ಹಾಸನ: ನಗರ ಮತ್ತು ಸುತ್ತ ಮುತ್ತ ಕಳೆದ ಎರಡು ಮೂರು ದಿನಗಳಿಂದಲೂ ಮಳೆ ರಾಯನ ಆರ್ಭಟಕ್ಕೆ ಜನ ಜೀವನ ಅಸ್ತವ್ಯಸ್ತವಾಗಿದೆ.
ಕೊರೋನಾ ಆವರಿಸಿ ಜಿಲ್ಲೆಯಲ್ಲಿ ಲಾಕ್ ಡೌನ್ ಆದೇಶ ಇದ್ದು, ವಾರದ ಮೂರು ದಿನಗಳು ಬೆಳಿಗ್ಗೆ ೬ ರಿಂದ ೧೦ರ ವರೆಗೂ ನಾಲ್ಕು ಗಂಟೆಗಳ ಕಾಲ ಮಾತ್ರ ಅಗತ್ಯ ವಸ್ತುಗಳ ವ್ಯಾಪಾರ ಮಾಡಲು ಅವಕಾಶ ಕೊಡಲಾಗಿದೆ. ಉಳಿದಂತೆ ನಾಲ್ಕು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಇರುವದರಿಂದ ಮಳೆ ಸುರಿದರು ಸಾರ್ವಜನಿಕರಿಗೆ ಅಷ್ಟೊಂದು ಸಮಸ್ಯೆ ಕಾಣಿಸಲಿಲ್ಲ. ಮಳೆ ಆಗಾಗ್ಗೆ ಸುರಿಯುತ್ತಿರುವುದರಿಂದ ಕರ್ತವ್ಯ ನಿರ್ವಹಿಸುವ ಪೊಲೀಸರು, ವೈದ್ಯರು ಮತ್ತು ಸಿಬ್ಬಂದಿಗಳು, ಪುಡ್ ವಿತರಿಸುವವರಿಗೆ, ಪತ್ರಕರ್ತರಿಗೆ ಸಲ್ಪ ಸಮಸ್ಯೆ ಬಿಟ್ಟರೆ ಉಳಿದವರಿಗೆ ಯಾವ ಸಮಸ್ಯೆ ಉಂಟಾಗಲಿಲ್ಲ.
Tags
ಹಾಸನ