ಇಂದು ರಾತ್ರಿಯಿಂದಲೇ ವೀಕೆಂಡ್ ಕರ್ಫ್ಯೂ ಜಾರಿ: ಎರಡು ದಿನ ಕರುನಾಡು ಲಾಕ್ ಹೇಗಿರಲಿದೆ..?

 ಬೆಂಗಳೂರು: ರಾಜ್ಯದಲ್ಲಿ ಇಂದು ರಾತ್ರಿ 7 ಗಂಟೆಯಿಂದಲೇ ವೀಕೆಂಡ್ ಕರ್ಫ್ಯೂ ಪ್ರಾರಂಭವಾಗಲಿದ್ದು ಸೋಮವಾರ ಬೆಳಗ್ಗೆ 5ರವರೆಗೂ ಜಾರಿಯಲ್ಲಿರಲಿದೆ. ಹೀಗಾಗಿ ಎರಡು ದಿನ ಬೆಂಗಳೂರು ಸೇರಿದಂತೆ ಇಡೀ ಕರುನಾಡು ಕಂಪ್ಲೀಟ್ ಲಾಕ್ ಆಗಲಿದೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದು ಅಗತ್ಯ ವಸ್ತುಗಳ ಖರೀದಿಗೆ ಟೈಮ್ ಫಿಕ್ಸ್ ಮಾಡಿದೆ. ಜನರು ಏನಾದ್ರೂ ಖರೀದಿ ಮಾಡೋದಿದ್ರೆ ಬೆಳಿಗ್ಗೆ. 6 ರಿಂದ ಬೆಳಿಗ್ಗೆ 10 ವರೆಗೆ ಅಷ್ಟೇ ಅವಕಾಶ ನೀಡಲಾಗಿದೆ.

ವೀಕೆಂಡ್​ ಲಾಕ್​ಡೌನ್ ಹೇಗಿರಲಿದೆ..?

– ವೀಕೆಂಡ್ ಮೋಜು ಮಸ್ತಿಗೆ ಬ್ರೇಕ್

– ಬೆಂಗಳೂರಿನ ಗಲ್ಲಿ ಗಲ್ಲಿಯೂ ಇಂದು ರಾತ್ರಿ 7 ಗಂಟೆಯಿಂದಲೇ ಲಾಕ್

– ಇಂದು ರಾತ್ರಿ 7 ರಿಂದ ಸೋಮವಾರ 5ರವರೆಗೆ ಅನಗತ್ಯವಾಗಿ ಯಾರೂ ಓಡಾಡುವಂತಿಲ್ಲ

– ಅನಗತ್ಯವಾಗಿ ಓಡಾಟ ನಡೆಸಿದ್ರೆ ಕಠಿಣ ಕ್ರಮ

– ವಾಹನ ತೆಗೆದುಕೊಂಡು ಅನಗತ್ಯವಾಗಿ ಹೊರಗಡೆ ಬಂದರೆ ವಾಹನ ಸೀಜ್ ಆಗೋದು ಫಿಕ್ಸ್

– ಇಂದು ರಾತ್ರಿ 7 ರಿಂದ ಸೋಮವಾರ ಬೆಳಗ್ಗೆ 5 ರವರೆಗೆ ಕಠಿಣ ರೂಲ್ಸ್

– ಬೆಂಗಳೂರಿನ ಎಲ್ಲಾ ಫ್ಲೈಓವರ್ ಗಳಿಗೆ ಬೀಳಲಿದೆ ಬೀಗ

– ಶಾಲೆ, ಕಾಲೇಜುಗಳು ಸಂಪೂರ್ಣ ಬಂದ್, ಆನ್ ಲೈನ್ ಕ್ಲಾಸ್ ಗಳಿಗೆ ಅವಕಾಶ

– ದಿನಸಿ ಅಂಗಡಿಗಳು, ಹಣ್ಣು ತರಕಾರಿ, ಹಾಲಿನ ಡೇರಿ, ಮೀನು, ಮಾಂಸದ ಅಂಗಡಿ ತೆರೆಯಲು ಅನುಮತಿ

– ಶಾಪಿಂಗ್ ಮಾಲ್, ಸಿನಿಮಾ ಹಾಲ್ ಗಳು, ಜಿಮ್, ಯೋಗಾ ಸೆಂಟರ್, ಸ್ವಿಮ್ಮಿಂಗ್ ಪೂಲ್, ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಕಂಪ್ಲೀಟ್ ಬಂದ್

– ಬಾರ್, ರೆಸ್ಟೋರೆಂಟ್​ನಲ್ಲಿ ಮದ್ಯ ಸೇವನೆಗೆ ಅವಕಾಶವಿಲ್ಲ.

– ಮದ್ಯ ಪಾರ್ಸೆಲ್​ಗೆ ಮಾತ್ರ ಅವಕಾಶ

– ಸಾರ್ವಜನಿಕ, ರಾಜಕೀಯ ಸೇರಿ ಎಲ್ಲಾ ಕಾರ್ಯಕ್ರಮಗಳಿಗೆ ನಿರ್ಬಂಧ

– ಸಲೂನ್, ಬ್ಯೂಟಿಪಾರ್ಲರ್ ಗಳು ಕಂಪ್ಲೀಟ್ ಬಂದ್

– ಕಟ್ಟಡ ನಿರ್ಮಾಣ ಕಾಮಗಾರಿ, ಕಾರ್ಖಾನೆಗಳಲ್ಲಿ ಕೆಲಸ ಮಾಡಲು ಅನುಮತಿ

– ಬ್ಯಾಂಕ್, ಇನ್ಶೂರೆನ್ಸ್ ಸಂಸ್ಥೆ, ಮಾಧ್ಯಮಕ್ಕೆ ಅನುಮತಿ

– ಐಟಿ ಸಂಸ್ಥೆಗಳ ಅಗತ್ಯ ಸಿಬ್ಬಂದಿ ಹೊರತುಪಡಿಸಿ ಬೇರೆ ಸಿಬ್ಬಂದಿಗೆ ವರ್ಕ್ ಫ್ರಮ್ ಹೋಮ್

– ಸರ್ಕಾರಿ ಕಚೇರಿಗಳಲ್ಲಿ ಶೇ. 50ರಷ್ಟು ಸಿಬ್ಬಂದಿ ಕೆಲಸಕ್ಕೆ ಅನುಮತಿ

– ಮೆಟ್ರೋ, ಕೆಎಸ್ಆರ್​ಟಿಸಿ, ಬಿಎಂಟಿಸಿ ಸೇರಿ ಎಲ್ಲಾ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಂದ್

– ಆಟೋ, ಟ್ಯಾಕ್ಸಿ ಕಂಪ್ಲೀಟ್ ಬಂದ್

– ಇ-ಕಾಮರ್ಸ್ ವೇದಿಕೆಯಲ್ಲಿ ಡೆಲಿವರಿ ಮಾಡಲು ಅನುಮತಿ

– ದೇವಸ್ಥಾನ, ಚರ್ಚ್, ಮಸೀದಿ ಸೇರಿ ಎಲ್ಲಾ ಧಾರ್ಮಿಕ ಸ್ಥಳಗಳು ಬಂದ್

– ಅಂತಾರಾಜ್ಯ, ಜಿಲ್ಲೆಗಳ ನಡುವೆ ಸಂಚಾರಕ್ಕೆ ಬಂದ್

– ಅಂತ್ಯಕ್ರಿಯೆಗೆ ಕೇವಲ 20 ಜನರಿಗೆ ಅವಕಾಶ

– ಅಗತ್ಯ ವಸ್ತುಗಳ ಖರೀದಿ ಬೆಳಗ್ಗೆ 6 ರಿಂದ ಬೆಳಗ್ಗೆ 10 ವರಿಗೆ ಮಾತ್ರ ಅವಕಾಶ

– ಆಸ್ಪತ್ರೆ ಮೆಡಿಕಲ್ ಆ್ಯಂಬುಲೆನ್ಸ್ ಸೇವೆ ಎಂದಿನಂತೆ ಸೇವೆ

Post a Comment

Previous Post Next Post