ಹಾಸನ: ಮಾಧ್ಯಮದ ಮುಂದೆ ಹೇಳಿಕೆ ಕೊಡುವಾಗ ಒಂದು ಕಡೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಏರ್ ಪೋರ್ಟ್ ಸ್ಥಳದಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣನವರ ವಿರುದ್ಧ ಅಸಮಧಾನದ ಮಾತುಗಳನ್ನಾಡಿದರೇ, ಇನ್ನು ಮಾಜಿ ಸಚಿವ ಹೆಚ್.ಡಿ. ರೇವಣ್ಣನವರು ಆಗಾಗ್ಗೆ ಮಾಧ್ಯಮದ ಮುಂದೆ ಸಿಎಂ ವಿರೋದ್ಧವಾಗಿಯೇ ಮಾತನಾಡುತ್ತಿದ್ದವರು ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಅಕ್ಕ-ಪಕ್ಕ ಕುಳಿತು ನಗುನಗುತ ಗುಸುಗುಸು ಮಾತನಾಡುವ ಮೂಲಕ ರಾಜಕೀಯದಲ್ಲಿ ವೈರಿಗಳಾದರೂ ಯಾವಾಗ ಬೇಕಾದರೂ ಹೊಂದಾಗಬಹುದು ಎಂಬುದಕ್ಕೆ ಸಾಕ್ಷಿ ಭೂತರಾಗಿದ್ದರು.
ನಗರದ ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಹಾಸನ ಜಿಲ್ಲೆಯ ಕೊರೋನಾ ಸ್ಥಿತಿ-ಗತಿ ಕುರಿತು ನಡೆದ ಸಭೆಯಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣನವರನ್ನು ಕರೆದು ಮುಖ್ಯಮಂತ್ರಿಗಳು ತನ್ನ ಪಕ್ಕದಲ್ಲಿಯೇ ಕೂರಿಸಿಕೊಂಡು ಸಭೆ ಆರಂಭಿಸಿದಾಗ ರೇವಣ್ಣನವರು ಯಾವ ವಿರೋಧದ ಮಾತನ್ನಾಡದೆ ಸಭೆಯಲ್ಲಿ ಆತ್ಮೀಯತೆಯಿಂದ ಸಿಎಂ ಜೊತೆ ಗುಸು ಗುಸು ಮಾತನಾಡುವ ಮೂಲಕ ರಾಜಕೀಯದಲ್ಲಿ ಸಂಚಲನ ಮೂಡಿಸಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮೊದಲು ಮಾತನಾಡಿ, ಹಾಸನ ಜಿಲ್ಲೆಯ ಶಾಸಕರು ಅಭಿವೃದ್ಧಿ ಕಾರ್ಯಕ್ರಮ ಹಾಗು ಕೊವೀಡ್ ಪಾಸಿಟಿವ್ ಧರ ಶೇಕಡಾ ೫ಕ್ಕೆ ಇಳಿಸುವ ಭರವಸೆ ಕೊಟ್ಟಿದ್ದಾರೆ. ಅದಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುವುದು. ಬಹುದಿನಗಳ ಕನಸ್ಸಾಗಿರುವ ಹಾಸನದಲ್ಲಿ ಏರ್ ಪೋರ್ಟ್ ನಿರ್ಮಾಣ ಮಾಡುವ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರ ಸಲಹೆ ಪಡೆದು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು. ನಗರ ಪ್ರದೇಶಗಳಲ್ಲಿ ೩,೫೦೦ ಸಾವಿರ ಸಕ್ರಿಯ ಪ್ರಕರಣ ಇವೆ. ಗ್ರಾಮೀಣ ಪ್ರದೇಶಗಳಲ್ಲಿ ೧೦ ಸಾವಿರ ಸಕ್ರಿಯ ಪ್ರಕರಣಗಳು ಇದ್ದು, ಹಳ್ಳಿಯಲ್ಲಿ ಶೇ.೫ ಕ್ಕಿಂತ ಹೆಚ್ಚು ಪ್ರಕರಣಗಳು ಕಂಡುಬAದರೆ ಕಂಟೋನ್ಮೆAಟ್ ಜೋನ್ ಮಾಡಲು ಸಚಿವರಾದ ಸುಧಾಕರ್ ರವರಿಗೆ ಸೂಚನೆ ನೀಡಿದರು. ರಾಗಿ ಬೆಳೆಗೆ ಸಂಬAಧಿಸಿದAತೆ ಕನಿಷ್ಟ ಬೆಂಬಲ ಬೆಲೆಯಲ್ಲಿ ರಾಗಿ ಹಣ ಬಾಕಿ ಇದೆ ಎಂದಿದ್ದಾರೆ. ತಕ್ಷಣ ಹಣ ಬಿಡುಗಡೆ ಮಾಡುವ ಕೆಲಸ ಮಾಡಲಾಗುವುದು ಎಂದರು.
ಆರೋಗ್ಯ ಸಚಿವರಾದ ಸುಧಾಕರ್ ಮಾತನಾಡಿ, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಎತ್ತಿನಹೋಳೆ ಬಗ್ಗೆ ಜನಪ್ರತಿನಿಧಿಗಳ ಸಭೆ ನಡೆಸಿ ಯೋಜನೆ ಸಮಸ್ಯೆ ನಿವಾರಣೆ ಮಾಡಲಾಗುವುದು ಎಂದರು.
ಮಾಜಿ ಸಚಿವರಾದ ಹೆಚ್.ಡಿ. ರೇವಣ್ಣನವರು ಮಾತನಾಡಿ, ಜಿಲ್ಲೆಯಲ್ಲಿ ಎಪ್ರಿಲ್ ಮೆ ತಿಂಗಳಲ್ಲಿ ಶೇ.೫೦ ರಷ್ಟು ಕೊವೀಡ್ ಪಾಸಿಟಿವ್ ಧರ ಇತ್ತು. ಜಿಲ್ಲಾಡಳಿತ ಶ್ರಮದಿಂದ ಶೇ,೧೭ ಪಾಸಿಟಿವ್ ದರ ಇದೆ. ಕೊರೊನಾ ಕಾರಣದಿಂದ ಮರಣ ಹೊಂದಿದ ಬಿಪಿಎಲ್ ಕಾರ್ಡ ಹೊಂದಿರುವ ಬಡವರಿಗೆ ೫ ಲಕ್ಷ ಹಾಗು ಮುಖ್ಯಮಂತ್ರಿ ಪರಿಹಾರ ನಿಧಿಯಲ್ಲಿ ಹಣ ನಿಡಲು ಮನವಿ ಮಾಡಿದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಡಜನರು ತಮ್ಮ ಜಮೀನು. ಆಸ್ತಿ. ಮಾರಿದ್ದಾರೆ ಇವರಿಗೆ ಚಿಕಿತ್ಸೆ ಪಡೆದ ಅರ್ಧದಷ್ಟು ಹಣ ಪರಿಹಾರ ನೀಡಲು ಕೊರಿಕೆ. ಚನ್ನಪಟ್ಟಣ ಕೆರೆ ಪ್ರವಾಸೋದ್ಯಮ ಕೇಂದ್ರ ಉಧ್ಯಾನವನ ಮಾಡಲು ಚಿಕ್ಕಮಗಳೂರನಿಂದ ಬೇಲೂರು ಹಾಸನ ಮೂಲಕ ಮೈಸೂರಿಗೆ ಹೊಗುವ ರೈಲ್ವೆ ಯೋಜನೆ ಮಂಜೂರು ಮಾಡಲು ಕೊರಿದರು
ಸಂಸದರಾದ ಪ್ರಜ್ವಲ್ ರೇವಣ್ಣನವರು ಮಾತನಾಡಿ, ಕಳೆದ ೩ ವಾರಗಳಿಂದ ಹಾಸನ ಜಿಲ್ಲೆಯ ಕೊವೀಡ್ ಪರಿಸ್ಥಿತಿ ಹದಗೆಟ್ಟಿತು. ಇವತ್ತು ಪಾಸಿಟಿವ್ ರೇಟ್ ಕಡಿಮೆಯಾಗಿದೆ. ಆದರೇ ಮರಣ ಸಂಖ್ಯೆ ಇನ್ನು ಕಡಿಮೆಯಾಗಿಲ್ಲ. ಕೃಷಿಯಂತ್ರೋಪಕರಣ ಯೋಜನೆಯ ಸಹಾಯಧನ ಸಾಮಾನ್ಯ ವರ್ಗಕ್ಕೆ ಶೇ.೪೦, ಪರಿಶಿಷ್ಟ ಜಾತಿ ಪರಿಶಿಷ್ಟ ಸಮುದಾಯಕ್ಕೆ ಶೇ,೫೦ ನಿಗದಿಮಾಡಲಾಗಿದೆ. ಕೃಷಿ ಕೆಲಸ ಮಾಡುವರಿಗೆ ಹೆಚ್ಚಿನ ಸಹಾಯ ಮಾಡಬೇಕು. ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಸಿಬ್ಬಂದಿ ನೇಮಕಾತಿ ಮಾಡಬೇಕು ಎಂದರು. ರೈತ ಸಂಪರ್ಕ ಕೇಂದ್ರ ಹಾಗು ಬ್ಯಾಂಕುಗಳ ಸಮಯ ಹೆಚ್ಚಿಸಲು ಮಾನ್ಯ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದರು. ಆರೋಗ್ಯ ಸಚಿವರಾದ ಸುಧಾಕರ್ ಭರವಸೆ ನೀಡಿದಂತೆ ವೈದ್ಯರ ಹುದ್ದೆ ವೆಂಟಿಲೇಟರ್ ಗಳು ಹಾಸನ ಜಿಲ್ಲೆಗೆ ಸಿಕ್ಕಿದೆ. ಕೊವೀಡ್ ಎರಡನೆ ಆಲೆ ಬಗ್ಗೆ ಜನಪ್ರತಿನಿಧಿಗಳಾದ ನಾವು ಎಡವಿದ್ದೆವೆ. ಕೊವೀಡ್ ೩ನೇ ಆಲೆಗೆ ಪಿಡ್ರಿಯಾಟಿಕ್ ಐ.ಸಿ.ಯು. ಮಾಡಲು ಆರೋಗ್ಯ ಸಚಿವರಲ್ಲಿ ಕೊರಿಕೆ. ಪ್ರತಿ ಜಿಲ್ಲೆಯಲ್ಲಿ ಮಕ್ಕಳ ಚಿಕಿತ್ಸೆಗೆ ೭೫ ಹಾಸಿಗೆ ನಿಗದಿಪಡಿಸಲಾಗಿದೆ ಎಂದು ಸಚಿವರಾದ ಸುಧಾಕರ್ ತಿಳಿಸಿದರು. ವ್ಯಾಕ್ಸಿನೇಷನ್ ಅನ್ನು ವಾರ್ಡ.ಮತ್ತು ಪಂಚಾಯತಿ ಮೂಲಕ ಚಾಲನೆ ನೀಡಲು ಕೋರಿದರು
ಶಾಸಕರಾದ ಪ್ರೀತಂ ಜೆ. ಗೌಡ ಮಾತನಾಡಿ, ಸರ್ಕಾರವು ಅಸಂಘಟಿತ ಕಾರ್ಮಿಕರಿಗೆ ಶ್ರಮಿಕರಿಗೆ ಪ್ಯಾಕೇಜ್ ಘೋಷಣೆ ಮಾಡಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕಿಗೆ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲು ಸಹಕಾರ ನೀಡಿರುವುದಕ್ಕೆ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಚನ್ನರಾಯಪಟ್ಟಣ ಶಾಸಕರಾದ ಸಿ.ಎನ್. ಬಾಲಕೃಷ್ಣ ಮಾತನಾಡಿ, ತಾಲ್ಲೂಕಿಗೆ ಖಾಲಿ ಇದ್ದ ವೈದ್ಯರ ಹುದ್ದೆ ಭರ್ತಿ ಮಾಡಿರುವುದಕ್ಕೆ ಧನ್ಯವಾದಗಳು. ಕೊವೀಡ್ ಪ್ರಾರಂಭದಲ್ಲಿ ಆರ್.ಟಿ.ಪಿ.ಸಿ.ಆರ್. ೮ ದಿನಗಳಾದರೂ ಬರುತ್ತಿರಲಿಲ್ಲ. ಆರೋಗ್ಯ ಸಚಿವರು ಬಂದು ಸಭೆ ನಡೆಸಿದ ಮೇಲೆ ೪೮ ಗಂಟೆಯಲ್ಲಿ ರಿಪೋರ್ಟ್ ಸಿಗುತ್ತಿದೆ. ಹಳ್ಳಿಯ ನಡೆ ವೈದ್ಯರ ಕಡೆ ಉತ್ತಮ ಕಾರ್ಯಕ್ರಮ. ಇದರಿಂದ ಕೊವೀಡ್ ನಿಯಂತ್ರಣ ಮಾಡಲು ಸಹಕಾರಿಯಾಗಿದೆ. ಹೆಚ್ಚು ವ್ಯಾಕ್ಸಿನೇಷನ್ ಕೊಡಲು ನಮ್ಮ ಕೊರಿಕೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಬಡವರಿಗೆ ಅರ್ಧದಷ್ಟು ಹಣ ಸರ್ಕಾರದಿಂದ ನೀಡುವ ಮೂಲಕ ನೆರವಾಗಬೇಕು. ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆ ೬೦ ಹಾಸಿಗೆಯಿಂದ ೧೦೦ ಹಾಸಿಗೆಗೆ ಹೆಚ್ಚಿಸಬೇಕು ಹಾಗೂ ಆಶಾ ಕಾರ್ಯಕರ್ತರಿಗೆ ಮುಂದಿನ ಬಜೆಟ್ ನಲ್ಲಿ ಸರಿಸಮಾನವಾದ ವೇತನ ಕೊಡುವಂತೆ ಮುಖ್ಯಮಂತ್ರಿ ಯವರಲ್ಲಿ ಮನವಿ ಮಾಡಿದರು.
ಬೇಲೂರು ಕ್ಷೇತ್ರದ ಶಾಸಕರಾದ ಲಿಂಗೇಶ್ ಮಾತನಾಡಿ, ಡಿ.ಎಚ್.ಒ., ಜಿಲ್ಲಾ ಶ್ರಸ್ತç ಚಿಕಿತ್ಸಕರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೊವೀಡ್ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ. ಹೊಂ ಕ್ವಾರಂಟೈನ್ ರದ್ದು ಮಾಡಿ ಕೊವೀಡ್ ಸೆಂಟರ್ ಗೆ ವರ್ಗಾಯಿಸಬೇಕು. ವಾರದಲ್ಲಿ ೩ ದಿನ ಸಂತೆಯ ಸಮಯ ವಿಸ್ತರಣೆ ಮಾಡಲು ಕೊರಿಕೆ. ತಾಲ್ಲೂಕಿನಲ್ಲಿ ೩ ನದಿಗಳು ಇದ್ದರು ರೈತರಿಗೆ ಯಾವುದೇ ಅನುಕೂಲ ಆಗುತ್ತಿಲ್ಲ. ಜಲಾನಯನ ಯೋಜನೆ ಮಂಜೂರು ಮಾಡಬೇಕು ಹಾಗೂ ಕಾವೇರಿ ನೀರಾವರಿ ನಿಗಮದಿಂದ ರಸ್ತೆ ನಿರ್ಮಾಣದ ಹಣ ತಡೆದಿದ್ದಾರೆ ಅದನ್ನು ಕೂಡಲೇ ಮಂಜೂರು ಮಾಡುವಂತೆ ಮನವಿ ಮಾಡಲಾಯಿತು.
ಸಕಲೇಶಪುರ-ಆಲೂರು ಕ್ಷೇತ್ರದ ಶಾಸಕ ಹೆಚ್.ಕೆ. ಕುಮಾರಸ್ವಾಮಿ ಮಾತನಾಡಿ, ಕ್ಷೇತ್ರದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಕಳೆದ ಒಂದು ತಿಂಗಳಲ್ಲಿ ೬ ಜನ ಸತ್ತುಹೊಗಿದ್ದಾರೆ. ಸಕಲೇಶಪುರ ತಾಲ್ಲೂಕಿಗೆ ಆರೋಗ್ಯ ಸಚಿವರು ನೀಡಿದ ಭರವಸೆಯಂತೆ ವೈದ್ಯರ ಹುದ್ದೆ ಭರ್ತಿಯಾಗಿದೆ. ಆದರೆ ಎ.ಎನ್.ಎಮ್. ನರ್ಸಿಂಗ್ ಸಿಬ್ಬಂದಿ ಕೊರತೆ ಇರುವುದರಿಂದ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡುವಂತೆ ಮನವಿ ಮಾಡಿದರು.
ಅರಕಲಗೂಡು ಕ್ಷೇತ್ರದ ಶಾಸಕರಾದ ಎ.ಟಿ. ರಾಮಸ್ವಾಮಿ ಮಾತನಾಡಿ, ಹೇಮಾವತಿ ಜಲಾಶಯನ ಪ್ರದೇಶದ ವ್ಯಾಪ್ತಿಯಲ್ಲಿ ೮ ಸಾವಿರ ಎಕರೆ ಆಕ್ರಮ ಭೂ ಮಂಜೂರು ಮಾಡಲಾಗಿದೆ. ಒಂದೆ ವೋಚಾರ್ ಜೆರಾಕ್ಸ್ ಪ್ರತಿ ಪಡೆದು ಮಂಜೂರು ಮಾಡಲಾಗಿದೆ. ಇದರಿಂದ ಬಡವರಿಗೆ ಅನ್ಯಾವಾಗಿರುವುದರಿಂದ ಭೂಗಳ್ಳರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು. ವಾರದಲ್ಲಿ ೩ ದಿನ ಅಂಗಡಿ ಮುಗ್ಗಟ್ಟು ತೆರೆಯಲು ಅನುಮತಿ ಇದೆ. ಬೆಳಿಗ್ಗೆ ೬ ಗಂಟೆಗೆ ಯಾರು ಬರುತ್ತಾರೆ. ೮ ಗಂಟೆ ಎಲ್ಲಾ ಬಂದು ಜನ ಜಾಸ್ತಿಯಾಗಿ ಸೇರುತ್ತಾರೆ. ಯಾವುದೇ ಸಾಮಾಜಿಕ ಅಂತರ ಪಾಲನೆ ಇರುವುದಿಲ್ಲ. ಪಕ್ಕದಲ್ಲಿ ತರಕಾರಿ ಮಾರಟ ಮಾಡುತ್ತಾರೆ ವಾರದಲ್ಲಿ ೫ ದಿನ ಲಾಕ್ ಡೌನ್ ಎರಡು ದಿನ ವಾರ ಪೂರ್ತಿ ಮಾರಾಟ ಮಾಡಲು ಅವಕಾಶ ಕೊಡಿ ಎಂದು ಹೇಳಿದರು. ಅರಕಲಗೂಡು ಸಾರ್ವಜನಿಕ ಆಸ್ಪತ್ರೆಯಲ್ಲಿ ೮೦ ಜನರಿಗೆ ಚಿಕಿತ್ಸೆ ನಿಡಲು ಅವಕಾಶ ಇದೆ ಅದಕ್ಕಿಂತ ಹೆಚ್ಚಿನ ಪ್ರಕರಣ ಕಾರಿಡಾರ್ ನಲ್ಲಿ ಮಲಗುತ್ತಿದ್ದಾರೆ ಅರಕಲಗೂಡು ಸಾರ್ವಜನಿಕ ಆಸ್ಪತ್ರೆಗೆ ಐ.ಸಿ.ಯು ಹೆಚ್ಚು ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿ ಗಿರೀಶ್ ಉತ್ತರಿಸುತ್ತಾ ಈ ಪ್ರಕರಣ ಸಂಬAಧಿಸಿದAತೆ ಕ್ರಿಮಿನಲ್ ಪ್ರಕರಣ ದಾಖಲಾಗಿ ಆರೋಪಿಗಳನ್ನು ಬಂದಿಸಲಾಗಿದೆ. ತನಿಖೆ ನಡೆದು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು. ಭೂ ಸ್ವಾಧೀನ ಹಣ ಬಂದಿದೆ ಕೊರೊನಾ ಕಾರಣ ಕೆಲಸವಾಗುತ್ತಿಲ್ಲ. ವಾರದಲ್ಲಿ ಪರಿಹಾರದ ಹಣ ಕೊಡಿಸಲಾಗುವುದು ಎಂದು ಹೇಳಿದರು.
ಅರಸೀಕೆರೆ ತಾಲೂಕು ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಅರಸೀಕೆರೆ ತಾಲ್ಲೂಕಿನಲ್ಲಿ ಜಿಲ್ಲಾಡಳಿತ ಹಾಗು ಜನಪ್ರತಿನಿಧಿಗಳು ನಿರ್ವಹಣೆ ಮಾಡಿದ್ದೆವೆ. ಹೋಂ ಎಷೊಲೇಷನ್ ಒತ್ತಾಯ ಮಾಡಿ ನಾನೆ ಮಾಡಿಸಿದ್ದೆ. ಈವೇಳೆ ನನ್ನ ವಿರುದ್ದ ಅಪ್ರಚಾರ ಮಾಡಿದರು. ಹಳ್ಳಿಯ ಜನರನ್ನು ಹಿಡಿದುಕೊಂಡು ಕ್ವಾರಂಟೈನ್ ಸೆಂಟರ್ ಗೆ ಸೇರಿಸಿದ್ದ ಪರಿಣಾಮ ಕೊವೀಡ್ ಪ್ರಕರಣಗಳು ಕಡಿಮೆಯಾಗಿವೆ.. ಮರಣ ಹೊಂದಿದವರಿಗೆ ಸರ್ಕಾರದಿಂದ ಪರಿಹಾರ ಕೊಡಬೇಕು. ರಾಷ್ಟಿçÃಯ ವಿಪತ್ತು ಘೋಷಣೆಯಾಗಿದೆ ಕೇಂದ್ರ ಸರ್ಕಾರದಿಂದ ೪ ಲಕ್ಷ ರಾಜ್ಯ ಸರ್ಕಾರದಿಂದ ೧ ಲಕ್ಷ ಪರಿಹಾರ ನಿಡಲು ಶಾಸಕರ ಆಗ್ರಹ. ರಾಜ್ಯದಲ್ಲಿ ೨೦ ಸಾವಿರ ಜನರು ಮರಣಹೊಂದಿದ್ದು, ಸರ್ಕಾರಕ್ಕೆ ೩೦೦ ಕೋಟಿ ಹಣ ಖರ್ಚಾಗಬಹುದು. ನೀವು ಹಾಸನ ಜಿಲ್ಲೆಗೆ ಬಂದಿದ್ದಿರಿ. ಪರಿಹಾರದ ಹಣದ ಬಗ್ಗೆ ಘೋಷಣೆ ಮಾಡಲು ಮನವಿ. ಎತ್ತಿನಹೋಳೆ ಯೋಜನೆ ಭೂ ಸ್ವಾಧೀನ ಪರಿಹಾರ ಕೊಡಲು ಆಗ್ರಹ. ರಾಗಿಗೆ ಬೆಂಬಲ ಬೆಲೆ ನೀಡಿದ್ದಿರಿ. ರಾಗಿ ಮಾರಾಟ ಮಾಡಿದ ಹಣ ರೈತರಿಗೆ ತಲುಪಿಲ್ಲ. ಸರಕಾರಿ ಇಂಜಿನಿಯರಿAಗ್ ಕಟ್ಟಡದ ಬಗ್ಗೆ ಸರಿಪಡಿಸಬೇಕು ಎಂದು ಕೋರಿದರು.
ಇದೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಅವರು, ಹಾಸನ ಜಿಲ್ಲೆಯ ಕೊರೋನಾ ಸ್ಥಿತಿ-ಗತಿ ಬಗ್ಗೆ ವಿವರಿಸಿದರು. ಲಾಕ್ ಡೌನ್ ಅನ್ ಲಾಕ್ ಡೌನ್ ಬಗ್ಗೆ ಸಿಎಂ ಬಳಿ ಮಾಹಿತಿ ಪಡೆದರು.