ರಾಮನಾಥಪುರ- ಇಲ್ಲಿಯ ಬಸವೇಶ್ವರ ವೃತ್ತದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವಂತೆ ಮುಖ್ಯ ಮಂತ್ರಿ ಬಿಎಸ್. ಎಡೆಯೂರಪ್ಪ ಹಾಗೂ ಹಾಸನ ಜಿಲ್ಲೆಯ ಉಸ್ತುವಾರಿ ಸಚಿವ ಗೋಪಾಲಯ್ಯ ಅವರಲ್ಲಿ ಈಗಾಗಲೇ ಮನವಿ ಮಾಡಲಾಗಿದೆ ಎಂದು ಮಾಜಿ ಸಚಿವರಾದ ಎ.ಮಂಜು ತಿಳಿಸಿದರು.
ರಾಮನಾಥಪುರ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಡಾಟರ್ ಮತ್ತು ಕಾರ್ಯಕರ್ತರ ಜೊತೆ ಮಾತನಾಡಿದ ಅವರು ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರ ತಾಲ್ಲೂಕು ಮಟ್ಟದಲ್ಲಿ ಹೆಸರು ಪಡೆದು, ಹೋಬಳಿ ಮಟ್ಟದಲ್ಲಿದ್ದು ಇಲ್ಲಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಹೋಗುವ ಮಾರ್ಗವಾಗಿದ್ದು, ಅಲ್ಲಿದೇ ಇಲ್ಲಿಯ ಅಸ್ಪತ್ರೆಗೆ ಸುತ್ತಲ ಹತ್ತಾರು ಹಳ್ಳಿಗಳಿಂದ ಇಲ್ಲಿಗೆ ನೂರಾರು ರೋಗಿಗಳು ಪ್ರತಿನಿತ್ಯ ಇಲ್ಲಿಗೆ ಚಿಕಿತ್ಸೆಗೆ ಇಲ್ಲಿಗೆ ಬರುತ್ತಾರೆ. ಈ ಹಿಂದೆ ನನ್ನ ಅಧಿಕಾರದ ಅವಧಿಯಲ್ಲಿ ಆಸ್ಪತ್ರೆ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಶ್ರಮಿಸಲಾಗಿತ್ತು ಎಂದು ತಿಳಿಸಿದರು.
ಈಗಾಗಲೇ ಸರ್ಕಾರ ಇನ್ನು ಲಾಕ್‌ಡೌನ್ ಜೂ ೧೫ ವರೆಗೆ ಮುಂದೆ ಹಾಕ್ಕಿರುವುದು ಗ್ರಾಮೀಣ ಭಾಗದ ಕೋರೊನಾ ಸೋಂಕು ಕಡಿಮೆ ಮಾಡಿಲಿಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕೊರೊನಾ ಎಂಬ ಮಹಾಮಾರಿ ಸೋಂಕು ಕರಿನರಳು ಗ್ರಾಮೀಣ ಭಾಗದ ಪ್ರತಿಹಳ್ಳಿಗಳ ಭಾಗದ ಜನರನ್ನು ಇನ್ನೂ ಅವರಿಸುತ್ತಿದೆ. ಈ ಸೋಂಕಿಗೆ ಕಡಿವಾಣ ಹಾಕಬೇಕಾದರೆ ಸ್ವಚ್ಚತೆಗೆ ಅದ್ಯತೆ ಕೊಡುವುದರಜೊತೆಗೆ ಪ್ರತಿಯೊಬ್ಬರು ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರವನ್ನು ಕಾದುಕೊಳ್ಳುತ್ತಿರುವುದರಿಂದ ಮಾತ್ರ ಸಾಧ್ಯ ಎಂಬುದನ್ನು ಜನರು ಅರಿತು ಸಮನಾಂತರ ಕಾಯ್ಕುಕೊಳ್ಳಬೇಕಿದೆ. ಗ್ರಾಮೀಣ ಭಾಗದ ಪ್ರತಿ ಮನೆಗಳ ಜನತೆಯನ್ನು ಸಮೀಕ್ಷೆ ನಡೆಸಿ ಡಾಟರ್‌ಗಳು ಔಷಧ ವಿರರಣೆ ಅದ್ಯತೆ ನೀಡಿಬೇಕು. ಸೋಂಕಿತರು ಮನೆಯಿಂದ ಹೊರಬರದಂತೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದರು.
