ಉಳ್ಳವರ ಚಿತ್ತ ಹಸಿದವರ ಕಡೆ ಇರಲಿ ಬಿಜೆಪಿ ಮುಖಂಡ ಅಣತಿ ಆನಂದ್.

ಚನ್ನರಾಯಪಟ್ಟಣ: ನಮ್ಮಲ್ಲಿ ಇರುವುದನ್ನು ಹಸಿದವರಿಗೆ ನೀಡುವುದರಿಂದ ನಮ್ಮಗಳಿಗೆ ಮನಶಾಂತಿ ದೊರೆಯುತ್ತದೆ. ಉಳ್ಳವರ ಚಿತ್ತ ಹಸಿದವರ ಕಡೆ ಇರಲಿ ಎಂದು ಬಿಜೆಪಿ ಮುಖಂಡ ಅಣತಿ ಆನಂದ್ ನುಡಿದರು.
ಇಂದು ಪತ್ರಕರ್ತರ ಭವನದಲ್ಲಿ ತಾಲ್ಲೂಕು ಮುದ್ರಣಗಾರರ ಸಂಘದ ಸದಸ್ಯರಿಗೆ ದಿನಸಿ ಪದಾರ್ಥಗಳ ಕಿಟ್ ನೀಡಿ ಮಾತನಾಡಿ ಕೋರೋನ ಸಂದರ್ಭದಲ್ಲಿ ಯಾವುದೇ ಶುಭ ಸಮಾರಂಭಗಳು ನಡೆಯದೇ ಇರುವುದರಿಂದ ಮುದ್ರಣ ಕ್ಷೇತ್ರದ‌ ಮಾಲೀಕರು, ‌ಕೆಲಸಗಾರರ ಸ್ಥಿತಿ ದುಸ್ಥಿತಿಗೆ ತಲುಪಿದೆ. ಮುದ್ರಣ ಕ್ಷೇತ್ರಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದ್ದು ಕುಟುಂಬದ ನಿರ್ವಹಣೆ ಮಾಡಲು ಕಷ್ಟವಾಗಿದೆ. ಕಾರ್ಮಿಕರಿಗೆ ಕೆಲಸವಿಲ್ಲದೆ ಅಂಗಡಿಗಳು ಬಂದ್ ಆಗಿರುವ ಸಂದರ್ಭದಲ್ಲಿ ಸಂಕಷ್ಟ ಅರಿತು ಇಂದು ಆಹಾರ ಕಿಟ್ ವಿತರಣೆ ಮಾಡಲಾಗುತ್ತಿದೆ.


‌ಕಿಟ್ ನೀಡಿರುವುದರಿಂದ ನಿಮ್ಮ ಹಸಿವು ನೀಗಿಸಲು ಸಾಧ್ಯವಿಲ್ಲವೆಂಬುದು ಗೊತ್ತಿದೆ. ನಿಮ್ಮ ತುಂಬಾ ಸಮಸ್ಯೆ ಎದುರಾದರೇ ನೇರವಾಗಿ ಬೇಟಿ ಮಾಡಿ ಸಮಸ್ಯೆ ತಿಳಿದರೇ ನನ್ನ ಕೈಯಲ್ಲಿ ಆದಷ್ಟು ಸಹಾಯ ಮಾಡಲು ಸದ ಸಿದ್ಧನಿದ್ದೇನೆ. ಕ್ಷೇತ್ರದ ಜನತೆಯ ಸೇವೆ ಮಾಡಲು ನಾವು ಸನ್ನದ್ಧರಾಗಿದ್ದೇವೆ.

ಮುಂದಿನ ದಿನಗಳಲ್ಲಿ ಛಾಯಾಗ್ರಾಹಕರ ಸಂಘ ಮತ್ತು ಆಟೋ ಚಾಲಕರಿಗೆ ಕಿಟ್ ವಿತರಣೆ ಮಾಡಲಾಗುವುದು ಎಂದರು.
ಜಿಲ್ಲಾ ಮುದ್ರಣಕಾರರ ಸಂಘದ ಮಾಜಿ ಉಪಾಧ್ಯಕ್ಷ ಪುಟ್ಟಣ್ಣ ಮಾತನಾಡಿ ಮುದ್ರಣ ಕ್ಷೇತ್ರದಲ್ಲಿ ಮಾಲೀಕರಿಗೆ ಹಾಗೂ ಕಾರ್ಮಿಕರಿಗೆ ಜೀವನ ನಡೆಸಲು ಕರೋನ ಸಂದರ್ಭದಲ್ಲಿ ಕಷ್ಟಕರವಾಗಿದ್ದು ಇಂತಹ ಸಂದರ್ಭದಲ್ಲಿ ಆನಂದ್‌ರವರು ತಮ್ಮ ಸಹಾಯ ಹಸ್ತ ಚಾಚಿದ್ದು, ನಮ್ಮಗಳ ಕಷ್ಟದ ದಿನಗಳನ್ನು ಅರಿತು ನಮ್ಮ ಹಸಿವು ನೀಗಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಇವರಿಗೆ ಸಂಘದ ಪರವಾಗಿ ಅಭಿನಂದನೆಗಳು ಎಂದರು.

    ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡ ನಂಜುಂಡಮೈಮ್, ಶ್ರೀನಿವಾಸ್, ರವಿ, ಜಗದೀಶ್, ತಾ. ಮು.ಸಂಘದ  ಅಧ್ಯಕ್ಷ ಚಂದ್ರು, ಕಾರ್ಯದರ್ಶಿ ಮುಬಷೀರ್, ರಾಘವೇಂದ್ರ ಇದ್ದರು.

Post a Comment

Previous Post Next Post