ರಾಮನಾಥಪುರ;- ಮಲ್ಲಾಪುರ ಗ್ರಾಮದ ಹಿರಿಯರು ದಿ. ಯಜಮಾನ್ ಲಕ್ಕೇಗೌಡರ ಧರ್ಮಪತ್ನಿ ಹುಚ್ಚಮ್ಮ [೯೩] ಅವರು ಅನಾರೋಗ್ಯದಿಂದ ಲಿಂಗ್ಯಕ್ಯರಾದರು
.
ಹಳ್ಳಿಕಾರ್ ಸಮಾಜದ ಮುಖಂಡರು ಸಮಾಜ ಸೇವೆಗೆ ಹೆಸರು ವಾಸಿಯಾಗಿದ್ದ ಶರಣೆ ಹುಚ್ಚಮ್ಮ ಅವರಿಗೆ ೫ ಜನ ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಮಲ್ಲಾಪುರ ಗ್ರಾಮದ ಅವರ ತೋಟದಲ್ಲಿ ಅಂತ್ಯ ಕ್ರಿಯೆ ಜರುಗಿತ್ತು.
ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯ ಡಾ. ಮಂತರ್‌ಗೌಡ, ಮಾಜಿ ಸದಸ್ಯ ಎಚ್.ಎಸ್. ಶಂಕರ್, ಪೇಟ್ರೋಲ್ ಬಂಕ್ ಮಾಲೀಕರು ಜಿ.ಸಿ. ಮಂಜೇಗೌಡ, ಹಿರಿಯ ಮುಖಂಡರಾದ ಬೆಂಗಳೂರು ಬೇಟೇಗೌಡ, ಬೋರೇಗೌಡ, ಎಂ.ಎಲ್. ಗೋವಿಂದರಾಜು, ಚಂದ್ರೇಗೌಡ, ಮಂಜೇಗೌಡ, ಕಾವೇರಿ ನದಿ ಸ್ವಚ್ಚತಾ ಸಮಿತಿ ತಾಲ್ಲೂಕು ಅಧ್ಯಕ್ಷ ಸಿದ್ದರಾಜು, ಕಾರ್ಯದರ್ಶಿ ಕಾಳಬೋಯಿ ಮುಂತಾದ ಗಣ್ಯರು ಮೃತರ ಶವ ಸಂಸ್ಕಾರದಲ್ಲಿ ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು
