ಹಾಸನ: ಭಾರತ ಸೇವಾದಳ ಜಿಲ್ಲಾ ಸಮಿತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿರುವ ೯ ದಿನಗಳ ಜಿಲ್ಲಾ ಮಟ್ಟದ ಆನ್ಲೈನ್ ಯೋಗ ತರಬೇತಿ ಶಿಬಿರವು ಭಾನುವಾರದಂದು ಬೆಳಿಗ್ಗೆ ಆರಂಭಗೊಂಡಿತು.
ಆನ್ಲೈನ್ ಯೋಗ ತರಬೇತಿ ಶಿಬಿರವನ್ನು ಹೆಚ್ಚುವರಿ ಪೊಲೀಸ್ ಅಧಿಕಾರಿ ಬಿ.ಎನ್. ನಂದಿನಿ ಅವರು ಉದ್ಘಾಟಿಸಿ ಮಾತನಾಡಿದ ಅವರು, ಯೋಗ ಎಂಬುದು ಪ್ರತಿಯೊಬ್ಬರಿಗೂ ಅವಶ್ಯಕತೆ ಇದ್ದು, ಅದರಲ್ಲೋ ಈ ಕೊರೋನಾ ಸಂದರ್ಭದಲ್ಲಿ ಮನುಷ್ಯನ ಶಕ್ತಿ ಹೆಚ್ಚಿಸಲುಲ ಯೋಗ ಸಹಕಾರಿಯಾಗಿದೆ. ಲಾಕ್ ಡೌನ್ ನಿಯಮ ಜಾರಿಗೆ ಇರುವುದರಿಂದ ಒಟ್ಟಿಗೆ ಯೋಗ ಮಾಡಲು ಸಮಸ್ಯೆ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಮನೆಯಲ್ಲೆ ಕುಳಿತು ಯೋಗಾಭ್ಯಾಸ ಮಾಡಲು ಆನ್ಲೈನ್ ಯೋಗ ತರಬೇತಿ ಶಿಬಿರ ಹಮ್ಮಿಕೊಂಡಿರುವುದು ಉತ್ತಮವಾಗಿದೆ ಎಂದರು. ಪ್ರತಿ ದಿನ ಬೆಳಿಗ್ಗೆ ೭:೧೫ ರಿಂದ ೮:೧೫ರ ವರೆಗೂ ೯ ದಿನಗಳ ಕಾಲ ಯೋಗ ತರಬೇತಿ ನೀಡಲಿದ್ದಾರೆ. ಇದರಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಇದೆ ವೇಳೆ ಕರೆ ನೀಡಿದರು.
ಜಿಲ್ಲಾ ಮಟ್ಟದ ಆನ್ಲೈನ್ ಯೋಗ ತರಬೇತಿ ಶಿಬಿರದಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಎಂ.ಕೆ. ಕಮಲ್ ಕುಮಾರ್, ಜಿಲ್ಲಾ ಸಂಘಟಕಿ ವಿ.ಎಸ್. ರಾಣಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಧ ನಾಯಕರಹಳ್ಳಿ ಮಂಜೇಗೌಡ, ಗೌರವಾಧ್ಯಕ್ಷ ರವಿ ನಾಕಲಗೂಡು ಹಾಗೂ ಯೋಗ ತರಬೇತುದಾರರಾದ ದೀಪಾಮಹೇಶ್, ಶಿಬಿರಕ್ಕೆ ಸಹಕಾರ ವಿಷ್ಣುವರ್ಧನ್, ಶಿಕ್ಷಕರು ಚೈತ್ರಾ ಮಂಜೇಗೌಡ, ಬಿ.ಎನ್. ಮಹೇಶ್ ಇತರರು ಪಾಲ್ಗೊಂಡಿದ್ದರು.