ಹಾಸನ: ಕೊರೋನಾ ಎಂಬ ಮಹಾಮಾರಿ ಆವರಿಸಿರುವುದರಿಂದ ಪಾಸಿಟಿವ್ ಪ್ರಕರಣ ನಿಯಂತ್ರಿಸಲು ಸರಕಾರವು ಲಾಕ್ ಡೌನ್ ಆದೇಶ ಜಾರಿಗೆ ತರಲಾಗಿದ್ದರೂ ಅನೇಕ ಜನರು ಎಚ್ಚೆತ್ತುಕೊಳ್ಳದ ಕಾರಣ ಭಾನುವಾರದ ಲಾಕ್ ಡೌನ್ ಅಷ್ಟೊಂದು ಪರಿಣಾಮ ಬೀರಲಿಲ್ಲ.
ನಗರದ ಬಹುತೇಕ ರಸ್ತೆಗಳಲ್ಲಿ ವಾಹನಗಳ ಸಂಚಾರ ಕಂಡು ಬಂದರೇ ಮುಖ್ಯ ರಸ್ತೆಗಳಲ್ಲಿ ಸಂಪೂರ್ಣ ಅಂಗಡಿ-ಮುಗ್ಗಟುಗಳು ಬಂದ್ ಆಗಿದ್ದವು. ಗಲ್ಲಿ-ಗಲ್ಲಿಗಳಲ್ಲಿ ಹಿಂದಿನಿAದ ಎಲ್ಲಾ ವ್ಯಾಪಾರವು ಸಲಿಸಾಗಿಯೇ ನಡೆಯುತಿತ್ತು. ಇನ್ನು ಭಾನುವಾರದ ಬಾಡುಟಕ್ಕೆ ಯಾವ ತೊಂದರೆ ಆಗಲಿಲ್ಲ. ಕೋಳಿ, ಕುರಿ ಮಟನ್ ಕೂಡ ಹಿಂಬಾಗಿಲಿನಿAದ ಸಿಗುತಿತ್ತು. ಕೆಲ ರಸ್ತೆಗಳಲ್ಲಿ ವಾಹನಗಳ ಓಡಾಟ ಹೆಚ್ಚಾಗಿ ಟ್ರಾಫೀಕ್ ಸಮಸ್ಯೆ ಕೂಡ ಕಂಡು ಬಂದಿತು. ಕೆಲ ಸಂದರ್ಭಗಳಲ್ಲಿ ವಾಹನ ತಪಾಸಣೆ ಮಾಡಿ, ಅನಗತ್ಯವಾಗಿ ರಸ್ತೆಗಿಳಿಯುವ ವಾಹನಗಳನ್ನು ಸೀಝ್ ಮಾಡುತ್ತಿದ್ದ ಪೊಲೀಸರು ಭಾನುವಾರ ಕಾರ್ಯವೈಕರಿ ಅಷ್ಟೊಂದು ಕಾಣಿಸಲಿಲ್ಲ. ಇದರಿಂದಲೇ ಹಾಸನ ನಗರ ಸೇರಿದಂತೆ ಎಲ್ಲಾ ಭಾಗಗಳಲ್ಲೂ ಅನಗತ್ಯ ವಾಹನಗಳು ಯಾವ ಭಯವಿಲ್ಲದೇ ಓಡಾಟ ನಡೆಸಿದ್ದರು.