ಕಟ್ಟಡ ಕಾರ್ಮಿಕರಿಗೆ ಸಿಗಬೇಕಾದ ಪುಡ್ ಕಿಟ್ ದುರುಪಯೋಗ ಹಾಸನ ಶಾಸಕರ ವಿರುದ್ಧ ಕಾಂಗ್ರೆಸ್ ಆಕ್ರೋಶ, ಪ್ರತಿಭಟನೆ

ಹಾಸನ: ಕಟ್ಟಡ ಕಾರ್ಮಿಕರಿಗೆ ಸಿಗಬೇಕಾದ ಆಹಾರದ ಕಿಟ್ ಗಳನ್ನು ಹಾಸನದ ಶಾಸಕರು ತಮ್ಮ ಬೆಂಬಲಿಗರೊAದಿಗೆ ಹಂಚುವುದರೊAದಿಗೆ ಇದರಲ್ಲಿ ದುರುಪಯೋಗ ನಡೆಯುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರಾದ ಹೆಚ್.ಕೆ. ಮಹೇಶ್ ನೇತೃತ್ವದಲ್ಲಿ ಪುಡ್ ಕಿಟ್ ನೊಂದಿಗೆ ಮೊದಲು ಕಾರ್ಮಿಕ ಇಲಾಖೆ ಮುಂದೆ ಪ್ರತಿಭಟಿಸಿ ನಂತರ ಜಿಲ್ಲಾಧಿಕಾರಿ ಕಛೇರಿ ಮುಂದೆ ಹೋರಾಟ ನಡೆಸಿ ತಪ್ಪಿಕಸ್ತರ ವಿರುದ್ಧ ಕ್ರಮಕೈಗೊಳ್ಳುವಂತೆ ಡಿಸಿ ಆರ್. ಗಿರೀಶ್ ಅವರಿಗೆ ಮನವಿ ಮಾಡಿದರು.


      ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆಯಿಂದ ಬಡಕಾರ್ಮಿಕರಿಗೆ ವಿತರಣೆ ಮಾಡುವ ಆಹಾರ ಕಿಟ್ ಗಳನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ಹಾಸನ ಕ್ಷೇತ್ರದ ಸ್ಥಳೀಯ ಶಾಸಕರು ಹೇಳಿದ ಜಾಗದಲ್ಲಿ ಸುಮಾರು ೧೦ ಸಾವಿರ ಪುಡ್ ಕಿಟ್ ಗಳನ್ನು ಕಾಳಿಕಾಂಬ ದೇವಸ್ತಾನದ ಬಳಿ ಇರುವ ಸಮುದಾಯಭವನದಲ್ಲಿ ಮತ್ತು ಗುರುರಾಜ ಕಲ್ಯಾಣ ಮಂಟಪದಲ್ಲಿ ಇಳಿಸಲಾಗಿದೆ ಎಂದು ಆರೋಪಿಸಿ ನಗರದ ಅರಳೀಕಟ್ಟೆ ವೃತ್ತದ ಬಳಿ ಇರುವ ಕಟ್ಟಡ ಕಾರ್ಮಿಕ ಇಲಾಖೆ ಕಛೇರಿಗೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿ ಉಪ ಕಾರ್ಮಿಕ ಆಯುಕ್ತ ಸೋಮಣ್ಣ ಅವರ ಬಳಿ ಬಂದರು. ಕೊರೋನಾ ಇರುವುದರಿಂದ ಸಮಸ್ಯೆಗೆ ಸಿಲುಕಿರುವ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಉಪಯೋಗವಾಗಲಿ ಎಂದು ಸರಕಾರವು ೧೦ ಸಾವಿರಕ್ಕೂ ಹೆಚ್ಚು ಆಹಾರದ ಕಿಟ್ ಗಳನ್ನು ಹಾಸನ ಹೊಂದಕ್ಕೆ ಕಳುಹಿಸಿದೆ. ಇದನ್ನು ಪಡೆಯಲು ಕಾರ್ಮಿಕರು ಅರ್ಜಿ ಸಲ್ಲಿಸಬೇಕಾಗಿಲ್ಲ. ಕೇವಲ ನೋಂದಾವಣೆ ಮಾಡಿಕೊಂಡಿರುವ ಕಾರ್ಮಿಕರಿಗೆ ಪುಡ್ ಕಿಟ್ ಗಳನ್ನು ಕೊಡಲು ಸೂಚಿಸಿದೆ. ಆದರೇ ಈ ಎಲ್ಲಾ ಪುಡ್ ಕಿಟ್ ಗಳನ್ನು ಬಿಜೆಪಿ ಶಾಸಕರು ತಮ್ಮ ಬೆಂಬಲಿಗರೊAದಿಗೆ ತಮಗೆ ಬೇಕಾದವರಿಗೆ ಮನೆ ಮನೆಗೆ ತೆರಳಿ ಕೊಡಲಾಗುತ್ತಿರುವುದಾಗಿ ಇದೆ ವೇಳೆ ಆರೋಪಿಸಿದರು. ಕೂಡಲೇ ಈಬಗ್ಗೆ ಹೆಚ್ಚಿನ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಆಗ್ರಹಿಸಿದರು. ಈವೇಳೆ ಕಾರ್ಮಿಕ ಇಲಾಖೆಯ ಅಧಿಕಾರಿ ರಾಮಕೃಷ್ಣ ಅವರು ಸಲ್ಪ ಉದಾಸೀನದಲ್ಲಿ ಮಾತನಾಡಿದಾಗ ಆಕ್ರೋಶವ್ಯಕ್ತವಾಯಿತು. ಇನ್ಸ್ ಪೆಕ್ಟರ್ ಆನಂದ ರಾಮ್ ಅವರನ್ನು ಕೂಡ ಕರೆಯಿಸಿದಾಗ ಶಾಸಕ ಪ್ರೀತಮ್ ಜೆ. ಗೌಡರು ಹೇಳಿದಾಗೆ ಕಾಳಿಕಾಂಬ ದೇವಸ್ತಾನದ ಬಳಿ ಇರುವ ಸಮುದಾಯಭವನದಲ್ಲಿ ಮತ್ತು ಗುರುರಾಜ ಕಲ್ಯಾಣ ಮಂಟಪದಲ್ಲಿ ಇಳಿಸಲಾಗಿದೆ ಎಂದು ಸತ್ಯಾಂಶ ಒಪ್ಪಿಕೊಂಡಿದ್ದಾರೆ. ಈ ಬಗ್ಗೆಕ್ರಮಕೈಗೊಳ್ಳಬೇಕು ಎಂದು ಹೆಚ್.ಕೆ. ಮಹೇಶ್ ಆಗ್ರಹಿಸಿದರು. 

