ವ್ಯಾಪಾರಿಗಳ ಸಂಘದ ವತಿಯಿಂದ ಸ್ಥಳೀಯ ಔಷಧಿ ವ್ಯಾಪಾರಿಗಳು ಕೋವಿಡ್ ರೋಗಿಗಳಿಗಾಗಿ ಉಚಿತ ಮೆಡಿಕಲ್ ಕಿಟ್‌ಗಳನ್ನು ವಿತರ‍ಣೆ.

 ಕೊಣನೂರು : ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಾಲೂಕು ಔಷಧಿ ವ್ಯಾಪಾರಿಗಳ ಸಂಘದ ವತಿಯಿಂದ ಸ್ಥಳೀಯ ಔಷಧಿ ವ್ಯಾಪಾರಿಗಳು ಕೋವಿಡ್ ರೋಗಿಗಳಿಗಾಗಿ ಉಚಿತ ಮೆಡಿಕಲ್ ಕಿಟ್‌ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ತಾಲೂಕು ಔಷಧಿ ವ್ಯಾಪಾರಿಗಳ ಸಂಘದ ಸಹಕಾರ್ಯದರ್ಶಿ ಬಿ. ಪ್ರವೀಣ್ ಕುಮಾರ್ ಮಾತನಾಡಿ, ಕೋವಿಡ್-19 ಬಗ್ಗೆ ಭಯಬೇಡ ಆದರೆ ಎಚ್ಚರಿಕೆ ವಹಿಸಬೇಕು. ಪ್ರತಿಯೊಬ್ಬರೂ ಕೊರೊನಾ ರೋಗದ ಬಗ್ಗೆ ನಿರ್ಲಕ್ಷ ಭಾವನೆ ತೋರದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೊರೊನಾ ಗುಣಲಕ್ಷಣಗಳು ಕಂಡುಬAದಲ್ಲಿ ಭಯದಿಂದ ಅದನ್ನು ಗೌಪ್ಯವಾಗಿ ಇಡದೆ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.

ತಾಲೂಕು ಔಷಧಿ ವ್ಯಾಪಾರಿಗಳ ಸಂಘದ ಖಜಾಂಚಿ ಬಿ.ಎಸ್. ಸುಬ್ರಹ್ಮಣ್ಯ ಮಾತನಾಡಿ, ವ್ಯಾಪಕವಾಗಿ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಹರಡುತ್ತಿದೆ. ಪ್ರತಿಯೊಬ್ಬರೂ ಮುಖಗವಸು ಧರಿಸಬೇಕು, ಸ್ಯಾನಿಟೈಸರ್ ಬಳಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಜನರು ಯಾವುದೇ ಕಾಯಿಲೆ ಬಂದರೂ ಆತ್ಮಸ್ಥೆöÊರ್ಯ ಕಳೆದುಕೊಳ್ಳುತ್ತಾ ಭಯಪಟ್ಟು ತಮ್ಮಷ್ಟಕ್ಕೆ ತಾವೇ ಉಸಿರುಗಟ್ಟುವ ವಾತಾವರಣ ನಿರ್ಮಿಸಿಕೊಳ್ಳುವ ಮೂಲಕ ರೋಗನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ ಇದರಿಂದ ಮೊದಲು ಹೊರಬರಬೇಕು ಎಂದರು. 

ಇದೇ ಸಂದರ್ಭದಲ್ಲಿ ಕೊಣನೂರಿನ ಔಷಧಿ ವ್ಯಾಪಾರಿಗಳು 500 ರೂ. ಬೆಲೆ ಬಾಳುವ 100 ಕಿಟ್‌ಗಳನ್ನು ಸೋಂಕಿತರಿಗೆ ವಿತರಿಸಿದರು.

ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕ ಎಂ.ಆರ್. ಆನಂದಗೌಡ, ಅರಕಲಗೂಡು ತಾಲೂಕು ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಕೆ.ವಿ. ರವಿಕುಮಾರ್, ಕಾರ್ಯದರ್ಶಿ ಅನಿಲ್, ಸಹಕಾರ್ಯದರ್ಶಿ ಬಿ.ಪ್ರವೀಣ್ ಕುಮಾರ್, ಖಜಾಂಚಿ ಸುಬ್ರಹ್ಮಣ್ಯ. ಸಂಘದ ಸದಸ್ಯರುಗಳಾದ ಮಹೇಶ್, ಶ್ರೀನಿವಾಸ್, ದಿನೇಶ್, ಮಂಜುನಾಥ್, ಸವಿತಾ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು.

Post a Comment

Previous Post Next Post