ಪೆಟ್ರೋಲ್ ಧರ ಏರಿಕೆ ಖಂಡಿಸಿ ಬನವಾಸೆ ರಂಗಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ, ಆಕ್ರೋಶ

ಹಾಸನ: ನೂರರ ಗಡಿ ದಾಟಿರುವ ಪೆಟ್ರೋಲ್ ಮತ್ತು ಡಿಸೇಲ್ ಧರ ಏರಿಕೆ ಖಂಡಿಸಿ ಡೈರಿ ವೃತ್ತ, ಬೆಂಗಳೂರು ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಎದುರು ಕಾಂಗ್ರೆಸ್ ಮುಖಂಡರಾದ ಬನವಾಸೆ ರಂಗಸ್ವಾಮಿ ನೇತೃತ್ವದಲ್ಲಿ ಸರಕಾರದ ವಿರುದ್ಧ ಪ್ರತಿಭಟಿಸಿ ಆಕ್ರೋಶವ್ಯಕ್ತಪಡಿಸಲಾಯಿತು.


      ಬಿಜೆಪಿ ಭ್ರಷ್ಟ ಸರಕಾರವು ರೈತರನ್ನು ಹೊಕ್ಕಲೆಬ್ಬಿಸುವುದು, ನೊಂದವರು, ಬಡವರ ಬಗ್ಗೆ ಯಾವ ಗಮನ ಕೊಡದೆ ಇಂದು ಬೀದಿಗೆ ಬಂದಿದ್ದು, ಸರಕಾರದ ಅನಿತಿಗಳಿವೆ ಇವೆಲ್ಲಾವನ್ನು ಬಡವರ ಮೇಲೆ ಹಾಕುತ್ತಿದ್ದಾರೆ. ಇಂದು ಮಧ್ಯಮವರ್ಗ ಜೀವನ ನಡೆಸುವುದೆ ಕಷ್ಟಕರವಾಗಿದೆ ಎಂದು ದೂರಿದರು. ಸಂಕಷ್ಟದ ಸಮಯದಲ್ಲಿ ಪೆಟ್ರೋಲ್ ಮತ್ತು ಡಿಸೇಲನ್ನು ೪೪ ಬಾರಿ ಏರಿಕೆ ಮಾಡುವ ಮೂಲಕ ಈಗ ಲೀಟರ್ ಗೆ ನೂರು ರೂಗಳ ಗಡಿ ದಾಟಿದೆ. ಮುಂದಿನ ದಿನಗಳಲ್ಲಿ ಜನರು ಬಿಜೆಪಿ ಸರಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ. ಇಂತಹ ಸರಕಾರದ ವಿರುದ್ಧ ಧ್ವನಿ ಎತ್ತಿ ಬಡವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ ಎಂದರು. ರಾಜ್ಯದ ಮುಖ್ಯಮಂತ್ರಿಗಳು ಹಾಸನ ನಗರಕ್ಕೆ ಆಗಮಿಸಿದ್ದು, ಹಾಸನಕ್ಕೆ ಯಾವ ಅಭಿವೃದ್ಧಿ ಕೆಲಸ ಮಾಡದೇ ಮಲತಾಯಿ ದೋರಣೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳ ಸ್ವಂತ ಊರು ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ಮಾತ್ರ ಅಭಿವೃದ್ಧಿಗೆ ಗಮನ ಕೊಟ್ಟು ಹೆಚ್ಚಿನ ಹಣ ಬಿಡುಗಡೆ ಮಾಡುತ್ತಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು. ಇಂತಹ ಸರಕಾರದಿಂದ ನಾವೆಲ್ಲಾ ವಿಮುಕ್ತರಾಗೋಣ ಎಂದು ಇದೆ ವೇಳೆ ಕರೆ ನೀಡಿದರು.

      ಕೆಂಚಾAಬ ಪೆಟ್ರೋಲ್ ಬಂಕ್ ಬಳಿ ಹೆಚ್.ಕೆ. ಮಹೇಶ್ ನೇತೃತ್ವಲ್ಲಿಯೂ ಕೂಡ ಪ್ರತಿಭಟನೆ ನಡೆಸಿ ಸರಕಾರದ ವಿರುದ್ಧ ಆಕ್ರೋಶವ್ಯಕ್ತಪಡಿಸಲಾಯಿತು.

ವೇಳೆ ವಿಧಾನ ಪರಿಷತ್ತು ಸದಸ್ಯರಾದ ಗೋಪಾಲಸ್ವಾಮಿ, ಕಾಂಗ್ರೆಸ್ ಮುಖಂಡರಾದ ಬನವಾಸೆ ರಂಗಸ್ವಾಮಿ, ಭಾರತೀಯ ರಾಷ್ಟಿçÃಯ ಮಜ್ದೂರ್ ಕಾಂಗ್ರೆಸ್ ಅಧ್ಯಕ್ಷ ಕುಮಾರಸ್ವಾಮಿ, ಕೆಲವತ್ತಿ ಸೋಮಶೇಖರ್, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಬಸವರಾಜು, ಬಾಲಶಂಕರ್, ಜಿಲ್ಲಾ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಕೋಮಲೇಶ್, ತಾಪಂ ಮಾಜಿ ಉಪಾಧ್ಯಕ್ಷ ರಾಜಣ್ಣ, ವೆಂಕಟೇಗೌಡ, ಸೋಮಣ್ಣ ಇತರರು ಪಾಲ್ಗೊಂಡಿದ್ದರು.


Post a Comment

Previous Post Next Post