ಬೇಲೂರ: ಕೊರೊನಾ ಮಹಾಮಾರಿಯಿಂದ ಸಂಕಷ್ಟಕ್ಕೆ ಒಳಗಾದವರಿಗೆ ಪಡಿತರದ ಕಿಟ್ ನೀಡುವ ಮೂಲಕ ವರ್ತಕರ ಸಂಘವು ಸಮಾಜಮುಖಿ ಕೆಲಸ ಮಾಡುತ್ತಿದೆ ಎಂದು ನಗರ ಆರಕ್ಷಕ ವೃತ್ತ ನಿರೀಕ್ಷಕ ಯೋಗೇಶ್ ಹೇಳಿದರು.
ವರ್ತಕರ ಸಂಘದಿಂದ ನೀಡಲಾದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಉಳ್ಳವರು ಸಂಕಷ್ಟದಂತ ಇಂತಹ ಸಂದರ್ಭ ನೆರವು ನೀಡುವುದು ಒಳ್ಳೆಯದು. ವರ್ತಕರು ಸಹಮತದಿಂದ ಇಂತಹ ಮಹಾನ್‍ಕಾರ್ಯ ಮಾಡಿದ್ದಾರೆ.
ಸಾರ್ವಜನಿಕರು ಕೊರೊನಾ ರೋಗಬಾಧೆಯಿಂದ ದೂರವಾಗಲು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮಾಡಬೇಕು. ವಿನಾಕಾರಣ ಮನೆಯಿಂದ ಹೊರಬಂದು ಸುತ್ತಾಡುವುದನ್ನು ಬಿಡಬೇಕು. ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಈ ಸಂದರ್ಭ ವರ್ತಕರ ಸಂಘದ ಅಧ್ಯಕ್ಷ ಬಿಎನ್.ಗಿರಿಯಪ್ಪಶೆಟ್ಟಿ ಮಾತನಾಡಿದರು. ಸಂಘದ ಕಾರ್ಯದರ್ಶಿ ಅಶ್ವಕ್, ಸ.ಕಾ.ತೀರ್ಥಂಕರ್ ಹಾಗೂ ಪದಾಧಿಕಾರಿಗಳಾದ ಧನ್ಯ,ಅಶೋಕ್, ಶ್ರೀನಿವಾಸ್, ಗಣೇಶ್ ಇತರರು ಇದ್ದರು.
Tags
ಬೇಲೂರು
