ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಕೇಸ್ ಇಳಿಮುಖದ ಬೆನ್ನಲ್ಲೇ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ರಾಜ್ಯದ ಎಲ್ಲಾ ರಿಜಿಸ್ಟರ್ ಕಚೇರಿಗಳನ್ನ ತೆರೆಯಲು ಅನುಮತಿ ನೀಡಿದೆ.
ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾತ್ ಪ್ರಸಾದ್ ಆದೇಶ ಹೊರಡಿಸಿದ್ದು ಕೊರೊನಾ ನಿಬಂಧನೆಗಳನ್ನು ಅನುಸರಿಸಿ ರಿಜಿಸ್ಟ್ರಾರ್ ಕಚೇರಿಗಳನ್ನ ಓಪನ್ ಮಾಡುವಂತೆ ಅನುಮತಿ ನೀಡಲಾಗಿದೆ. ರಾಜ್ಯದ ಎಲ್ಲಾ ಜಿಲ್ಲಾ ರಿಜಿಸ್ಟ್ರರ್ ಹಾಗೂ ಉಪ ನೋಂದಣಿ ಕಚೇರಿಗಳ ಓಪನ್ಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ.