ಭೈರನಾಯಕನಹಳ್ಳಿಯಲ್ಲಿ ನಾಯಿ ಹೊತ್ತೊಯ್ದ ಚಿರತೆ

ಅರಸೀಕೆರೆ: ಆಹಾರವನ್ನರಸಿ ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ಮನೆಗೆ ನುಗ್ಗಿ ಸಾಕು ನಾಯಿ ಹೊತ್ತೊಯ್ದಿರುವ ಘಟನೆ  ತಾಲೂಕಿನ ಬೈರನಾಯಕನಹಳ್ಳಿ ಗ್ರಾಮದಿಂದ ವರದಿಯಾಗಿದೆ.

ಮಧ್ಯರಾತ್ರಿ 2.38ಕ್ಕೆ ಬಂದ ಚಿರತೆ ಮಲ್ಲೇಗೌಡ ಅವರ ಮನೆಯ ಬಳಿ ಬಂದ ಚಿರತೆ ಸುತ್ತಮುತ್ತ ಒಂದು ಸುತ್ತು ಹಾಕಿದೆ.
ಬಳಿಕ ಮನೆಯಲ್ಲಿ ನಾಯಿ ಇರುವುದನ್ನು ಗಮನಿಸಿದ ಚಿರತೆ, ಒಳಗೆ ನೆಗೆದು ನಾಯಿಯ ಕುತ್ತಿಗೆ ಬಾಯಿ ಹಾಕಿ ಎಳೆದೊಯ್ದಿದೆ. ಮುಂಜಾನೆ ನಾಯಿ ಕಾಣದಿರುವ ಹಿನ್ನೆಲೆಯಲ್ಲಿ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. 

ಈ ಘಟನೆಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಕೂಡಲೇ  ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.

Post a Comment

Previous Post Next Post