ಕೊರೊನಾ ವೈರಸ್ ಜಾಗೃತಿ ಅಭಿಯಾನ, ಟಾಸ್ಕ್ ಪೊರ್ಸ್ ಸಭೆ

ರಾಮನಾಥಪುರ- ನಮ್ಮ ಜಿಲ್ಲೆಯಲ್ಲಿ ಲಾಕ್ ಡೌನ್ ಜೂ. ೨೧ ರ ವರೆಗೆ ಸರಕಾರದ ಆದೇಶದಂತೆ ಮುಂದುವರೆದಿದ್ದು ಅಂಗಡಿ ಹಾಗೂ ಇತರೆ ವ್ಯಾಪಾರಸ್ಥರು ಸರ್ಕಾರದ ಆದೇಶದಂತೆ ನಡೆದುಕೊಳ್ಳುವಂತೆ ಉಪತಹಶೀಲ್ದಾರ್ ಸಿ.ಸ್ವಾಮಿ ತಿಳಿಸಿದರು. 


ರಾಮನಾಥಪುರದ ಗ್ರಾಮಪಂಚಾಯಿತಿ ಆವರಣದಲ್ಲಿ ಟಾಸ್ಕ್ ಪೊರ್ಸ್ ಸಭೆ ಹಾಗೂ ಕೊರೊನಾ ವೈರಸ್ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗ್ರಾಮಪಂಚಾಯಿತಿ ವತಿಯಿಂದ ಪ್ರಚಾರ ಮಾಡಿ ತಿಳಿಸಬೇಕು ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪಾಸಿಟೀವ್ ಬಂದAತ ವ್ಯಕ್ತಿಗಳನ್ನು ವೈದ್ಯರು ಹಾಗೂ ಗ್ರಾಮಪಂಚಾಯಿತಿಯವರ ಸಹಕಾರದಿಂದ ಕೇರ್ ಸೆಂಟರ್‌ಗೆ ಕಳುಹಿಸಿಕೊಡಬೇಕೆಂದು ಹೇಳಿದರು. 

ರಾಮನಥಪುರ ಪ್ರಾಥರ್ಮಿಕ ಅರೋಗ್ಯ ಕೇಂದ್ರ ವೈದ್ಯಾಕಾರಿ ಡಾ. ದಿವ್ಯ ಮಾತನಾಡಿ ಎಲ್ಲಾ ಆಶಾಕಾರ್ಯಕರ್ತೆಯರೊಡನೆ ಆ ಗ್ರಾಮಕ್ಕೆ ಸಂಬAದಿಸಿದ ಅಂಗನವಾಡಿ ಕಾರ್ಯಕರ್ತೆಯರು ಕಡ್ಡಾಯವಾಗಿ ಜೊತೆಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಅಕ್ಷೆ ಎ.ಜೆ. ಹೇಮಲತಾ, ಸದಸ್ಯರಾದ ಸುನಿಲ್, ಸಿದ್ದಯ್ಯ ಗ್ರಾಮಪಂಚಾಯಿತಿ ಕಾರ್ಯದರ್ಶಿ ನಿಂಗಣ,್ಣ ಆರೋಗ್ಯನಿರೀಕ್ಷಕ ಜಿ.ಪಿ. ಲೋಕೇಶ್,  ಗ್ರಾಮಲೆಕ್ಕಾಕಾರಿ ಕೆ.ಜೆ.ಧರ್ಮೇಶ್  ಹಾಗೂ ಸಿಬ್ಬಂದಿಗಳು ಹಾಜರಿದ್ದರು.


Post a Comment

Previous Post Next Post