ಮಕ್ಕಳ ಮೇಲಿನ ಶೋಷಣೆ ಸಂಪೂರ್ಣ ನಿಯಂತ್ರಣಕ್ಕೆ ಸೂಚನೆ

ಹಾಸನ ಜೂ.೩೦:- ಮಕ್ಕಳ ಮೇಲಿನ ಶೋಷಣೆ ಸಂಪೂರ್ಣ ನಿಯಂತ್ರಣ ಮಾಡುವ ಜೊತೆಗೆ ಅವರ  ಹಕ್ಕುಗಳನ್ನು  ರಕ್ಷಿಸುವ   ಕಾರ್ಯವನ್ನು ಜಿಲ್ಲಾಡಳಿತ ಹಾಗೂ ಎಲ್ಲಾ ಇಲಾಖೆಗಳು ಸಮಗ್ರವಾಗಿ ನಿರ್ವಹಿಸಬೇಕು ಎಂದು ರಾಷ್ಟ್ರೀಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯರಾದ ಡಾ.ಆರ್.ಜಿ ಆನಂದ್ ಅವರು ತಿಳಿಸಿದ್ದಾರೆ. 


   ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಮಕ್ಕಳ ಹಕ್ಕುಗಳ ರಕ್ಷಣಾ ಕುರಿತಗಾಗಿ ಸಭೆ ನಡೆಸಿ ಮಾತನಾಡಿದ ಅವರು ಕೋವಿಡ್  ಕಾಲದಲ್ಲಿ ಮಕ್ಕಳ ಮಾನಸಿಕವಾಗಿ  ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಹಾಗೂ ಅನೇಕ ರೀತಿಯ ಸಮಸ್ಯೆಯನ್ನೂ ಎದುರಿಸುತ್ತಿವೆ ಆದರಿಂದ ಸೂಕ್ಷ್ಮತೆ ಅರಿತು ಅವರ ಹಿತಕಾಯುವುದು ಅಗತ್ಯ ಎಂದರು.

ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳು ಆಗದಂತೆ ಸಂಪೂರ್ಣ ಎಚ್ಚರಿಕೆ ವಹಿಸಿ ತಡೆಯಬೇಕು ಇದನ್ನು  ಪ್ರೋತ್ಸಾಹಿಸುವ ಪೋಷಕರು ಹಾಗೂ ಪ್ರೇರೇಪಿಸುವವರು ವಿರುದ್ಧ ಕಡ್ಡಾಯವಾಗಿ ಎಫ್ ಐ ಆರ್ ದಾಖಲಿಸಬೇಕು.ಮಕ್ಕಳನ್ನು ರಕ್ಷಿಸಿ ಓದು ಮುಂದುವರೆಸಲು ಸೂಕ್ತ ಅವಕಾಶ ಕಲ್ಪಿಸಿದರು ಎಂದು ಅವರ ಸೂಚಿಸಿದರು.

ಬಾಲ ಕಾರ್ಮಿಕರ ಹೆಚ್ಚಾದಂತೆ ಕ್ರಮ ಮಕ್ಕಳನ್ನು ದುಡಿಸಿಕೊಳ್ಳುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.ಕೋವಿಡ್-೧೯ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಅಪಾಯವಿದೆ ಎಂಬ ಸೂಚನೆ ಇರುವುದರಿಂದ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಹೇಳಿದರು.

ಮಕ್ಕಳು ಈಗಾಗಲೇ ಹಲವು ರೀತಿಯ ಮಾನಸಿಕ ಒತ್ತಡವನ್ನು ಎದುರಿಸುತ್ತಿದ್ದಾರೆ  ಅದನ್ನು ನಿಭಾಯಿಸಲು ಪ್ರಧಾನಮಂತ್ರಿಗಳ ವಾಯ್ಸ್ ಆಫ್ ಟಾಯ್ಸ್   ಎಂಬ ಸೂತ್ರವನ್ನು ಮಂಕಿಬಾಥ್‌ನಲ್ಲಿ ತಿಳಿಸಿದ್ದಾರೆ. ಸಣ್ಣ ಮಕ್ಕಳಿಗೆ ಸ್ವದೇಶಿ ಗೊಂಬೆಗಳನ್ನು ನೀಡುವ ಮೂಲಕ ಮನಸ್ಸನ್ನು ಉಲ್ಲಾಸಗೊಳಿಸಿ ಅವುಗಳನ್ನು ತನ್ನ ಸ್ನೇಹಿತರು ಬಂಧುಗಳAತೆ ಭಾವಿಸಿ ಆಡಲು ಪ್ರೇರೇಪಿಸಬೇಕು ಎಂದರು. ಇದೇ ವೇಳೆ ಅವರು ಜಿಲ್ಲಾಡಳಿತ ,ಪೊಲೀಸ್ ಇಲಾಖೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಕ್ಕಳ ರಕ್ಷಣಾ ಆಯೋಗದ ವತಿಯಿಂದ ಏರ್ಪಡಿಸಿದ ವಿವಿಧ ಜಾಗೃತಿ ಕಾರ್ಯಕ್ರಮಗಳು   ಹಾಗೂ ಕೋವಿಡ್ ಸಿದ್ಧತೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು .

ಇದೇ ರೀತಿಯಲ್ಲಿ ಕೋವಿಡ್ ಸಿದ್ಧತೆ ಹಾಗೂ ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚಿನ ತಂಡವನ್ನು ರಚಿಸಿಕೊಂಡು ಉತ್ತಮ ಕಾರ್ಯ ನಿರ್ವಹಿಸುವಂತೆ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಅವರು ಮಾತನಾಡಿ ಪೊಲೀಸ್ ಇಲಾಖೆಯು , ಮಕ್ಕಳ ರಕ್ಷಣಾ ಘಟಕ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಕಾರದೊಂದಿಗೆ ೧೫೦ಕ್ಕೂ ಅಧಿಕ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಗಿದೆ. ಕಾಲ ಕಾಲಕ್ಕೆ ಸಭೆಗಳನ್ನು ಮಾಡಲಾಗಿದೆ. ಪೋಸ್ಕೋ ಪ್ರಕರಣಗಳ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಮಕ್ಕಳನ್ನು ರಕ್ಷಿಸಿ ತಪ್ಪಿಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಅವರು ಮಾತನಾಡಿ ಗ್ರಾಮ ಪಂಚಾಯಿತಿವಾರು ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಸೂಚಿಸಲಾಗಿದೆ ಮನೆ-ಮನೆಗಳಲ್ಲಿ ಇರುವ ಮಕ್ಕಳ ಆರೋಗ್ಯದ ಬಗ್ಗೆಯೂ ಅಂಗನವಾಡಿ ,ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಮಾಹಿತಿ ಪಡೆದು ಅಪೌಷ್ಟಿಕ ಮಕ್ಕಳ ಆರೈಕೆಗೆ ಸೂಚನೆಗಳನ್ನು ನೀಡಲಾಗಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕವಿತ  ರಾಜಾರಾಂ, ಉಪವಿಭಾಗಾಧಿಕಾರಿ ಗಿರೀಶ್ ನಂದನ್ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದಶಕರಾದ ದಿಲೀಪ್ ಹಾಗೂ ಮತ್ತಿತರರು ಹಾಜರಿದ್ದರು.


Post a Comment

Previous Post Next Post