾಗುತ್ತಿರುವ ಗುಣಮಟ್ಟದ ಚಿಕಿತ್ಸೆ ಆಧಾರದ ಮೇಲೆ ರಾಜ್ಯಮಟ್ಟದಲ್ಲಿ ಹಿಮ್ಸ್ ಪ್ರಥಮಸ್ಥಾನವನ್ನು ಪಡೆದುಕೊಂಡಿರುತ್ತದೆ. 


ಪ್ರಸೂತಿ ಮತ್ತು ಸ್ತ್ರೀ ರೋಗ ಚಿಕಿತ್ಸಾ ವಿಭಾಗಕ್ಕೆ ಬರುವ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವುದರ ಜೊತೆಗೆ ಹೆಚ್ಚುತ್ತಿರುವ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಸಂಸ್ಥೆಯ ಹಿಮ್ಸ್ ನಿರ್ದೇಶಕರು, ಹಿಮ್ಸ್ ಬೋಧಕ ಆಸ್ಪತ್ರೆ ವೈದ್ಯಕೀಯ ಅಧೀಕ್ಷರು ಮುಂತಾದ ಆಡಳಿತ ಮಂಡಳಿ ಸದಸ್ಯರುಗಳ ಸಹಕಾದಿಂದ ಹೆಚ್ಚುವರಿ ವಿಶಾಲವಾದ ಹೆರಿಗೆ ಕೊಠಡಿಗಳು, ಹಾಸಿಗೆಗಳು ಹಾಗೂ ಆತ್ಯಾಧುನಿಕ ವೈದ್ಯಕೀಯ ಉಪಕರಣಗಳೊಂದಿಗೆ ಪ್ರತ್ಯೇಕ ಎಮ್.ಸಿ.ಹೆಚ್, ಬ್ಲಾಕ್ ತೆರೆಯಲಾಗಿದೆ. 


ವಿಭಾಗದ ಮುಖ್ಯಸ್ಥರಾದ ಡಾ|| ಸುಧಾ.ಟಿ.ಆರ್. ಪ್ರಾಧ್ಯಾಪಕರು ಮತ್ತು ವಿಭಾಗದ ಮುಖ್ಯಸ್ಥರು, ಲಕ್ಷö್ಯ ನೂಡಲ್ ಆಫೀಸರಾದ ಡಾ|| ಗಿರಿಜ.ಬಿ.ಎಸ್. ಸಹ ಪ್ರಾಧ್ಯಾಪಕರು ಪ್ರಸೂತಿ ಮತ್ತು ಸ್ತ್ರೀ  ವಿಭಾಗದವರುಗಳ ಮಾರ್ಗದರ್ಶನದಲ್ಲಿ ವಿಭಾಗದ ಎಲ್ಲಾ ವೈದ್ಯರುಗಳು ಬೋಧಕೇತರ ಹಾಗೂ ಶುಕ್ರೂಷ ಸಿಬ್ಬಂದಿಗಳು ಸೇರಿ ಸತತ ಎರಡು ವರ್ಷಗಳಿಂದ  ಪ್ರಸೂತಿ ಭಾಗದ ಎಲ್ಲಾ ವೈದ್ಯರುಗಳು ಬೋಧಕೇತರ ಹಾಗೂ ಶುಕ್ರೂಷಕ ಸಿಬ್ಬಂದಿಗಳು ಸೇರಿ ಸತತ ಎರಡು ವರ್ಷಗಳಿಂದ ಪ್ರಸೂತಿ ವಿಭಾಗದ ಸೇವೆಗಳ ಗುಣಮಟ್ಟ ಖಾತರಿ  ರಾಷ್ಟ್ರೀಯ  ಯೋಜನೆಯಾದ "ಲಕ್ಷ÷್ಯ ಕಾರ್ಯಕ್ರಮ'' ಅನುಷ್ಠಾನಕ್ಕಾಗಿ ಪೂರ್ವ ತಯಾರಿಗಳನ್ನು ನಡೆಸಿದೆ.

 

ಈ ಪ್ರಶಸ್ತಿ ಪಡೆಯಲು ಶ್ರಮಿಸಿದ ವಿಭಾಗದ ವೈದ್ಯರುಗಳು, ಶುಶ್ರೂಷಕ ಅಧಿಕಾರಿಗಳು ಮತ್ತು ಇತರೆ ಎಲ್ಲಾ ಸಿಬ್ಬಂದಿ ವರ್ಗದವರ ಕಾರ್ಯಸಾಧನೆಗೆ ಸಂಸ್ಥೆಯ ನಿರ್ದೇಶಕರಾದ ಡಾ||ಬಿ.ಸಿ.ರವಿಕುಮಾರ್ ಮತ್ತು ವೈದ್ಯಕೀಯ ಅಧೀಕ್ಷಕರಾದ ಡಾ|| ಕೃಷ್ಣಮೂರ್ತಿ.ವಿ.ಆರ್. ಪ್ರಸೂತಿ ವಿಭಾಗದ ಮುಖ್ಯಸ್ಥರಾದ ಡಾ||ಸುಧಾ.ಟಿ.ಆರ್. ಹಾಗೂ ಇತರೆ ಹಿರಿಯ ವೈದ್ಯರುಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Post a Comment

Previous Post Next Post