ಶಾಸಕ ಎಚ್. ಕೆ.ಕುಮಾರಸ್ವಾಮಿ ಸೋಂಕಿತ ಕುಟುಂಬಗಳು ಸೇರಿದಂತೆ ಆಶಾ ಕರ‍್ಯರ‍್ತೆಯರಿಗೆ ಆಹಾರ ಪದರ‍್ಥಗಳ ಸಾಮಗ್ರಿಯನ್ನು ವಿತರಿಸಿದರು.

  ಆಲೂರು : ತಾಲ್ಲೂಕಿನ  ಬೈರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರ‍್ಮಪುರಿ ಹಾಗೂ ಬಸವೇಶ್ವರ ಗ್ರಾಮಗಳಲ್ಲಿ ಕರೋನ ಪಾಸಿಟಿವ್ ಬಂದಂತಹ ೧೧೦ ಸೋಂಕಿತ ಕುಟುಂಬಗಳು ಸೇರಿದಂತೆ ಆಶಾ ಕರ‍್ಯರ‍್ತೆಯರಿಗೆ ಆಹಾರ ಪದರ‍್ಥಗಳ ಸಾಮಗ್ರಿಯನ್ನು ಶಾಸಕ ಎಚ್. ಕೆ.ಕುಮಾರಸ್ವಾಮಿ ವಿತರಿಸಿದರು. 


>

> ಕಳೆದ ಹನ್ನೆರಡು ದಿನಗಳ ಹಿಂದೆ ಬೈರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರ‍್ಮಪುರಿ ಹಾಗೂ ಬಸವೇಶ್ವರ ಗ್ರಾಮಗಳಲ್ಲಿ ಕರೋನಾ ಸೋಂಕಿತ ಪ್ರಕರಣಗಳು ಹೆಚ್ಚಾದ ಕಾರಣ ಗ್ರಾಮಗಳನ್ನು ನರ‍್ಬಂಧಿತ ಪ್ರದೇಶವನ್ನಾಗಿ ಘೋಷಣೆ ಮಾಡಲಾಗಿತ್ತು , ನರ‍್ಬಂಧಿತ ಪ್ರದೇಶಗಳಿಗೆ ೩ -೪ ದಿನದ ಹಿಂದೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಶಾಸಕರು ಕರೋನಾ ಸೋಂಕಿತ ಕುಟುಂಬಗಳಿಗೆ ಆಹಾರ ಪದರ‍್ಥಗಳ  ಕಿಟ್ ನೀಡುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಇಂದು ಶಾಸಕರು ಹಾಗೂ ಬೈರಾಪುರ ಗ್ರಾಮ ಪಂಚಾಯಿತಿ ವತಿಯಿಂದ ಸೋಂಕಿತ ಕುಟುಂಬಗಳಿಗೆ  ಸುಮಾರು ೭೦೦ ರೂಪಾಯಿಯ  ಆಹಾರ  ಪದರ‍್ಥಗಳ ಕಿಟ್ ಗಳನ್ನು ವಿತರಿಸಲಾಯಿತು. ಈ ಸಂರ‍್ಭದಲ್ಲಿ  ಶಾಸಕ ಎಚ್ ಕೆ ಕುಮಾರಸ್ವಾಮಿ ಮಾತನಾಡಿ,  ಕರೋನಾದಿಂದಾಗಿ ಪ್ರತಿಯೊಬ್ಬರ ಬದುಕು ದುಸ್ತರವಾಗಿದೆ, ಅದರಲ್ಲೂ ಕರೋನಾ ಸೋಂಕು  ಬಂದಿರುವ ಕುಟುಂಬಗಳಲ್ಲಿ ದುಡಿಯುವವರು ಹೊರಗಡೆ ದುಡಿಯಲು ಆಗದೆ ರ‍್ಥಿಕವಾಗಿ  ಸಂಕಷ್ಟ ಅನುಭವಿಸುತ್ತಿರುವುದನ್ನು ಮನಗಂಡು ಆಹಾರ ಪದರ‍್ಥದ ಕಿಟ್ ನ್ನು ನೀಡುತ್ತಿರುವುದಾಗಿ ತಿಳಿಸಿದ ಅವರು ರ‍್ಕಾರ ಪ್ರತಿಯೊಂದು ಬಡ ಕುಟುಂಬಗಳಿಗೆ ಕನಿಷ್ಠ ೧೦ ಸಾವಿರ ರೂಪಾಯಿಗಳನ್ನು ನೀಡುವಂತೆ ಒತ್ತಾಯಿಸಿದ ಅವರು ಕರೋನಾ ಸೋಂಕಿತರು ಯಾವುದೇ ಕಾರಣಕ್ಕೂ ಧೃತಿಗೆಡದೆ ಧರ‍್ಯದಿಂದ ಸೋಂಕನ್ನು ಎದುರಿಸಿ ಹೊರ ಬರುವಂತೆ ತಿಳಿಸಿದರು.   

>

> ಈ ಸಂರ‍್ಭದಲ್ಲಿ ಜಿಲ್ಲೆಯ ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಎಸ್.ಮಂಜೇಗೌಡ, ಬೈರಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಂಚನಹಳ್ಳಿ ರವಿ,  ಉಪಾಧ್ಯಕ್ಷೆ ಹೇಮಾ ಮಂಜೇಗೌಡ, ಸದಸ್ಯರಾದ ರುದ್ರೇಗೌಡ, ಗಣೇಶ್, ಸವಿತಾ,ತಹಶೀಲ್ದಾರ್ ಶಿರೀನ್ ತಾಜ್ , ಇಒ ಸತೀಶ್,ತಾಲ್ಲೂಕು ವೈದ್ಯಾಧಿಕಾರಿ ಡಾ.ತಿಮ್ಮಯ್ಯ, ಸಮಾಜ ಕಲ್ಯಾಣಾಧಿಕಾರಿ ಪುಂಡಲಿಕ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭವ್ಯ,ಬಿಲ್ ಕಲೆಕ್ಟರ್ ಕೆ ಟಿ ಅಶೋಕ, ಸಮುದಾಯ ಆಸ್ಪತ್ರೆಯ ದಾದಿಯರು, ಸೇರಿದಂತೆ  ಆಶಾ ಮತ್ತು ಅಂಗನವಾಡಿ ಕರ‍್ಯರ‍್ತೆಯರು ಇದ್ದರು.


Post a Comment

Previous Post Next Post