     ಉಪ ಕಾರ್ಮಿಕ ಆಯುಕ್ತ ಸೋಮಣ್ಣ ಅವರು ಮಾಧ್ಯಮದೊಂದಿಗೆ ಮಾತನಾಡಿ, ಸರಕಾರದಿಂದ ಹಾಸನಕ್ಕೆ ೧೦ ಸಾವಿರ ಕಿಟ್ ಬಂದಿದ್ದು, ನೋಂದಾಯಿತ ಕಾರ್ಮಿಕರಿಗೆ ತಲುಪಿಸಲು ನಿರ್ದೇಶನಗಳಿದ್ದು, ಕಾರ್ಮಿಕ ಸಂಘಟನೆಯೊAದಿಗೆ ಚರ್ಚಿಸಿ ಕೊಡಬೇಕಾಗಿದೆ. ಇಂತಹ ಪುಡ್ ಕಿಟ್ ಗಳನ್ನು ಸ್ಥಳೀಯ ಶಾಸಕರ ಮೂಲಕ ಹೋಗಿರುವ ಬಗ್ಗೆ ಈಗ ಗಮನಕ್ಕೆ ಬಂದಿದೆ. ಕೆಲ ಕಡೆ ಜಾಗ ಇರುವುದಿಲ್ಲ ಎಂದು ಗೋಡನ್ನು ಗಳಲ್ಲಿ ಹಾಕಿರುತ್ತಾರೆ. ಎಪಿಎಂಸಿ ಮತ್ತು ಕೆಲ ಕಡೆ ಹಾಸ್ಟೇಲ್ ಗಳಲ್ಲಿ ಪುಡ್ ಕಿಟ್ ಇಡಲಾಗಿದೆ ಎಂದರು. ನಾವು ಕ್ರಮತೆಗೆದುಕೊಳ್ಳಲು ಅಧಿಕಾರವಿಲ್ಲ. ಇದನ್ನು ಮೇಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು. ಅಲ್ಲಿಂದ ಉತ್ತರ ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.  

     ನಂತರ ಕಾರ್ಮಿಕ ಇಲಾಖೆ ಮುಂದೆ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ಮಾಡುತ್ತಿರುವಾಗ ಬೈಕ್ ನಲ್ಲಿ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ಹೋಗಿ ಪುಡ್ ಕಿಟ್ ಕೊಡಲಾಗುತಿತ್ತು. ಇದನ್ನು ಗಮನಿಸಿದ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶವ್ಯಕ್ತಪಡಿಸಿದರು. ಈವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಜಟಾಪಟಿ ಸಂಭವಿಸಿತು. ಕಾಂಗ್ರೆಸ್ ಮುಖಂಡ ಹೆಚ್.ಕೆ. ಮಹೇಶ್ ನೇತೃತ್ವದಲ್ಲಿ ಸುಮಾರು ೨೫ ಜನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಗರದ ಆಹಾರ ಕಿಟ್ ಸಂಗ್ರಣೆ ಮಾಡಿರುವ ಗೋಡಾನ್ ಮೆಲೆ ದಾಳಿ ಮಾಡಿ ೩ ಆಹಾರ ಕಿಟ್ ವಶಕ್ಕೆ ಪಡೆದು ನಂತರ ಕಾರ್ಮಿಕ ಇಲಾಖೆ ಕಚೇರಿಗೆ ಹೋಗಿ ಈಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿ ನಂತರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಬಡ ಕಾರ್ಮಿಕರಿಗೆ ವಿತರಣೆ ಮಾಡಬೇಕಾದ ಆಹಾರದ ಕಿಟ್ ಬಿಜೆಪಿ ಬೆಂಬಲಿಗರ ಗೋಡಾನ್ ನಲ್ಲಿದೆ. ಸರ್ಕಾರದ ಪುಡ್ ಕಿಟ್ ಗಳನ್ನು ಬಿಜೆಪಿ ಶಾಸಕರು ತಮ್ಮ ಬೆಂಬಲಿಗರಿಗೆ ಹಂಚುವುದರ ಮೂಲಕ ಸರ್ಕಾರದ ಪುಡ್ ಕಿಟ್ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಂದು ಆರೋಪಿಸಿ ಕಾರ್ಮಿಕ ಇಲಾಖೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪುಡ್ ಕಿಟ್ ಗಳನ್ನು ಜಿಲ್ಲಾಧಿಕಾರಿ ಗಿರೀಶ್ ಅವರ ಮುಂದೆ ಇಟ್ಟು ಕ್ರಮಕೈಗೊಳ್ಳಲು ಕೋರಿದರು.


Post a Comment

Previous Post Next Post