ಸಾಲು ಮರದ ತಿಮ್ಮಕನವರಿಂದ ಮುಖ್ಯಮಂತ್ರಿಯವರಿಗೆ ಮನವಿ

ಹಾಸನ ಜೂ.11:- ಪದ್ಮಶ್ರೀ ಪ್ರಶಸ್ತಿ ಪುರಸ್ಕçತರಾಗಿರುವ ನಾಡೋಜ ಡಾ|| ಸಾಲು ಮರದ ತಿಮ್ಮಕ್ಕ ಅವರು ಇಂದು ಹಾಸನ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಜೀವನ ನಿರ್ವಹಣೆಗೆ ವಾಸಕ್ಕೆ ಯೋಗ್ಯವಾದ ಮನೆ ಹಾಗೂ ಜಮೀನು ಮಂಜೂರಾತಿ ಮಾಡಿ ಕೋಡುವಂತೆ ಮನವಿ ಮಾಡಿದರು. 



 ಸಾಲು ಮರದ ತಿಮ್ಮಕ್ಕ ಅವರ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಂಡ ಮುಖ್ಯಮಂತ್ರಿಯವರು ಶೀಘ್ರವಾಗಿ ಮನವಿ ಪರಿಗಣಿಸಿ ಎಲ್ಲಾ ರೀತಿಯ ನೆರವು ಒದಗಿಸಲಾಗುವುದು ಎಂದು ಹೇಳಿದರು.

Post a Comment

Previous Post Next Post