ಬೇಲೂರು : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಬೇಲೂರು ಇದರಿಂದ ತಾಲೂಕಿನ ದೊಡ್ಡಕೋಡಿಹಳ್ಳಿ ವಲಯದ ಮಹಮದ್‍ಪುರ ಕಾರ್ಯಕ್ಷೇತ್ರದಲ್ಲಿ ಪರಿಸರ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜ ಸೇವಕರಾದ ಸೋಮಣ್ಣರವರು ವಹಿಸಿ ಪರಿಸರ ಹೇಗೆ ಉಳಿಸಬೇಕು, ಪರಿಸರ ನಾಶದಿಂದ ಆಗುತ್ತಿರುವ ದುಶ್ಪರಿಣಾಮ ಕುರಿತು ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ.ಕ್ಷೇ.ಧ.ಗ್ರಾ.ಯೋ ಮೈಸೂರು ಪ್ರಾದೇಶಿಕ ನಿರ್ದೇಶಕ ಪಿ.ಗಂಗಾಧರ್ ಪೈ, ನೆರವೇರಿಸಿ ಪರಿಸರ ಉಳಿಸಿಕೊಳ್ಳುವ ಬಗ್ಗೆ ಏನೆಲ್ಲಾ ಕ್ರಮ ಕೈಗೊಳ್ಳಬೇಕಿದೆ ಇಲ್ಲದಿದ್ದರೆ ಆಗುವ ಅನಾಹುತ ಕುರಿತು ಮಾತನಾಡಿದರು.
ತಾರಾನಾಥ್ ಗ್ರಾ.ಪಂ ಸದಸ್ಯರಾದ ತಾರಾನಾಥ್, ಮಾಜಿ ಗ್ರಾ.ಪಂ ಸದಸ್ಯರಾದ ಕತೀಬ್‍ಖಾನ್, ಜೈತುನ್, ಜಿಲ್ಲಾರೈತ ಸಂಘದ ಅಧ್ಯಕ್ಷ ಶಿವಪ್ಪ, ಶಾಲೆಯ ಮುಖ್ಯೋಪಾಧ್ಯಾಯರಾದ ಪುಟ್ಟಪ್ಪ, ಗ್ರಾ.ಪಂ.ಸದಸ್ಯರಾದ ನಟರಾಜು,ರೈತಸಂಘದ ಕಾರ್ಯದರ್ಶಿ ಶಿವಶಂಕ್ರಪ್ಪ, ಕುಮಾರ್, ಪತ್ರಕರ್ತ ರಘು ಪ್ರಮುಖರಾದ ರಂಗೇಗೌಡ ಹಾಗೂ ತಾಲೂಕಿನ ಯೋಜನಾಧಿಕಾರಿ ಸಂಧ್ಯಾ ವಿ.ಶೆಟ್ಟಿ ಇದ್ದರು.