ಭಾರತ ದೇಶದಲ್ಲಿ ಸುಮಾರು ೩ ಲಕ್ಷಕ್ಕೂ ಅಧಿಕ ಜನ ಸೋಂಕಿತರಿದ್ದು, ಅಂತಯೇ ನಮ್ಮ ಜಿಲ್ಲೆ ಮತ್ತು ನಮ್ಮ ತಾಲೂಕಿನಲ್ಲಿ ಅತೀ ಹೆಚ್ಚು ಕೊರೊನಾ ಪಾಸಿಟೀವ್ ಪ್ರಕರಣಗಳು ದಾಖಲಾಗುತ್ತಿದ್ದು ಆಶಾ ಕಾರ್ಯಕರ್ತೆಯರು ಸೋಂಕಿತರು ಹಾಗೂ ಸಂಪರ್ಕಿತರನ್ನು ಹೋಮ್ ಐಸೋಲೇಷನ್ ಮಾಡಿದ್ದು ಅವರಲ್ಲಿ ಹೆಚ್ಚು ಮಂದಿ ಗ್ರಾಮಗಳಲ್ಲಿ ಓಡಾಡುವ ಮೂಲಕ ಇತರರಿಗೂ ಭಯ ಹುಟ್ಟಿಸುತ್ತಿದ್ದಾರೆ. ಹಳ್ಳಿಗಳಲ್ಲಿ ಯಾರ ಮನೆಯಲ್ಲಿಯೂ ಸಹ ಪ್ರತ್ಯೇಕ ಕೊಠಡಿಗಳು, ಶೌಚಾಲಯಗಳು ಇರುವುದಿಲ್ಲ ಇದರಿಂದಲೂ ಸಹ ಸೋಂಕು ಹೆಚ್ಚು ಹರಡುತ್ತದೆ. ಆಶಾಕಾರ್ಯಕರ್ತೆಯರಿಗೆ ಬಿಟ್ಟರೆ ಸೋಂಕಿತರು ಯಾರು ಎಂದು ಊರಿನಲ್ಲಿ ಯಾರಿಗೂ ತಿಳಿದಿರುವುದಿಲ್ಲ ಹಾಗಾಗಿದೆ. ಕೋವಿಡ್ ದೃಡಪಟ್ಟವರು ರಸ್ತೆಯಲ್ಲಿ ಓಡಾಡುತ್ತಿರುವ ಬಗ್ಗೆ ಬಹಳ ದೂರುಗಳಿದ್ದು, ಅಂತವರನ್ನು ಕೋವಿಡ್ ಸೆಂಟರ್ ಅಥವಾ ಆಯಾ ಪಂಚಾಯತಿ ವ್ಯಾಪ್ತಿಯಲ್ಲಿ ಸ್ಥಳೀಯ ಸರ್ಕಾರಿ ಶಾಲೆಗಳನ್ನು ಬಳಸಿಕೊಂಡು ಅಲ್ಲಿಯೇ ಸೋಂಕಿತರನ್ನು ಐಸೋಲೇಷನ್ ಮಾಡಿ ಅವರ ಮನೆಯವರೇ ಊಟ ತಿಂಡಿಗಳನ್ನು ತಂದುಕೊಡುವ ಹಾಗೆ ಮಾಡಿದರೆ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದು ತಪ್ಪುತ್ತದೆ ಎಂದರು.
ಈ ಸಂದರ್ಭದಲ್ಲಿ ಎ. ಮಂಜು ಬಳಗದ ಅಧ್ಯಕ್ಷ ಕೊಣನೂರು ಹೊಯ್ಸಳ, ಗ್ರಾಮ ಪಂಚಾಯಿತಿ ಸದಸ್ಯರಾದ ಜಯಪ್ರಕಾಶ್, ಮೋಹನ್, ಪ್ರವೀಣ್, ಸುವಾಸ್, ಅನು, ಮುಂತಾದವರು ಉಪಸ್ಥಿತರಿದ್ದರು.
