ಹಾಸನ: ಕೊರೋನಾ ಮಹಾಮಾರಿ ಆವರಿಸಿರುವ ಹಿನ್ನಲೆಯಲ್ಲಿ ಸರಕಾರವು ಲಾಕ್ ಡೌನ್ ಜಾರಿಗೆ ತರಲಾಗಿದ್ದರೂ ಶನಿವಾರ ಮತ್ತು ಭಾನುವಾರದಂದು ಅಷ್ಟೊಂದು ಪರಿಣಾಮ ಬೀರದೇ ಎಂದಿನAತೆ ಬಹುತೇಕ ವಾಹನಗಳು ರಸ್ತೆಯಲ್ಲಿ ಸಂಚರಿಸಿ, ಮದ್ಯಾಹ್ನದ ವೇಳೆಗೆ ವಾಹನಗಳ ಓಡಾಟ ಸಲ್ಪ ಕಡಿಮೆಯಾಯಿತು.
ಕೊರೋನಾ ಸೋಂಕು ಹರಡಿ ಪ್ರತಿನಿತ್ಯ ಸಾವಿರಾರು ಜನರಿಗೆ ಪಾಸಿಟಿವ್ ಬಂದು ಸಾವು-ನೋವು ಸಂಭವಿಸುತ್ತಿರುವ ಹಿನ್ನಲೆಯಲ್ಲಿ ಸರಕಾರವು ಕೆಲ ನಿಯಮವನ್ನು ಜಾರಿಗೆ ತಂದಿದೆ. ವಾರದ ಮೂರು ದಿನಗಳು ಬೆಳಿಗ್ಗೆ ೬ ರಿಂದ ೧೦ರ ವರೆಗೂ ಅಗತ್ಯವಸ್ತುಗಳ ಮಾರಾಟ ಮಾಡಲು ಸಮಯ ನೀಡಿ, ಉಳಿದ ದಿನಗಳೆಲ್ಲಾ ಸಂಪೂರ್ಣ ಲಾಕ್ ಡೌನ್ ಎಂದು ಆದೇಶವಿದ್ದರೂ ಜನರು ಏಕೋ ಎಚ್ಚೆತ್ತುಕೊಂಡAತೆ ಕಾಣಲಿಲ್ಲ. ಕೆಲವರು ಮಾತ್ರ ಗಂಭೀರವಾಗಿ ತೆಗೆದುಕೊಂಡು ಮನೆಯಲ್ಲಿ ಇರುವುದರ ಮೂಲಕ ಸಹಕರಿಸುತ್ತಿದ್ದಾರೆ. ಆದರೇ ಸಾರ್ವಜನಿಕರು ಲಾಕ್ ಡೌನ್ ಆದೇಶಕ್ಕೆ ಬೆಲೆ ಕೊಡದೆ ರಸ್ತೆಯಲ್ಲಿ ಇಳಿದಿರುವುದು ದುರುದೃಷ್ಟಕರ. ಇನ್ನು ಪೊಲೀಸರು ಕೆಲ ಕಡೆ ಸಲ್ಪ ಸಮಯ ವಾಹನ ತಪಾಸಣೆ ನಡೆಸಿ, ದಂಢ ಹಾಕುತ್ತಿದ್ದರೇ ಮತ್ತೊಂದು ಕಡೆ ವಾಹನಗಳ ಓಡಾಟ ನಡೆದಿತ್ತು ಎಂಬುದು ಅನೇಕರ ಅಭಿಪ್ರಾಯ.